ವರ್ಷಪೂರ್ತಿ ಕಾಡೋ ಡೆಂಗ್ಯೂ ಬಗ್ಗೆ ಇರಲಿ ಜಾಗೃತಿ....

By Web Desk  |  First Published Sep 6, 2019, 6:29 PM IST

ಮಳೆಗಾಲ ಹೆಚ್ಚುತ್ತಿದ್ದಂತೆ ಸೊಳ್ಳೆ ಕಾಟವೂ ಹೆಚ್ಚಾಗೋದು ಸಹಜ. ಆದರೆ, ಕೇವಲ ಮಳೆಗಾಲದಲ್ಲಿ ಮಾತ್ರ ಕಾಡೋ ರೋಗ ಇದಲ್ಲ. ಬದಲಾಗಿ ಎಲ್ಲೆಲ್ಲಿ ನಿಂತ ನೀರು ಇರೊತ್ತೋ, ಅಲ್ಲಿ ಸೊಳ್ಳೆ ಹುಟ್ಟಿ ಕೊಳ್ಳುತ್ತೆ. ಡೆಂಗ್ಯೂನಂಥ ರೋಗಗಳೂ ಸಹಜವಾಗಿಯೇ ಕಾಡುತ್ತೆ. ಅದಕ್ಕೆ....


ಮಳೆ ಬರುತ್ತಲೇ ಇದ್ದರೆ, ಸೊಳ್ಳೆ ಕಾಡೋದು ತುಸು ತಪ್ಪುತ್ತೆ. ಆದರೆ, ಕೇವಲ ಮಳೆಗಾಲದಲ್ಲಿ ಮಾತ್ರವಲ್ಲ ಸೊಳ್ಳೆ ಕಾಟ. ಎಲ್ಲೆಲ್ಲಿ ಕೊಳಚೆ ನೀರಿರುತ್ತೋ ಅಲ್ಲೆಲ್ಲಾ ಬಿರು ಬೇಸಿಗೆಯಲ್ಲೂ ಸೊಳ್ಳೆ ಹುಟ್ಟುಕೊಳ್ಳುವುದರಲ್ಲಿ ಅನುಮಾನವೇ ಲ್ಲ. ಅದಕ್ಕೆ ಹೇಳುವುದು ಕೇವಲ ಒಂದು ಸೀಸನ್‌ಗೆ ಸೀಮಿತವಾದ ರೋಗ ಡೆಂಗ್ಯೂ ಅಲ್ಲ. ಬದಲಾಗಿ ವರ್ಷ ಪೂರ್ತಿ ಮನುಷ್ಯನನ್ನು ಹೈರಾಣವಾಗಿಸಬಹುದು. 

Tap to resize

Latest Videos

ಈ ಸೊಳ್ಳೆಯಿಂದ ಕಾಡೋ ರೋಗಗಳು ಡೆಂಗ್ಯೂ, ಮಲೇರಿಯಾ...ಒಂದೆರಡಲ್ಲ. ಈ ರೋಗಗಳನ್ನು ತಕ್ಷಣವೇ ಪತ್ತೆ ಹಚ್ಚದೇ ಹೋದರೆ ಮಾರಾಣಾಂತಿಕವೂ ಆಗಬಹುದು. ಸೊಳ್ಳೆಯಿಂದ ರೋಗಗಳು ಹರಡುವುದು ಕಾಮನ್. ಆದರೂ, ಇದಕ್ಕಿನ್ನೂ ಇಂಥದ್ದೇ ಸೂಕ್ತ ಚಿಕಿತ್ಸೆ ಇಲ್ಲವೆನ್ನುವುದೂ ಆತಂಕದ ವಿಷಯ. ಅದಕ್ಕೆ ಮನೆ ಸುತ್ತಮುತ್ತ ಸೊಳ್ಳೆ ಹುಟ್ಟಿಕೊಳ್ಳದಂತೆ ಕಾಪಾಡಿಕೊಳ್ಳುವುದು ಅತ್ಯುತ್ತಮ ಮದ್ದು. 

ಈ ಮಾತ್ರೆ ಸೇವಿಸಿದರೆ ಡೆಂಗ್ಯೂ 24 ಗಂಟೆಗಳಲ್ಲಿ ವಾಸಿಯಾಗೋದು ಹೌದಾ?

ಟೈರ್, ಬಕೆಟ್‍ಗಳು, ಆಟಿಕೆಗಳಂಥ ವಸ್ತುಗಳು ಮನೆ ಅಥವಾ ಆಫೀಸ್ ಸುತ್ತವಿದ್ದರೆ ನೀರು ನಿಲ್ಲೋದು ಗ್ಯಾರಂಟಿ. ಪಾಟ್ ಅಥವಾ ಕಸದ ಬುಟ್ಟಿಯಲ್ಲೂ ನೀರು ನಿಂತು, ಸೊಳ್ಳೆ ಸೃಷ್ಟಿಯಾಗಬಹುದು. ಇಂಥ ಜಾಗಗಳು ಸೊಳ್ಳೆಗಳ ಸಂತಾನಾಭಿವೃದ್ಧಿಗೆ ಹೇಳಿ ಮಾಡಿಸಿದ ಜಾಗಗಳು. ಅದಕ್ಕೆ ನಿಮ್ಮ ಸುತ್ತ ಮುತ್ತಲಿನ ಸ್ವಚ್ಛತೆ ಕಡೆಗೆ ಗಮನ ಕೊಡುವುದು ಅತ್ಯಗತ್ಯ. ನಿಗದಿತ ಸಮಯದಲ್ಲಿ ಸೊಳ್ಳೆ ನಿಯಂತ್ರಿಸುವ ಕೀಟನಾಶಕ ಸಿಂಪಡಸಲೇಬೇಕು. 

ಮಕ್ಕಳ ಬಗ್ಗೆಯೂ ಇರಲಿ ಎಚ್ಚರ
ಹುಟ್ಟಿದ ಮಗುವಿನಿಂದ ಹಿಡಿದು, ವೃದ್ಧರವರೆಗೂ ಡೆಂಗ್ಯೂನಂಥ ರೋಗಗಳು ಕಾಡಬಹುದು. ಅದಕ್ಕೆ ಆದಷ್ಟು ಸೊಳ್ಳೆ ಕಚ್ಚದಂತೆ ಎಚ್ಚರ ವಹಿಸುವುದೇ ಒಳ್ಳೆಯದು. ಅದರಲ್ಲಿಯೂ ಮಕ್ಕಳಿಗೇ ಫುಲ್ ತೋಳಿನ ಬಟ್ಟೆ ಹಾಕಿದರೆ ಬೆಸ್ಟ್. ಮಲಗುವಾಗ ತಪ್ಪದೇ ಸೊಳ್ಳೆ ಪರದೆ ಬಳಸಿ.  ಆರೋಗ್ಯದ ಕಡೆ ದುಷ್ಪರಿಣಾಮ ಬೀರದಂಥ ಹಿಟ್‌ನಂಥ ರಾಸಾಯನಿಕಗಳನ್ನೂ ಬಳಸಬಹುದು. 

ಒಂದು ಸೊಳ್ಳೆಯೂ ಅಪಾಯಕಾರಿ. ಅದು ನಮ್ಮನ್ನು ಕೊಲ್ಲೋ ಮುನ್ನ ಸಾಯಿಸಿ.

ಸೊಳ್ಳೆಯಿಂದ ಮುತ್ತು ಕೊಡಿಸಿಕೊಳ್ಳೋ ಮುನ್ನ...

click me!