ಪಾಗಲ್ ಪ್ರೇಮಿಯಿಂದ ಯುವತಿಯ ಬರ್ಬರ ಹತ್ಯೆ/ ನರ್ಮದಾ(18) ಕೊಲೆಯಾದ ಯುವತಿ/ ರೌಡಿಶೀಟರ್ ಅಭಿಗೌಡ ಎಂಬಾತನಿಂದ ಕೃತ್ಯ/ ರಾಜಾಜಿನಗರದ ರೌಡಿಶೀಟರ್ ಆದ ಆರೋಪಿ/ ಹಲವು ವರ್ಷಗಳಿಂದ ಇಬ್ಬರ ನಡುವೆ ಪ್ರೀತಿ ಇತ್ತು
ಬೆಂಗಳೂರು(ಜು.14) ಪಾಗಲ್ ಪ್ರೇಮಿ ಪ್ರೇಯಸಿಯನ್ನು ಬರ್ಬರವಾಗಿ ಹತ್ಯೆ ಮಾಡಿದ್ದಾನೆ. ನಗರದ ದ್ವಾರಜಾನಗರದ 9ನೇ ಕ್ರಾಸ್ ನಲ್ಲಿ ಸೋಮವಾರ ತಡರಾತ್ರಿ ಘಟನೆ ನಡೆದಿದೆ.
ನರ್ಮದಾ(18) ಕೊಲೆಯಾದ ಯುವತಿ. ರೌಡಿಶೀಟರ್ ಅಭಿಗೌಡ ತನ್ನ ಪ್ರೇಯಸಿಯನ್ನೇ ಚುಚ್ಚಿ ಕೊಲೆ ಮಾಡಿದ್ದಾನೆ. ರಾಜಾಜಿನಗರದ ರೌಡಿಶೀಟರ್ ಆದ ಆರೋಪಿ ಇತ್ತೀಚೆಗೆ ಗಿರಿನಗರಕ್ಕೆ ಶಿಪ್ಟ್ ಆಗಿದ್ದ.
ಕಾಲ್ ಬಾಯ್ ಆಗಲು ಹೋಗಿ ಹಣ ಕಳೆದುಕೊಂಡ ಬೆಂಗಳೂರು ಇಂಜಿನಿಯರ್
ಹಲವು ವರ್ಷಗಳಿಂದ ಇಬ್ಬರ ನಡುವೆ ಪ್ರೀತಿ ಇತ್ತು. ಇತ್ತಿಚೆಗೆ ತನ್ನ ಸಂಬಂಧಿಕನೊಬ್ಬನ ಜೊತೆ ಹೆಚ್ಚು ಸಲುಗೆಯಿಂದ ಇದ್ದ ನರ್ಮದಾ ಇದ್ದರು. ಇದೇ ಕಾರಣಕ್ಕೆ ಕೊಪಗೊಂಡ ಅಭಿಷೇಕ್ ಗಗೌಡ ಹತ್ಯೆ ಮಾಡಿದ್ದಾನೆ ಎನ್ನಲಾಗಿದೆ.
ಸೋಮವಾರ ನರ್ಮಾದಳನ್ನು ತನ್ನ ರೂಂಗೆ ಕರೆದೊಯ್ದಿದ್ದ. ಈ ವೇಳೆ ಮನೆಯಲ್ಲಿದ್ದ ಚಾಕುವಿಂದ ನರ್ಮದಾ ಮೇಲೆ ಹಲ್ಲೆ ಮಾಡಿದ್ದಾನೆ. ಕತ್ತು ಹಾಗೂ ಹೊಟ್ಟೆಗೆ ಇರಿದು ಹತ್ಯೆ ಮಾಡಿದ್ದಾನೆ. ಹತ್ಯೆ ಬಳಿಕ ಅಲ್ಲಿಂದ ಜಾಗ ಖಾಲಿ ಮಾಡಿದ್ದು ಗಿರಿನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.