ಡೆಂಗ್ಯೂ ಮರುಕಳಿಸಿದರೆ ಅಪಾಯ ಹೆಚ್ಚು...

By Suvarna News  |  First Published Sep 24, 2020, 1:16 PM IST

ಸೊಳ್ಳೆ ಹೆಚ್ಚಾಗುತ್ತಿದ್ದಂತೆ ಕಾಡುವ ರೋಗ ಡೆಂಗ್ಯೂ. ಒಮ್ಮೆ ಬಂದರೆಯೇ ಸುಧಾರಿಸಿಕೊಳ್ಳಲು ಸಾಕಷ್ಟು ಸಮಯ ತೆಗೆದುಕೊಳ್ಳುವ ಈ ರೋಗ, ಮತ್ತೆ ಮತ್ತೆ ಬಂದರಂತೂ ಜೀವಕ್ಕೇ ಕುಂದು ತರುವುದು ಗ್ಯಾರಂಟಿ. ಮತ್ತೆ ರೋಗ ಬಂದರೆ ಏನಾಗಬಹುದು? ಅದಕ್ಕೆ ಪರಿಹಾರವೇನು? 


ಒಮ್ಮೆ ಬಂದರೇಯೇ ಡೆಂಗ್ಯೂ ವಿಪರೀತ ಅಪಾಯಕಾರಿ. ಆದರೆ, ಮತ್ತೆ ಒಕ್ಕರಿಸಬಹುದಾದ ಈ  ರೋಗ ಎರಡನೇ ಬಾರಿ ಬಂದರಂತೂ ಹೇಳ ತೀರದು. ಹೌದು, ನೀವು ಓದಿ ಕೊಂಡಿದ್ದು ಸರಿಯೇ ಇದೆ.

ಬಹಳಷ್ಟು ಮಂದಿ ಚಿಕನ್ ಪಾಕ್ಸ್ ಮತ್ತು ಡೆಂಗ್ಯೂನಂಥ ರೋಗಗಳು ಒಮ್ಮೆ ಬಂದರೆ ಮತ್ತೊಮ್ಮೆ ಬರೋಲ್ಲ ಎಂಬ ತಪ್ಪು ಕಲ್ಪನೆಯಲ್ಲಿಯೇ ಇದ್ದಾರೆ. ಫ್ಲೂ ರೀತಿಯ ವೈರಲ್ ಸೋಂಕಾದ ಡೆಂಗ್ಯೂ ಏಡಿಸಿ ಏಜೇಪ್ಟಿ ಎಂಬ ಹೆಣ್ಣು ಸೊಳ್ಳೆ ಕಚ್ಚಿದರೆ ಬರುವ ಜ್ವರ. ಸ್ವಲ್ಪವೇ ಸ್ವಲ್ಪ ಸ್ವಚ್ಛ ನೀರಿರುವ ಜಾಗವಾದರೂ ಸರಿ ಈ ಸೊಳ್ಳೆ ಸಂತಾನೋತ್ಪತ್ತಿ ಮಾಡಬಲ್ಲದು. ಜ್ವರ ಪೀಡಿತ ವ್ಯಕ್ತಿಗೆ ಕಚ್ಚಿದ ಸೊಳ್ಳೆ, ಆರೋಗ್ಯವಂತ ವ್ಯಕ್ತಿಗೆ ಕಚ್ಚಿದಲ್ಲಿ ಈ ಡೆಂಗ್ಯೂ ಹರಡುತ್ತದೆ. ಆದರೆ, ಇತರೆ ಫ್ಲೂ ವೈರಸ್‌ನಂತೆ ಡೆಂಗ್ಯೂ ಸೋಂಕು ಮನುಷ್ಯನಿಂದ ಮನುಷ್ಯನಿಗೆ ಪಸರಿಸುವುದಿಲ್ಲ. 

Tap to resize

Latest Videos

ನಿರಂತರ ಜ್ವರ, ಸಂಧಿ ನೋವು, ತಲೆ ಸುತ್ತು ಮತ್ತು ವಾಂತಿ ಡೆಂಗ್ಯೂವಿನ ರೋಗ ಲಕ್ಷಣಗಳು. ಈ ಜ್ವರ ಬಂದರೆ ವಾಸಿಯಾಗಲು ಕೆಲವೇ ವಾರಗಳಿಂದ ಹಿಡಿದು, ಆರು ತಿಂಗಳ ತನಕ ತೆಗೆದುಕೊಳ್ಳಬಹುದು. ವೈದ್ಯರು ನೀಡಿದ ಸೂಕ್ತ ಔಷಧಿಗಳನ್ನು ತೆಗೆದುಕೊಂಡರೆ ಬಹುತೇಕ ಡೆಂಗ್ಯೂ ರೋಗಿಗಳಿಗೆ ಮನೆಯಲ್ಲಿಯೇ ಚಿಕಿತ್ಸೆ ನೀಡಬಹುದು. ಆದರೆ, ಮತ್ತೊಮ್ಮೆ ಡೆಂಗ್ಯೂ ಅಟ್ಯಾಕ್ ಆದರೆ ಮಾತ್ರ ಆಸ್ಪತ್ರೆಗೆ ದಾಖಲಾಗುವುದು ಅನಿವಾರ್ಯ.

ಕೊರೋನಾ ನಡುವೆ ಡೆಂಗ್ಯೂ ಆತಂಕ ಶುರು

ಮೊದಲ ಸಾರಿ ಬಂದ ಡೆಂಗ್ಯೂಗಿಂತ ಎರಡನೇ ಬಾರಿ ಬಂದ ಜ್ವರ ಮತ್ತಷ್ಟು ಅಪಾಯಕಾರಿ ಎಂಬುದನ್ನು 2004ರಿಂದ 2016ರ ನಡುವೆ ಸೈನ್ಸ್ ಯೂನಿವರ್ಸಿಟಿ ನಡೆಸಿದ ಅಧ್ಯಯನದಿಂದ ಸಾಬೀತಾಗಿದೆ. ಸುಮಾರು 41000 ರಕ್ತ ಮಾದರಿಗಳನ್ನು ಬಳಸಿ ಈ ಅಧ್ಯಯನ ನಡಿದಿದ್ದು, ಇದಕ್ಕೇನು ಕಾರಣ ಎಂಬುವುದೂ ಇದೀಗ ಬಹಿರಂಗಗೊಂಡಿದೆ. ಅಕಸ್ಮಾತ್ ಡೆಂಗ್ಯೂ ಮರುಕಳಿಸಿದರೆ ದೇಹದಲ್ಲಿನ ಆ್ಯಂಟಿಬಾಡೀಸ್ ಶಕ್ತಿ ಕಡಿಮೆಯಾಗಲಿದ್ದು, ಎಡಿಇ ಅಥವಾ ಪ್ರತಿಕಾಯ ಅವಲಂಬಿಗಳು ವರ್ಧಿಸುತ್ತವೆ. ಪಾರ್ಶ್ವವಾಯುವಿಗೆ ಕಾರಣವಾಗುವಂಥ ಜ್ವರಕ್ಕೆ ರೋಗಿಗಳು ತುತ್ತಾಗುವ ಸಾಧ್ಯತೆ ಎರಡನೇ ಸಾರಿ ಡೆಂಗ್ಯೂ ಬಂದಾಗ ಹೆಚ್ಚಿರುತ್ತದೆ.

ಡೆಂಗ್ಯೂವೊಂದು ಸ್ಥಳೀಯ ವ್ಯಾಧಿಯಾಗಿದ್ದು, ವರ್ಷ ಪೂರ್ತಿ ವೈರಸ್ ಪಸರಿಸುವ ಸಾಧ್ಯತೆ ಇರುತ್ತದೆ. ಇಡಿ ದೇಶದಲ್ಲಿ ಜುಲೈ 2020ರವರೆಗೆ ಒಟ್ಟು 12078 ಡೆಂಗ್ಯೂ ಪ್ರಕರಣಗಳು ದಾಖಲಾಗಿದ್ದು, ಎಂಟು ಮಂದಿ ಮೃತಪಟ್ಟಿದ್ದಾರೆ. ವಾರ್ಷಿಕ ಸರಾಸರಿ ಸುಮಾರು 1.5 ಲಕ್ಷ ಡೆಂಗ್ಯೂ ಪ್ರಕರಣಗಳು ದೇಶದಲ್ಲಿ ದಾಖಲಾಗುತ್ತದೆ. ಆದರೆ, ಎಲ್ಲರಿಗೂ ಮತ್ತೊಂದು ಸೋಂಕಿಗೆ ಗುರಿಯಾಗುವ ಸಾಧ್ಯತೆಗಳು ಇರುವುದಿಲ್ಲ.

ಡೆಂಗ್ಯೂಗೆ ಕಾರಣವಾಗಬಲ್ಲ ಸೊಳ್ಳೆಯನ್ನು ಕೊಲ್ಲು ಮೂಲಕ ಮೂಲದಲ್ಲಿಯೇ ಡೆಂಗ್ಯೂ ಹರಡದಂತೆ ಅಗತ್ಯ ಎಚ್ಚರ ವಹಿಸಬೇಕು. ಗೋದ್ರೇಜ್ ಕಾಲಾ ಹಿಟ್‌ನಂತ ಸೊಳ್ಳೆ ನಿಯಂತ್ರಣ ಔಷಧಿಗಳನ್ನು ಬಳಸುವುದರಿಂದ ರೋಗವನ್ನು ಹರಡುವ ಕ್ರಿಮಿಯನ್ನು ಸಾಯಸುವುದು ಸುಲಭ. ಪಾರ್ಕ್ ಹಾಗೂ ಕಾಮನ್ ಏರಿಯಾದಲ್ಲಿ ಸ್ಥಳೀಯ ಸಂಸ್ಥೆಗಳು ಹಾಗೂ ಸೊಸೈಟಿಗಳು ಸೊಳ್ಳೆ ಸಾಯುವಂಥ ರಾಸಾಯನಿಕಗಳನ್ನು ಬಳಸಿ, ಸುರಕ್ಷಿತವಾಗಿರಬಹುದು. ದೇಶದಿಂದ ಸೋಂಕನ್ನು ತೊಲಗಿಸಲು ಸೊಳ್ಳೆ ಸಾಯಿಸುವುದೊಂದೇ ಅತ್ಯುತ್ತಮ ಪರಿಹಾರ.

ಮೊದಲು ಅಥವಾ ಎರಡನೇ ಬಾರಿ ಡೆಂಗ್ಯೂ ಹರಡಲು ಒಂದೇ ಒಂದು ಸೊಳ್ಳೆ ಒಮ್ಮೆ ಕಚ್ಚಿದರೂ ಅಪಾಯ ಎಂಬುದನ್ನು ನೆನಪಿನಲ್ಲಿಟ್ಟುಕೊಳ್ಳಬೇಕು. ಒಂದು ಅಥವಾ ಎರಡು ಸೊಳ್ಳೆ ಕಂಡರೂ ತಕ್ಷಣವೇ ಕಾರ್ಯ ಪ್ರವೃತ್ತರಾಗಿ. ಗೋದ್ರೆಜ್ ಕಾಲಾ ಹಿಟ್ ಬಳಸುವುದರಿಂದ ಸೊಳ್ಳೆಯನ್ನು ಸುಲಭವಾಗಿ ಕೊಲ್ಲಬಹುದು.

click me!