ವರ್ಷದ ಯಾವ ಟೈಮಲ್ಲಾದರೂ ಡೆಂಗ್ಯೂ ಬರಬಹುದು, ಸೊಳ್ಳೆ ಮೇಲಿರಲಿ ಕಣ್ಣು

By Suvarna News  |  First Published Sep 25, 2020, 8:49 AM IST

ಅಯ್ಯೋ ಡೆಂಗ್ಯೂ ಬರೋದು ಬರೀ ಮಳೆಗಾಲದಲ್ಲಿ ಅಂತ ನೀವು ಅಂದು ಕೊಂಡಿದ್ದರೆ ಅದು ಸಂಪೂರ್ಣ ತಪ್ಪು ಪರಿಕಲ್ಪನೆ. ಸೊಳ್ಳೆ ಯಾವಾಗ ಬೇಕಾದರೂ ಮನುಷ್ಯನನ್ನು ಕಡಿಯಬಹುದು. ಕಡಿದಿದ್ದು ಡೆಂಗ್ಯೂವನ್ನು ಹರಡಬಲ್ಲದು. 


ಭಾರತ ಸೇರಿ ಸುಮಾರು ವಿಶ್ವದ 100 ದೇಶಗಳಲ್ಲಿ ಸ್ಥಳೀಯವಾಗಿ ಕಾಡುವ ಡೆಂಗ್ಯೂ ಸೊಳ್ಳೆಯಿಂದ ಹರಡುವ ಒಂದು ರೋಗ. ಏಡೇಸ್ ಏಜೆಪ್ಟಿ ಎಂಬ ಹೆಣ್ಣು ಸೊಳ್ಳೆಯಿಂದ ನಾಲ್ಕು ರೀತಿಯಲ್ಲಿ ಈ ಜ್ವರ ಒಬ್ಬರಿಂದ ಮತ್ತೊಬ್ಬರಿಗೆ ಹರಡುತ್ತದೆ. ಕೆರೆ, ಕೊಚ್ಚೆಗುಂಡಿ, ನೀರು ಸಂಗ್ರಹಿಸುವ ಟ್ಯಾಂಕ್ಸ್ ಮತ್ತು ಹಳೇ ಟಯರ್ ಸೇರಿ ನೀರು ನಿಲ್ಲುವ ಜಾಗಗಳಲ್ಲಿ ಹೆಚ್ಚು ಸೊಳ್ಳೆ ಸಂತಾನೋತ್ಪತ್ತಿಯಾಗಲಿದ್ದು, ಅಲೆಲ್ಲಾ ಈ ರೋಗ ಹರಡುತ್ತದೆ. ನೈರ್ಮಲೀಕರಣದ ಕೊರತೆ ಹಾಗೂ ಅಶುಚಿತ್ವದ ಕಾರಣದಿಂದ ಸ್ಥಳೀಯವಾಗಿ ಸೊಳ್ಳೆ ಹೆಚ್ಚು ಉತ್ಪತ್ತಿಯಾಗುತ್ತದೆ. ಭಾರತದಲ್ಲಿ ವಾರ್ಷಿಕ ಸರಾಸರಿ ಸುಮಾರು 1.5 ಲಕ್ಷ ಡೆಂಗ್ಯೂ ಪ್ರಕರಣಗಳು ದಾಖಲಾಗುತ್ತವೆ. ಡೆಂಗ್ಯೂ ಪೀಡಿತ ಕೆಲವರಲ್ಲಿ ಯಾವುದೇ ರೋಗ ಲಕ್ಷಣಗಳು ಕಾಣದ ಕಾರಣ ಈ ಸಂಖ್ಯೆ ಮತ್ತಷ್ಟು ಹೆಚ್ಚಿರುವ ಸಾಧ್ಯತೆಗಳಿವೆ. 

Tap to resize

Latest Videos

ನಮ್ಮ ದೇಶಕ್ಕೆ ಡೆಂಗ್ಯೂ ದೊಡ್ಡ ಅಪಾಯ ಎಂಬುದನ್ನು ಈ ಅಂಕಿ ಸಂಖ್ಯೆಗಳೇ ಹೇಳಬಲ್ಲದು. ಸಾಮಾನ್ಯವಾಗಿ ಸೊಳ್ಳೆಗಳು ಹಗಲು ಹಾಗೂ ಸಂಜೆ ಹೆಚ್ಚು ಸಕ್ರಿಯವಾಗಿರುತ್ತವೆ ಮತ್ತು ಈ ಡೆಂಗ್ಯೂ ಕೇವಲ ಮಳೆಗಾಲದಲ್ಲಿ ಮಾತ್ರ ಹರಡಬಲ್ಲದು ಎಂಬುವುದು ಶ್ರೀ ಸಾಮಾನ್ಯನಲ್ಲಿ ಇರುವ ತಪ್ಪು ಕಲ್ಪನೆ. ಈ ರೋಗ ಹರಡುವ ಏಡೇಸ್ ಏಜೇಪ್ಟಿ ಸೊಳ್ಳೆಯ ಮೇಲೆ ಅಧ್ಯಯನಗಳು ನಡೆದಿದ್ದು, ರೋಗ ಹರಡುವಿಕೆ ಬಗ್ಗೆ ಜನರಲ್ಲಿ ತಪ್ಪು ಕಲ್ಪನೆಗಳಿವೆ ಎಂಬುವುದು ಸಾಬೀತಾಗಿವೆ. ಗ್ರಾಮೀಣ ಅಥವಾ ನಗರ ಪ್ರದೇಶ ಎಲ್ಲಿಯೇ ಆಗಲಿ, ಹಗಲಿರುಳಾಗಲಿ ಡೆಂಗ್ಯೂ ಹರಡಬಹುದು.

ಬೇಸಿಗೆ ಹಾಗೂ ಚಳಿಗಾಲದಲ್ಲಿ ಹರಡುವ ರೋಗದ ಬಗ್ಗೆ ಡೆಂಗ್ಯೂ ಸಂತ್ರಸ್ತರು ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ. 'ನಂಗೆ ಡೆಂಗ್ಯೂ ಡಿಸೆಂಬರ್‌ನಲ್ಲಿ ಅಟ್ಯಾಕ್ ಆದಾಗ ನಾನು ದಿಗ್ರ್ಭಾಂತಳಾಗಿದ್ದೆ. ಈ ರೋಗ ಚಳಿಗಾಲದಲ್ಲಿ ಹರಡುವುದಿಲ್ಲ, ಕೇವಲ ಮಳೆಗಾಲದಲ್ಲಿ ಎಂದು ಬಲವಾಗಿ ನಂಬಿದ್ದೆ, ಎನ್ನುತ್ತಾರ ಕೊರೋನಾ ಗೆದ್ದ, ವಿಮಲ್ ಕಲ್ಯಾಣ್.          

ಒಂದೇ ಒಂದು ಸೊಳ್ಳೆ ಕಚ್ಚಿದರೂ ಡೆಂಗ್ಯೂ ಬರುತ್ತೆ
                                                              '
ಹೈದಾರಾಬಾದ್ ಮೂಲದ ಮತ್ತೊಬ್ಬ ಡೆಂಗ್ಯೂ ಸಂತ್ರಸ್ತೆ ರೋನಿ ದತ್ತಾ, 'ಬಿರು ಬೇಸಿಗೆಯಲ್ಲಿ ಸೊಳ್ಳೆ ಬದುಕುವುದು ಕಷ್ಟ ಎಂದೇ ನಾನು ನಂಬಿದ್ದೆ. ಅದರೆ, ಅದೇ ಟೈಮಲ್ಲಿ ನನ್ನನ್ನು ಡೆಂಗ್ಯೂ ಕಾಡಿದ್ದರಿಂದ ಅದು ಸುಳ್ಳೆಂಬುವುದು ಅನುಭವಕ್ಕೆ ಬಂತು. ಯಾವುದೇ ಕಾಲಕ್ಕೆ ಸೀಮಿತವಾಗದೇ, ಯಾವ ಟೈಮಲ್ಲಿ ಬೇಕಾದರೂ ಡೆಂಗ್ಯೂ ಕಾಡಬಹುದು ಎಂಬುವುದು ಇದರಿಂದ ಸತ್ಯವಾಯಿತು,' ಎನ್ನುತ್ತಾರೆ.

ಇವರ ಅನುಭವ ಎಲ್ಲರಿಗೂ ಒಂದೊಳ್ಳೆ ಪಾಠ ಕಲಿಸುತ್ತೆ. ಪ್ರತಿಯೊಂದೂ ದಿನವೂ ಸೊಳ್ಳೆ ನಿಯಂತ್ರಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು. ಗೋದ್ರೇಜ್ ಕಾಲಾ ಹಿಟ್ ಬಳಸಿ, ನಿರಂತರವಾಗಿ ಸೊಳ್ಳೆಗಳನ್ನು ಕೊಲ್ಲುವುದೊಂದೇ ಇದಕ್ಕಿರುವ ಅತ್ಯುತ್ತಮವಾದ ಪರಿಹಾರ.

ಡೆಂಗ್ಯೂ ಮರುಕಳಿಸಿದರೆ ಅಪಾಯ ಗ್ಯಾರಂಟಿ

click me!