Indo-French Campus in Karnataka: ಶಿಕ್ಷಣ ಕ್ಷೇತ್ರದಲ್ಲಿ ಕರ್ನಾಟಕದ ಮತ್ತೊಂದು ದಿಟ್ಟ ಹೆಜ್ಜೆ

By Contributor Asianet  |  First Published Dec 8, 2021, 10:25 PM IST

* ರಾಜ್ಯದಲ್ಲಿ ಶೈಕ್ಷಣಿಕ ಕ್ಯಾಂಪಸ್ ಆರಂಭಕ್ಕೆ ಫ್ರಾನ್ಸ್ ಒಲವು: ಅಶ್ವತ್ಥನಾರಾಯಣ 
* ಫ್ರಾನ್ಸ್ ಸರ್ಕಾರ ರಾಜ್ಯದಲ್ಲಿ ಇಂಡೋ-ಫ್ರೆಂಚ್ ಶಿಕ್ಷಣ ಸಂಸ್ಥೆಯನ್ನು ಪ್ರಾರಂಭಿಸಲು ಉತ್ಸುಕವಾಗಿದೆ
* ಸಂಶೋಧನಾ ಸಂಸ್ಥೆ ಮತ್ತು ಇನ್ಕ್ಯುಬೇಟರುಗಳನ್ನು ಸ್ಥಾಪಿಸಲು ಒತ್ತು ಕೊಡಲಾಗುವುದು


ಬೆಂಗಳೂರು (ಡಿ. 08) ಫ್ರಾನ್ಸ್(France) ಸರ್ಕಾರ ರಾಜ್ಯದಲ್ಲಿ(Karnataka) ಇಂಡೋ-ಫ್ರೆಂಚ್ ಶಿಕ್ಷಣ(Indo-French Campus)  ಸಂಸ್ಥೆಯನ್ನು ಪ್ರಾರಂಭಿಸಲು ಉತ್ಸುಕವಾಗಿದ್ದು, ಆರೋಗ್ಯ, ಇಂಡಸ್ಟ್ರಿ 4.0 ಮತ್ತು ಪರಿಸರ ವಿಜ್ಞಾನಕ್ಕೆ ಸಂಬಂಧಿಸಿದ ಅವಳಿ  ಪದವಿ ನೀಡಲಿವೆ ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ (Dr. CN Ashwath Narayan)ಹೇಳಿದ್ದಾರೆ. 

ಭಾರತದಲ್ಲಿ ಫ್ರಾನ್ಸ್ ದೇಶದ ನೂತನ ಕಾನ್ಸುಲ್ ಜನರಲ್ ಆಗಿ ನೇಮಕಗೊಂಡಿರುವ ಥಿಯರಿ ಬರ್ತೆಲೋಟ್ ಅವರು ಬುಧವಾರ ತಮ್ಮನ್ನು ಭೇಟಿಯಾದಾಗ ಈ ಸಂಬಂಧ ಅವರು ಈ ಕುರಿತು ಮಾತುಕತೆ ನಡೆಸಿದರು. ಈ ಕ್ಯಾಂಪಸ್ ಆರಂಭಿಸಲು ಬೆಂಗಳೂರು ನಗರ ವಿಶ್ವವಿದ್ಯಾಲಯವು ಸೂಕ್ತವಾಗಿದೆ ಎಂದು ಫ್ರೆಂಚ್ ನಿಯೋಗಕ್ಕೆ ತಿಳಿಸಲಾಗಿದೆ ಎಂದರು. 

Latest Videos

undefined

ನಂತರ ಮಾತನಾಡಿದ ಅವರು, ಆರೋಗ್ಯ ಕ್ಷೇತ್ರದಲ್ಲಿ ಜೈವಿಕ ತಂತ್ರಜ್ಞಾನ, ಕೃತಕ ಬುದ್ಧಿಮತ್ತೆ, ಔಷಧಗಳು ಮತ್ತು ಆರೋಗ್ಯ ಉತ್ಪನ್ನಗಳು, ಔಷಧ ವಿಜ್ಞಾನ ನಿರ್ವಹಣೆ, ಸುಧಾರಿತ ಫಾರ್ಮಸುಟಿಕಲ್ ಎಂಜಿನಿಯರಿಂಗ್ ಕ್ಷೇತ್ರಗಳಲ್ಲಿ, ಇಂಡಸ್ಟ್ರಿ 4.0 ಅಡಿಯಲ್ಲಿ ಸೈಬರ್ ಸೆಕ್ಯುರಿಟಿ, ಡೇಟಾ ಅನಲಿಟಿಕ್ಸ್, ಮಶೀನ್ ಲರ್ನಿಂಗ್ ಮುಂತಾದ ವಿಭಾಗಗಳಲ್ಲಿ ಮತ್ತು ಪರಿಸರ ಶಾಸ್ತ್ರದಲ್ಲಿ ಜೀವವೈವಿಧ್ಯ, ಹವಾಮಾನ ಬದಲಾವಣೆ, ಪರಿಸರಸ್ನೇಹಿ ಆರ್ಥಿಕತೆ ವಿಭಾಗಗಳಲ್ಲಿ ಉದ್ದೇಶಿತ ಕ್ಯಾಂಪಸ್ಸಿನಲ್ಲಿ ಅವಳಿ ಪದವಿ (ಇಂಡೋ-ಫ್ರೆಂಚ್ ಡಿಗ್ರಿ)ಗಳನ್ನು ನೀಡಲಾಗುವುದು ಎಂದು ವಿವರಿಸಿದರು. 

ನೂತನ ಶಿಕ್ಷಣ ನೀತಿಯಿಂದ ಉದ್ಯೋಗದಾತರ ಸೃಷ್ಟಿ: ಮೋದಿ

ಮುಂದಿನ ದಿನಗಳಲ್ಲಿ ಅಸ್ತಿತ್ವಕ್ಕೆ ಬರಲಿರುವ ಇಂಡೋ-ಫ್ರೆಂಚ್ ಸಹಯೋಗದ ಕ್ಯಾಂಪಸ್ಸಿನಲ್ಲಿ ಪಠ್ಯಕ್ರಮ ಇತ್ಯಾದಿಗಳನ್ನು ಕೈಗಾರಿಕೆಗಳಿಗೆ ಇರುವ ಅಗತ್ಯದಂತೆ ರೂಪಿಸಲಾಗುವುದು. ಜತೆಗೆ ಸಂಶೋಧನಾ ಸಂಸ್ಥೆ ಮತ್ತು ಇನ್ಕ್ಯುಬೇಟರುಗಳನ್ನು ಸ್ಥಾಪಿಸಲು ಒತ್ತು ಕೊಡಲಾಗುವುದು. ಈ ಮೂಲಕ ವಿದ್ಯಾರ್ಥಿಗಳಿಗೆ ಜಾಗತಿಕ ಮಟ್ಟದ ಕೌಶಲ್ಯಗಳನ್ನು ಒದಗಿಸಲಾಗುವುದು ಎಂದು ಅವರು ಮಾಹಿತಿ ನೀಡಿದರು. 

ನೂತನ ರಾಷ್ಟ್ರೀಯ ಶಿಕ್ಷಣ ನೀತಿಗೆ ಪೂರಕವಾಗಿ ಶಿಕ್ಷಣದಲ್ಲಿ ಜಾಗತಿಕ ಗುಣಮಟ್ಟಕ್ಕೆ ಆದ್ಯತೆ ಕೊಡಲಾಗುತ್ತಿದೆ. ವಿದ್ಯಾರ್ಥಿಗಳು ಕೇವಲ ಪದವೀಧರರಾದರೆ ಸಾಲದು, ಅವರು ಸಮಕಾಲೀನ ವೃತ್ತಿಗಳಿಗೆ ಬೇಕಾದ ಅತ್ಯಾಧುನಿಕ ಕೌಶಲ್ಯಗಳನ್ನು ಕೂಡ ಕಲಿಸಲಾಗುವುದು. ಈ ಮೂಲಕ ನಿರುದ್ಯೋಗ ಸಮಸ್ಯೆಯನ್ನು ನಿವಾರಣೆ ಮಾಡುವತ್ತ ದಾಪುಗಾಲಿಡಲಾಗುತ್ತಿದೆ ಎಂದು ಅಶ್ವತ್ಥನಾರಾಯಣ ತಿಳಿಸಿದರು. 

ಉದ್ಯೋಗದಾತ ಕಂಪನಿಗಳ ಅಗತ್ಯ ಮತ್ತು ಬೇಡಿಕೆಯನ್ನು ಬೆರಳತುದಿಯಲ್ಲಿ ತಿಳಿದುಕೊಳ್ಳಲೆಂದೇ ಕೈಗಾರಿಕೆಗಳನ್ನು ಶಿಕ್ಷಣ ಸಂಸ್ಥೆಗಳೊಂದಿಗೆ ಬೆಸೆಯಲಾಗುತ್ತಿದೆ. ಇನ್ನುಮುಂದೆ ಶೈಕ್ಷಣಿಕ ವರ್ಷವಿಡೀ ಈ ಕಂಪನಿಗಳು ಶಿಕ್ಷಣ ಸಂಸ್ಥೆಗಳೊಂದಿಗೆ ಸಕ್ರಿಯ ಸಂಬಂಧ ಹೊಂದಿರಲಿದೆ ಎಂದು ಅವರು ನುಡಿದರು.

ಮೊದಲ ರಾಜ್ಯ ಕರ್ನಾಟಕ: ರಾಷ್ಟ್ರೀಯ ಶಿಕ್ಷಣ ನೀತಿಯನನ್ನು ದೇಶದಲ್ಲಿಯೇ ಮೊದಲು  ಜಾರಿಗೆ ತಂದ ರಾಜ್ಯ ಕರ್ನಾಟಕ. 

ನಿರ್ದಿಷ್ಟ ಗುರಿ ಹಾಗೂ ಸ್ಪಷ್ಟ ಕಾರ್ಯಸೂಚಿಯ ಮೂಲಕ ಸರಕಾರ ಎಲ್ಲ ಕಾರ್ಯಕ್ರಮಗಳನ್ನು ಹಾಕಿಕೊಂಡಿದೆ.. ಇಡೀ ದೇಶದಲ್ಲೇ ಈ ನೀತಿಯನ್ನು ಮೊಟ್ಟ ಮೊದಲಿಗೆ ಜಾರಿ ಮಾಡಿದ ರಾಜ್ಯವಾಗಿ ಕರ್ನಾಟಕ ಹೊರಹೊಮ್ಮಲಿದೆ ಎಂದು ಸಚಿವರು ತಿಳಿಸಿದ್ದರು.

'ಕೇಂದ್ರದ ಶಿಕ್ಷಣ ನೀತಿಯಿಂದ ತಾಂತ್ರಿಕ ಶಿಕ್ಷಣದ ದಿಕ್ಕು ಬದಲು'

ಮಕ್ಕಳಿಗೆ ಬೆಳಗಿನ ಹೊತ್ತು ಪೌಷ್ಟಿಕಯುಕ್ತ ಉಪಾಹಾರ ಸೇವನೆಗೆ ಸಿಕ್ಕಿದರೆ ನಂತರ ಇಡೀ ದಿನ ಮಕ್ಕಳು ಕಲಿಕೆಯಲ್ಲಿ ಏಕಾಗ್ರತೆ ಸಾಧಿಸಲು, ಹೆಚ್ಚು ಚಟುವಟಿಕೆಯಿಂದ ಇರಲು ಸಹಕಾರಿಯಾಗುತ್ತದೆ. ಹೀಗಾಗಿ ಮಧ್ಯಾಹ್ನದ ಬಿಸಿಯೂಟದ ಜೊತೆಗೆ ಬೆಳಗಿನ ತಿಂಡಿಯನ್ನು ಕೂಡ ಸೇರಿಸಲು ಚಿಂತನೆ ನೀತಿಯಲ್ಲಿತ್ತು.

ಶಾಲಾ ಶಿಕ್ಷಣ ವ್ಯವಸ್ಥೆಯೊಳಗೆ ಆರೋಗ್ಯಯುತ ಆಹಾರ, ಉತ್ತಮ ತರಬೇತಿ ಪಡೆದ ಸಾಮಾಜಿಕ ಕಾರ್ಯಕರ್ತರು, ಮಾನಸಿಕ ಸಲಹೆ ತಜ್ಞರು ಮತ್ತು ಸಮುದಾಯಗಳ ಪಾಲ್ಗೊಳ್ಳುವಿಕೆ ಮೂಲಕ ಮಕ್ಕಳ ಸರ್ವತೋಮುಖ ಅಭಿವೃದ್ಧಿ ಯೋಜನೆಯ ಪ್ರಮುಖ ಅಂಶ.

 

 

click me!