ಕೆಲವೊಂದು ಪ್ರಶ್ನೆಗಳು ಎಲ್ಲ ಉದ್ಯೋಗ ಸಂದರ್ಶನಗಳಲ್ಲೂ ಇದ್ದೇ ಇರುತ್ತವೆ. ಅವುಗಳಲ್ಲೊಂದು ಟೆಲ್ ಮಿ ಅಬೌಟ್ ಯುವರ್‌ಸೆಲ್ಫ್. ಬಹುತೇಕರಿಗೆ ಈ ಪ್ರಶ್ನೆಗೆ ಉತ್ತರ ನೀಡುವುದೆಂದರೆ ಅಲರ್ಜಿ. ಏಕೆಂದರೆ ಸಂದರ್ಶಕರು ತಮ್ಮಿಂದ ಏನು ಉತ್ತರ ಬಯಸುತ್ತಿದ್ದಾರೆ ಎಂಬ ಗೊಂದಲ ಮೂಡುತ್ತದೆ. ಆದರೆ, ಚೆನ್ನಾಗಿ ತಯಾರಿ ನಡೆಸಿದರೆ ಈ ಒಂದು ಪ್ರಶ್ನೆಯ ಉತ್ತರವೇ ಸಂದರ್ಶನ ಜಯಿಸಲು ಸಹಕಾರಿ.
ನೀವು ಯಾವುದೇ ಫೀಲ್ಡ್‌ನ ಉದ್ಯೋಗ ಸಂದರ್ಶನಕ್ಕೆ ಹೋಗಿ. ನಿಮ್ಮ ಬಗ್ಗೆ ಹೇಳಿ ಎಂಬ ಪ್ರಶ್ನೆ ಬಹುತೇಕ ಇದ್ದೇ ಇರುತ್ತದೆ. ಮಾತು ಆರಂಭಿಸಲು ಸಹಾಯವಾಗಲೆಂದೋ, ಓಘ ಸಿಗಲೆಂದು ಮಾತ್ರ ಈ ಪ್ರಶ್ನೆ ಕೇಳುವುದಲ್ಲ, ಇದಕ್ಕೆ ನೀವು ಚೆನ್ನಾಗಿ ಉತ್ತರಿಸಿದರೆ ಬೆಸ್ಟ್ ಆದ ಫಸ್ಟ್ ಇಂಪ್ರೆಶನ್ ಹುಟ್ಟು ಹಾಕಬಹುದು. ಇದರಿಂದ ಸಂದರ್ಶನದ ಉಳಿದ ಭಾಗ ಸುಲಭವಾಗುತ್ತದೆ. ನೀವು ಈ ಪ್ರಶ್ನೆಗೆ ಸ್ಮಾರ್ಟ್ ಆಗಿ ಹೇಗೆ ಉತ್ತರಿಸಬಹುದು ಎಂಬ ಸಲಹೆಗಳು ಇಲ್ಲಿವೆ.
ಹೊಸ ಕೆಲಸದ ಕೆಆರ್‌ಎ ಗಮನದಲ್ಲಿರಲಿ
undefined
ನಿಮ್ಮ ಹೊಸ ಉದ್ಯೋಗದ ಪಾತ್ರ ಹಾಗೂ ಜವಾಬ್ದಾರಿಗಳನ್ನು ಮನಸ್ಸಿನಲ್ಲಿಟ್ಟುಕೊಂಡು ಉತ್ತರವನ್ನು ಹೆಣೆಯಲು ಆರಂಭಿಸಿ. ನೀವು ಈಗ ಉದ್ಯೋಗ ಮಾಡುತ್ತಿರುವ ಕೆಲಸದ ಕುರಿತು ಹೇಳುತ್ತಲೇ ಅದಕ್ಕೂ ಹೊಸ ಉದ್ಯೋಗದ ಕೀ ರೆಸ್ಪಾನ್ಸಿಬಲಿಟಿ ಏರಿಯಾಗೂ ಸಂಬಂಧ ಹೆಣೆಯಿರಿ. ನಿಮ್ಮ ಮಾತಿನಲ್ಲಿ ಯಾವುದರ ಮೇಲೆ ಸಂದರ್ಶಕರು ಹೆಚ್ಚು ಆಸಕ್ತಿ ವ್ಯಕ್ತಪಡಿಸಿದರು ಎಂಬುದರ ಮೇಲೆ ಗಮನ ಇಟ್ಟುಕೊಂಡು, ಅದರ ಬಗ್ಗೆ ಹೆಚ್ಚಾಗಿ ವಿವರಣೆ ನೀಡಿ. ಅರ್ಧ ಕೆಲಸ ಆದಂತೆಯೇ.
ಬ್ರೇಕ್ ಕೆ ಬಾದ್; ಉದ್ಯೋಗಕ್ಕೆ ಮರಳಲು ಹೀಗೆ ತಯಾರಿ ನಡೆಸಿ!
ನಿಮ್ಮ ಸಾಧನೆಗಳ ಕುರಿತು ಮಾತನಾಡಿ
ನಿಮ್ಮ ಜಾಬ್ ಪ್ರೊಫೈಲ್ ಕುರಿತು ಹೇಳುವಾಗ, ಅದರಲ್ಲಿ ನೀವು ಮಾಡಿದ ಸಾಧನೆಗಳೇನೇನು ಎಂಬುದನ್ನು ವಿವರಿಸಿ. ನಿಮ್ಮ ಗೆಲುವನ್ನು ಹೇಳಿಕೊಳ್ಳುವುದರಲ್ಲಿ ತಪ್ಪಿಲ್ಲ. ಆದರೆ, ಅತಿಯಾಗಿ ಕೊಚ್ಚಿಕೊಳ್ಳುತ್ತಾ ಕೂರಬೇಡಿ. ಯಾವ ಅಸೈನ್‌ಮೆಂಟ್‌ಗಳಲ್ಲಿ ನೀವು ನಾಯಕತ್ವ ಕೌಶಲ್ಯ ಪ್ರದರ್ಶಿಸಿದ್ದೀರಿ, ಸೃಜನಾತ್ಮಕ ಐಡಿಯಾ ಬಳಸಿದ್ದೀರಿ ಎಂಬುದನ್ನು ಹೇಳಿ. ಜೊತೆಗೆ, ಹೊಸ ಉದ್ಯೋಗಕ್ಕೆ ನೀವು ಬೆಸ್ಟ್ ಕ್ಯಾಂಡಿಡೇಟ್ ಅನ್ನಿಸುವಂಥ ಯಾವ ಸಾಧನೆಯನ್ನಾದರೂ ಹೇಳಬಹುದು.
ಅತಿ ವೈಯಕ್ತಿಕ ವಿಷಯಗಳು ಬೇಡ
ಉತ್ತರಗಳು ಚಿಕ್ಕದಾಗಿ ಚೊಕ್ಕದಾಗಿರಲಿ. ನಿಮ್ಮ ರಾಜಕೀಯ ಚಿಂತನೆಗಳು, ಧಾರ್ಮಿಕತೆ, ಜಾತಿ, ಮದುವೆ, ಕುಟುಂಬ ಸದಸ್ಯರ ವಿಷಯಗಳು ಅಪ್ರಸ್ತುತ. ಅವುಗಳ ಕುರಿತು ಮಾತನಾಡದಂತೆ ಎಚ್ಚರ ವಹಿಸಿ. ಸಂದರ್ಶಕರು ನಿಮ್ಮ ಜೀವನಗಾಥೆ ಕೇಳಲು ಸಂದರ್ಶನಕ್ಕೆ ಕರೆದಿಲ್ಲ. ಬದಲಾಗಿ ಅವರು ನೀಡುವ ಉದ್ಯೋಗಕ್ಕೆ ನೀವೆಷ್ಟು ಅರ್ಹರು ಎಂಬುದಷ್ಟೇ ಮುಖ್ಯ. 1 ನಿಮಿಷಕ್ಕಿಂತ ಹೆಚ್ಚು ಉದ್ದುದ್ದದ ಉತ್ತರಗಳು ಬೇಡ.
ನಿಮ್ಮ ರೆಸ್ಯೂಮೆಗೇ ಅಂಟಿಕೊಂಡಿರಬೇಡಿ
ಸಂದರ್ಶಕರು ನಿಮ್ಮ ರೆಸ್ಯೂಮೆಯನ್ನು ನೋಡಿದ ಮೇಲೆಯೇ ಕರೆದಿರುತ್ತಾರೆ. ನೀವು ಮತ್ತೆ ಮತ್ತೆ ಅದರಲ್ಲಿರುವುದನ್ನೇ ಹೇಳುತ್ತಾ ಕೂರುವ ಅಗತ್ಯವಿಲ್ಲ. ನೀವು ಉತ್ತಮ ಸಂಗತಿಗೆ ಬರುವ ಹೊತ್ತಿಗೆ ಸಂದರ್ಶಕರಿಗೆ ಬೋರ್ ಆಗಿ ಹೋಗಬಹುದು. ಬದಲಿಗೆ ಹೊಸ ಟೀಂಗೆ ನೀವು ಹೇಗೆ ಫಿಟ್ ಆಗಬಲ್ಲಿರಿ, ಹಿಂದೆ ಯಾವೆಲ್ಲ ರೋಲ್‌ಗಳನ್ನು ನಿಭಾಯಿಸಿದ್ದೀರಿ, ಅದರ ಅನುಭವ ಮುಂದಿನ ಕೆಲಸಕ್ಕೆ ಎಷ್ಟು ಸಹಾಯಕವಾಗುತ್ತದೆ, ನಿಮ್ಮ ಹವ್ಯಾಸಗಳೇನು ಇತ್ಯಾದಿ ವಿಷಯಗಳನ್ನು ಹೇಳಿಕೊಳ್ಳಬಹುದು.
ಕೆಲಸದ ಇಂಟರ್‌ವ್ಯೂ ಎಂದರೆ ತಮಾಷೇನಾ?
ಎಲ್ಲ ಮಾತನ್ನೂ ಒಂದೇ ಪ್ರಶ್ನೆಗೆ ಮುಗಿಸಬೇಡಿ
ನಿಮ್ಮ ಬಗ್ಗೆ ಹೇಳುವ ಮಾತಿನಲ್ಲೇ ಈಗ ಎಷ್ಟು ಸಂಬಳ ತೆಗೆದುಕೊಳ್ಳುತ್ತಿದ್ದೀರಿ, ಎಷ್ಟು ನಿರೀಕ್ಷಿಸುತ್ತಿದ್ದೀರಿ, ಮ್ಯಾನೇಜ್‌ಮೆಂಟ್ ವಿಷಯಗಳು ಮುಂತಾದವನ್ನೆಲ್ಲ ಹೇಳಿಬಿಡಬೇಡಿ. ಸಂದರ್ಶನವೆಂದರೆ ಒಂದೇ ಪ್ರಶ್ನೆಯಲ್ಲ. ಮುಂದಿನ ಹಂತಗಳಲ್ಲಿ ಇವೆಲ್ಲವನ್ನೂ ಅಗತ್ಯ ಕಂಡಲ್ಲಿ ಹೇಳುತ್ತಾ ಸಾಗಿದರೆ ಸಾಕು.
ಉತ್ತರ ತಯಾರಿ ಮಾಡಿಟ್ಟುಕೊಳ್ಳಿ
ಪ್ರಶ್ನೆಗೆ ಸರಿಯಾಗಿ ಉತ್ತರವನ್ನು ಹೇಗೆ ಬೇಕಾದರೂ ತಿರುಗಿಸಬಹುದು, ಆದರೆ, ಇಂಥ ಪ್ರಶ್ನೆ ಬಂದರೆ ಏನು ಉತ್ತರಿಸಬೇಕೆಂದು ಮುಂಚಿತವಾಗಿ ತಯಾರಿ ನಡೆಸಿಕೊಂಡಿರುವುದು ಜಾಣತನ. ಇದರಿಂದ ಯಾವು ವಿಷಯ ಹೈಲೈಟ್ ಮಾಡಬೇಕು, ಯಾವುದು ಸೈಡ್‌ಲೈನ್‌ಗೆ ಹಾಕಬೇಕು, ಆತ್ಮವಿಶ್ವಾಸ ತೋರಿಸುವುದು ಹೇಗೆ ಎಂಬುದೆಲ್ಲದರ ಕುರಿತು ಸ್ಪಷ್ಟತೆ ಸಿಗುತ್ತದೆ.