ಬ್ರಾ ಬಳಸಿ ಲಾಕ್ ಆಗಿದ್ದ ಕಾರಿನ ಡೋರ್ ಒಪನ್ ಮಾಡಿದ ಮಹಿಳೆ, ವಿಡಿಯೋ ವೈರಲ್!

By Suvarna News  |  First Published Dec 6, 2023, 10:12 PM IST

ಕಾರಿನೊಳಗೆ ಕಿ ಬಿಟ್ಟು ಡೋರ್ ಲಾಕ್ ಆದ ಅನುಭವಗಳು ಹಲವರಿಗೆ ಆಗಿರುತ್ತೆ. ಹೀಗೆ ಮಹಿಳೆಯೊಬ್ಳು ಕಾರಿನ ಕೀ ಕಾರಿನೊಳಗೆ ಬಿಟ್ಟಿದ್ದಾರೆ. ಕಾರು ಸಂಪೂರ್ಣ ಲಾಕ್ ಆಗಿದೆ. ಆದರೆ ಈ ಮಹಿಳೆ ತಾನು ಹಾಕಿದ್ದ ಬ್ರಾ ತೆಗೆದು ಕಾರಿನ ಡೋರ್ ಓಪನ್ ಮಾಡಿದ್ದಾರೆ. ಈ ವಿಡಿಯೋ ಭಾರಿ ವೈರಲ್ ಆಗಿದ್ದು, ಏನ್ ಐಡಿಯಾ ಗುರು ಎಂದು ನೆಟ್ಟಿಗರು ಕಮೆಂಟ್ ಮಾಡಿದ್ದಾರೆ


ಕಾರಿನ ಕೀ ಮರೆತು ಕಾರಿನೊಳಗೆ ಬಿಟ್ಟರೆ ಡೋರ್ ಹಾಕುತ್ತಿದ್ದಂತೆ ಲಾಕ್ ಆಗಲಿದೆ. ಸೆಂಟ್ರಲ್ ಲಾಕ್ ಸಿಸ್ಟಮ್ ಕಾರುಗಳಲ್ಲಿ ಇದು ಸಾಮಾನ್ಯ. ಹಲವರಿಗೆ ಈ ಅನುಭವಾಗಿರುತ್ತದೆ. ಕಾರಿನ ಗಾಜು ಒಡೆದು, ವಿಂಡೋ ಬೀಡಿಂಗ್ ಕಿತ್ತು ಅಥವಾ ಮೆಕಾನಿಕ್ ಕರೆಸುವುದೇ ಉಳಿದಿರುವ ದಾರಿ. ಲಾಕ್ ಆಗಿರುವ ಕಾರಿನ ಡೋರ್ ಒಪನ್ ಮಾಡಲು ಕೆಲ ಸುಲಭ ವಿಧಾನಗಳಿವೆ. ಆದರೆ ಒಳಉಡುಪು ಬಳಸಿ ಕಾರಿನ ಡೋರ್ ಒಪನ್ ಮಾಡಲು ಸಾಧ್ಯ ಎಂದು ಮಹಿಳೆಯೊಬ್ಬರು ತೋರಿಸಿದ್ದಾರೆ. ಈ ವಿಡಿಯೋ ಬಾರಿ ವೈರಲ್ ಆಗಿದ್ದು, ನೆಟ್ಟಿಗರು ಭರ್ಜರಿ ಕಮೆಂಟ್ ಮಾಡುತ್ತಿದ್ದಾರೆ.

ಮಹಿಳೆಯೊಬ್ಬರು ಶಾಪಿಂಗ್ ತೆರಳಿದ್ದಾರೆ. ಶಾಪಿಂಗ್‌ನಿಂದ ಮರಳಿದ ಮಹಿಳೆ ವಸ್ತುಗಳನ್ನು ಕಾರಿನೊಳಗೆ ಇಟ್ಟಿದ್ದಾರೆ. ಆದರೆ ಏನೋ ಮರೆತ ಮಹಿಳೆ ದಿಢೀರ್ ಕಾರಿನ ಡೋರ್ ಹಾಕಿ ಮತ್ತೆ ತೆರಳಿ ಕೆಲವೇ ನಿಮಿಷಗಳಲ್ಲಿ ವಾಪಸ್ ಆಗಿದ್ದಾರೆ. ಆದರೆ ತರಾತುರಿಯಲ್ಲಿ ಮಹಿಳೆ ಕಾರಿನ ಕಿಯನ್ನು ಕಾರಿನೊಳಗೆ ಬಿಟ್ಟಿದ್ದಾರೆ. ಇದರಿಂದ ಕಾರು ಸಂಪೂರ್ಣ ಲಾಕ್ ಆಗಿದೆ.

Tap to resize

Latest Videos

undefined

ಬೆಂಗಾವಲು ಕಾರಿನಿಂದ ಹಾರಿದ ಗರಿ ಗರಿ ನೋಟು, ಹೆದ್ದಾರಿ ಸಂಪೂರ್ಣ ಟ್ರಾಫಿಕ್ ಜಾಮ್!

ಕಾರಿನ ಡೋರ್ ಒಪನ್ ಆಗುತ್ತಿಲ್ಲ. ಕೀ ಕಾರಿನೊಳಗಿದೆ. ಸಮಯವೂ ಮೀರುತ್ತಿದೆ. ಆದರೆ ಈ ಸಂದರ್ಭದಲ್ಲೂ ಮಹಿಳೆ ಅದ್ಭುತ ಐಡಿಯಾ ಪ್ರಯೋಗಿಸಿದ್ದಾರೆ. ತಾನು ಧರಿಸಿದ್ದ ಬ್ರಾ ತೆಗೆದಿದ್ದಾರೆ. ಬಳಿಕ ಗಮ್ ಟೇಪ್ ಮೂಲಕ ಕಾರಿನ ವಿಂಡೋಗೆ ಗಟ್ಟಿಯಾಗಿ ಅಂಟಿಸಿದ್ದಾರೆ. ಕೆಲ ನಿಮಿಷಗಳ ಸಾಹಸ ಬಳಿಕ ಕಾರಿನ ವಿಂಡೋ ಗ್ಲಾಸ್‌ನ್ನು ಕೆಳಕ್ಕೆ ಜಾರಿಸಿದ್ದಾರೆ. 

 

Strange but affective technique for your car! 😂 pic.twitter.com/6GoVaC9dEM

— Figen (@TheFigen_)

 

ಕೈಗಳಿಂದ ಶಕ್ತಿ ಸಾಲದು ಎಂದಾದಾಗ,ಕಾರಿನ ಮೇಲೆ ಹತ್ತಿ ಕಾಲಿನ ಮೂಲಕ ಕಾರಿನ ವಿಂಡೋ ಗ್ಲಾಸ್ ಕೆಳಕ್ಕೆ ಜಾರಿಸಿದ್ದಾರೆ. ಬಳಿಕ ಕಾರಿನ ಡೋರ್ ಒಪನ್ ಮಾಡಿದ್ದಾರೆ. ಮಹಿಳೆಯ ಸಾಹಸ ಹಾಗೂ ಐಡಿಯಾಗೆ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಟೇಪ್ ಮೂಲಕ, ದಾರದ ಮೂಲಕ ಹಾಗೂ ಇತರ ಮೆಕಾನಿಕ್ ಸಲಕರಣೆಗಳ ಮೂಲಕ ಕಾರಿನ ವಿಂಡೋ ಗ್ಲಾಸ್ ಜಾರಿಸಿ ಡೋರ್ ಓಪನ್ ಮಾಡಿದ ಉದಾಹರಣೆಗಳಿವೆ. ಆದರೆ ಒಳ ಉಡುಪಿನಲ್ಲಿ ಈ ರೀತಿಯ ಉಪಯೋಗವೂ ಇದೆ ಅನ್ನೋದು ಗೊತ್ತಾಗಿದ್ದು ಇದೇ ಮೊದಲು ಎಂದು ಹಲವರು ಕಮೆಂಟ್ ಮಾಡಿದ್ದಾರೆ.

ಟಿ ಶರ್ಟ್‌ನಲ್ಲಿ ಧೂಳು ಒರೆಸಿ ಅಭಿಮಾನಿ ಬೈಕ್‌ ಮೇಲೆ ಆಟೋಗ್ರಾಫ್ ಹಾಕಿದ ಧೋನಿ!

ಮತ್ತೆ ಕೆಲವರು ಬ್ರಾಂಡೆಡ್ ಬ್ರಾ ಆದರೆ ಮಾತ್ರ ಸಾಧ್ಯ, ಇಲ್ಲದಿದ್ದರೆ ಬ್ರಾ ಕೈಯಲ್ಲಿರುತ್ತೆ, ವಿಂಡೋ ಗ್ಲಾಸ್ ಅಲ್ಲೇ ಇರುತ್ತೆ ಎಂದು ಕೆಲವರು ಕಮೆಂಟ್ ಮಾಡಿದ್ದಾರೆ.ಈ ವಿಡಿಯೋ 6 ಲಕ್ಷಕ್ಕೂ ಅಧಿಕ ವೀಕ್ಷಣೆ ಪಡೆದಿದೆ. ಇನ್ನು ಕಮೆಂಟ್ಸ್ ಲೈಕ್ಸ್ ಕೂಡ ಭರ್ಜರಿಯಾಗಿದೆ.

click me!