ಪಾರ್ಟಿ‌ ಮಾಡೋಣ ಬಾ.. ನಂಬಿ ಬಂದ ಆಕೆಗೆ ಮಾಡಬಾರದನ್ನ ಮಾಡಿದ ಕಾಮುಕ ಸ್ನೇಹಿತರು

By Suvarna News  |  First Published Dec 15, 2020, 3:31 PM IST

ಪಾರ್ಟಿ‌ ಮಾಡೋಣ ಬಾ ಅಂತ ಕರೆದು ಎಣ್ಣೆ ಮತ್ತಲ್ಲಿ ಕ್ಲಾಸ್ ಮೇಟ್ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವ ಘಟನೆ ನಡೆದಿದೆ.


ಬೆಂಗಳೂರು, (ಡಿ.15): ಇಂಜಿನಿಯರಿಂಗ್ ಓದುತ್ತಿರುವ ವಿದ್ಯಾರ್ಥಿಗಳು ಪಾರ್ಟಿ ಮಾಡುವ ನೆಪದಲ್ಲಿ ಯುವತಿಯನ್ನು ಫ್ಲಾಟ್​ಗೆ ಕರೆದು ಅವಳ ಜೊತೆ ಅಸಭ್ಯವಾಗಿ ನಡೆದುಕೊಂಡಿರುವ ಘಟನೆ ಆರ್.ಆರ್. ನಗರ ವ್ಯಾಪ್ತಿಯ ಐಡಿಯಲ್ ಹೋಮ್ಸ್‌ ಲೇಔಟ್​ನಲ್ಲಿ ನಡೆದಿದೆ.

 ಛತ್ತೀಸ್‌ಗಢ ಮೂಲದ ಇಂಜಿನಿಯರಿಂಗ್ ವಿದ್ಯಾರ್ಥಿನಿಯನ್ನು ತುಷಾರ್ ಎಂಬ ಯುವಕ ಮತ್ತು ಆತನ ಸ್ನೇಹಿತರು ಪಾರ್ಟಿಗೆ ಆಹ್ವಾನಿಸಿದ್ದರು. ಎಲ್ಲರೂ ತಿಳಿದವರೇ, ಗೆಳೆಯರೇ ಎಂದು ಸಂತ್ರಸ್ಥ ಯುವತಿ ಪಾರ್ಟಿಗೆ ಹೋಗಿದ್ದಾಳೆ.

Tap to resize

Latest Videos

ಸಹೋದ್ಯೋಗಿಗಳ ಸ್ನಾನದ ವಿಡಿಯೋ ಪ್ರಿಯಕರಗೆ ಕಳಿಸುತ್ತಿದ್ದ ನರ್ಸ್ : ಪ್ರಿಯಕರ ಅರೆಸ್ಟ್

ಆದರೆ ಅಲ್ಲಿ ಯುವತಿಯ ಕೈಯಲ್ಲೇ ಮದ್ಯವನ್ನು ತರಿಸಿಕೊಂಡು ತುಷಾರ್ ಮತ್ತು ಆತನ ಸ್ನೇಹಿತರು ರಾತ್ರಿ ಪೂರ್ತಿ ಫ್ಲಾಟ್​ನಲ್ಲೇ ಎಣ್ಣೆ ಪಾರ್ಟಿ ಮಾಡಿ ಫುಲ್ ಟೈಟ್ ಆಗಿದ್ದಾರೆ. ಬಳಿಕ ನಿದ್ರೆಗೆ ಜಾರಿದ ಯುವತಿಯ ಮೇಲೆ ಎರಗಿ ಮೃಗಗಳಂತೆ ವರ್ತಿಸಿದ್ದಾರೆ. 

ಕೂಡಲೇ ಅಪಾರ್ಟ್ಮೆಂಟ್​ನಿಂದ ಹೊರಬಂದು ಯುವತಿ ಪೊಲೀಸರಿಗೆ ಕರೆ ಮಾಡಿದ್ದಾಳೆ. ಈ ಬಗ್ಗೆ ಸಂತ್ರಸ್ಥ ಯುವತಿ ಆರ್.ಆರ್. ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ದೂರು ಆಧರಿಸಿ ಪೊಲೀಸರು ಆರೋಪಿ ತುಷಾರ್​ನನ್ನು ಬಂಧಿಸಿದ್ದಾರೆ.

click me!