ವರದಿ : ಪರಮೇಶ್ವರ ಅಂಗಡಿ ಏಷ್ಯಾನೆಟ್ ಸುವರ್ಣ ನ್ಯೂಸ್ ಧಾರವಾಡ
ಧಾರವಾಡ (ನ.9) :: ಜನಜಾಗೃತಿ ಸಂಘದ ಅದ್ಯಕ್ಷ ಬಸವರಾಜ ಕೊರವರ ಮತ್ತು ಜಿಲ್ಲಾ ಪಂಚಾಯತ ಮಾಜಿ ಸದಸ್ಯ ಯೋಗೀಶ ಗೌಡ ಅವರ ಸಹೋದರ ಗುರುನಾಥ್ ಗೌಡ ಜಂಟಿ ಸುದ್ದಿಗೋಷ್ಠಿ ನಡೆಸಿ ಧಾರವಾಡದಲ್ಲಿ ಮಾಜಿ ಸಚಿವ ವಿನಯ ಕುಲಕರ್ಣಿ ಅವರ ವಿರುದ್ದ ಹರಿಹಾಯ್ದುರು.
ಸುವರ್ಣನ್ಯೂಸ್ ಮೆಗಾ Exclusive: ಯೋಗೀಶ್ ಗೌಡ ಹತ್ಯೆಯಲ್ಲಿ ಸಚಿವ ವಿನಯ್ ಕುಲಕರ್ಣಿ ಕೈವಾಡ?
ಧಾರವಾಡದ ಸರ್ಕ್ಯೂಟ್ ಹೌಸ್ ನಲ್ಲಿ ಮಾತನಾಡಿದ ಬಸವರಾಜ ಕೊರವರ ಬೇಲ್ ಕ್ಯಾನ್ಸಲ್ ಮಾಡುವಂತೆ ಕೋರ್ಟ್ ಮೊರೆ ಹೋಗಬೇಕಾಗುತ್ತೆ ಎಂದು ಮಾಜಿ ಸಚಿವ ವಿನಯ ಕುಲಕರ್ಣಿ ಅವರಿಗೆ ಎಚ್ಚರಿಕೆಯನ್ನ ನೀಡಿದರು..
ಯೋಗೀಶಗೌಡ ಅವರ ಕೊಲೆ ಪ್ರಕರಣ ವಿಚಾರವಾಗಿ ನಾವು ಹೋರಾಟ ಮಾಡುತ್ತಲೇ ಬಂದಿದ್ದೇವೆ. ಎಲ್ಲ ಆಯಾಮಗಳು ಏನಾಗಿವೆ ಎಂಬುದು ಎಲ್ಲರಿಗೆ ಗೊತ್ತು. ಕೊಲೆಯಲ್ಲಿ ಬಾಗಿಯಾದವರು ಈಗಾಗಲೆ ಜೈಲಿಗೆ ಹೋಗಿ ಬಂದಿದ್ದಾರೆ. ಮಾಜಿ ಸಚಿವ ವಿನಯ ಕುಲಕರ್ಣಿ ಹುಟ್ಟುಹಬ್ಬವನ್ನ ಆಚರಣೆ ಮಾಡಿಕೊಂಡಿದ್ದಾರೆ. ಜನ್ಮದಿನದ ಕಾರ್ಯಕ್ರಮದಲ್ಲಿ ವಿನಯ ಕುಲಕರ್ಣಿ ಅವರನ್ನ ರಾಜಕೀಯ ಷಡ್ಯಂತ್ರ ದಿಂದ ಮುಗಿಸುವ ಹುನ್ನಾರ ನಡೆಯುತ್ತಿದೆ ಎಂದು ಬಹಿರಂಗ ಹೇಳಿಕೆಯನ್ನ ವಿನಯ ಕುಲಕರ್ಣಿ ಅವರು ನೀಡಿದ್ದಾರೆ.
ಸುಪ್ರಿಂ ಕೋರ್ಟ್‌ಗೆ ಮಾಜಿ ಸಚಿವ ವಿನಯ ಕುಲಕರ್ಣಿ ಅವರೆ ಷರತ್ತುಬದ್ಧ ಮುಚ್ಚಳಿಕೆ ಬರೆದುಕ್ಕೊಟ್ಟವರು, ನಾವಲ್ಲ. ನಾವ್ಯಾಕೆ ಅವರನ್ನ ಜಿಲ್ಲೆಯಿಂದ ಹೊರಗೆ ಇಡಲು ಪ್ರಯತ್ನ ಮಾಡುತ್ತೆವೆ. ನಾವು ಅವರನ್ನ ರಾಜಕೀಯವಾಗಿ ಜಿಲ್ಲೆಗೆ ಎಂಟ್ರಿ ಆಗದಂತೆ ಮಾಡಲಿಕ್ಕೆ ಆಗುತ್ತಾ? ಎಲ್ಲವೂ ಕೋರ್ಟ್ ತೀರ್ಮಾನ ಮಾಡುತ್ತದೆ.
195 A ಅಡಿಯಲ್ಲಿ ಇಂತಹ ಪ್ರಕರಣಗಳಲ್ಲಿ ಜಿಲ್ಲೆಯಿಂದ ಹೊರಗಿಡಲಾಗುತ್ತಿದೆ ನಾನು ಇದರಲ್ಲಿ ಬಲಿಪಶುವಾದೆ ಎಂದು ವಿನಯ ಕುಲಕರ್ಣಿ ಹೇಳಿಕ್ಕೊಳ್ಳುತ್ತಿದ್ದಾರೆ. ನಾವು 2016 ರಲ್ಲಿ ಜೂನ್ ತಿಂಗಳಿಂದ ಹೋರಾಟ ಮಾಡುತ್ತಾ ಬಂದಿದ್ದೇವೆ. ಮೈತ್ರಿ ಸರಕಾರದಲ್ಲಿ 195 A ಅಡಿಯಲ್ಲಿ ದಾಖಲಾಗಿದ್ದ ಪ್ರಕರಣವನ್ನ ಬಿ ಫಾಲ್ಸ್ ಮಾಡಿದ್ರು. ಆದರೆ ಬಿಜೆಪಿ ಸರಕಾರ ಆಡಳಿತ ಬಂದ ಮೇಲೆ ಪ್ರಕರಣವನ್ನ ಸಿಬಿಐಗೆ ವಹಿಸಿತ್ತು. ಆದರೆ ಅಧಿಕಾರ ದುರ್ಬಳಕೆ ಮಾಡಿಕ್ಕೊಂಡವರು ಅವರಾ? ನಾವಾ..?
ಸಿಬಿಐ ಅಧಿಕಾರಿಗಳ ವಿಚಾರಣೆಯಲ್ಲಿ ದಾಖಲಾತಿಗಳಿಂದ ಅವರನ್ನ ಬಂಧನ ಮಾಡಲಾಗಿತ್ತು.
ರಾಷ್ಟ್ರದ ಪ್ರಭಾವಿ ನಾಯಕ ಸಿದ್ದರಾಮಯ್ಯ, ಡಿಕೆಶಿ ಅವರು ಬರ್ತಡೇ ಭಾಗಿಯಾಗಿದ್ರು. ಸಿದ್ದರಾಮಯ್ಯ ಸಮಾಜಕ್ಕೆ ಸಂದೇಶ ಕೊಡ್ತಿದ್ದಾರೆ? ಬಲಿಪಶುವಾದವರು ಬಸವರಾಜ ಕೊರವರ, ಗುರುನಾಥ್ ಗೌಡ ಗುರುನಾಥ್ ಗೌಡ್ ರ ಮೆಲೆ ಸುಖಾ ಸುಮ್ಮನೆ ಸುಳ್ಳು ಕೇಸ್ ಹಾಕಿದ್ರು. ವಿನಯ ಕುಲಕರ್ಣಿ ಅವರು ತೋಳುಬಲ ಹಣಬಲ ಇದ್ದವರು ತಪ್ಪಿತಸ್ಥರ ವಿರುದ್ಧ ಕೋರ್ಟ್ ನಿರ್ಣಯ ತೆಗೆದುಕ್ಕೊಳ್ಳುತ್ತೇವೆ.
ವಿನಯ ಕುಲಕರ್ಣಿ ಅವರು ಕೊಡುತ್ತಿರುವ ಹೇಳಿಕೆಗೆ ನಾವು ಬೇಲ್ ಕ್ಯಾನ್ಸ್ ಲ್ ಗೆ ಕೋರ್ಟ್‌ಗೆ ಮೊರೆ ಹೋಗಬೇಕಾಗುತ್ತೆ ಎಂದು ಎಚ್ಚರಿಕೆ ನೀಡಿದ್ದಾರೆ. ಅವರ ಕೇಸ್ ನಲ್ಲಿ 10,000 ಪುಟಗಳ ಚಾರ್ಜ್ ಶೀಟ್ ಸಲ್ಲಿಕೆಯಾಗಿದೆ. ವಿನಯ ಕುಲಕರ್ಣಿ ಅವರೆ ನಿಮ್ಮ ರಾಜಕೀಯ ಕಾರ್ಯಕ್ರಮಗಳಲ್ಲಿ ಸಾಕ್ಷಿಗಳಿಗೆ ಬೆದರಿಕೆ ಹಾಕಬೇಡಿ. ಸಿದ್ದರಾಮಯ್ಯ ಸಿಎಂ ಆಗಿದ್ದಾಗ ಮೂರು ಬಾರಿ ಮನವಿ ಮಾಡಿಕೊಂಡರೂ ಕ‌್ಯಾರೆ ಎನ್ನಲಿಲ್ಲ. ಭೂ ವಿವಾದಕ್ಕೆ ಸಂಬಂಧಪಟ್ಟ ಪ್ರಕರಣ ಎಂದು ಹೇಳಿಕೆ ಕೊಟ್ಟಿದ್ದಾರೆ. ವಿ ಕೆ ಅವರ ಮೇಲೆ ಆರೋಪ ಇದೆ. ಕೋರ್ಟ್ ತೀರ್ಮಾನ ಆಗೋವರೆಗೂ ಹೇಳಿಕೆ ಕೊಡಬೇಡಿ. ಯೋಗೀಶ್ ಗೌಡರಿಗೆ ನ್ಯಾಯ ಸಿಗಬೇಕು ಧಾರವಾಡದಲ್ಲಿ ಚುನಾಯಿತ ಪ್ರತಿನಿಧಿಗಳು ಕೊಲೆ ಆಗ್ತಾ ಇದ್ದಾರೆ ಎಂದು ಹೇಳಿಕೊಂಡರು.
ನಾವು ಯಾರ ಒತ್ತಡಕ್ಕೆ ಮಣಿದಿಲ್ಲ. ಅಮೃತ ದೇಸಾಯಿ ಅವರು ನನ್ನ ಸ್ನೆಹಿತ ಅಷ್ಟೆ; ರಾಜಕೀಯದಲ್ಲಿ ಅವರೆ ಬೇರೆ ನಾವೇ ಬೇರೆ. ನಾವು ಯಾರ ವಿರುದ್ಧ ಹೋರಾಟ ಮಾಡ್ತಿಲ್ಲ. ನ್ಯಾಯದ ಪರವಾಗಿ ಹೋರಾಟ ಮಾಡುತ್ತಿದ್ದೇವೆ. ಮತ್ತೊಬ್ಬರು ಯೋಗೀಶ್ ಗೌಡರ ತರ ಕೊಲೆ ಆಗೋದು ಬೇಡವೆಂದು ಪತ್ರಿಕಾಗೋಷ್ಠಿಯಲ್ಲಿ ಬಸವರಾಜ ಕೊರವರ ಹೇಳಿದರು.
ಬಳಿಕ ಮಾತನಾಡಿದ ಗುರುನಾಥ್ ಗೌಡ, ವಿನಯ ಕುಲಕರ್ಣಿ ಅವರು ಸುಪಾರಿ ಕೊಟ್ಟು ನಮ್ಮ ಸಹೋದರ ನನ್ನ ಕೊಲೆ ಮಾಡಿಸಿದ್ದಾರೆ. ನಾವು ಹೋರಾಟ ಮಾಡಿದ್ದೇವೆ. ನಮ್ಮ ತಮ್ಮನ ಸಾವಿಗೆ ಕಾರಣ ವಿನಯ ಕುಲಕರ್ಣಿ ಮಾಧ್ಯಮಗಳಲ್ಲಿ ಎಲ್ಲವೂ ಗೊತ್ತಾಗಿದೆ. ವಿನಯ ಕುಲಕರ್ಣಿ ಅವರೇ ಇದು ಬಿಜೆಪಿ ಅವರ ಷ್ಯಡ್ಯಂತ್ರ ಅಲ್ಲ; ನಿಮ್ಮನ್ನ ಬಿಜೆಪಿ ಅವರು ಮುಗಿಸಲಿಕ್ಕೆ ಪ್ರಯತ್ನ ಮಾಡಿಲ್ಲ. ಯಡಿಯೂರಪ್ಪ ಅವರು ಪ್ರಕರಣವನ್ನ ಸಿಬಿಐಗೆ ವಹಿಸಿದ್ರು ಅದರಲ್ಲಿ ವಿನಯ ಕುಲಕರ್ಣಿ ಅವರು ಅರೆಸ್ಟ್ ಆಗಬೇಕಾಯಿತು ಎಂದರು.
ಯೋಗೀಶ್ ಹತ್ಯೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್: ಮತ್ತೊಬ್ಬರ ಹತ್ಯೆಗೆ ವಿನಯ್ ಕುಲಕರ್ಣಿ ಸ್ಕೆಚ್?
ಆದರೆ 40 ವರ್ಷದ ಯೋಗಿಶಗೌಡ ನಮ್ಮ ತಮ್ಮ. ನನ್ನ ತಮ್ಮನನ್ನು ಕಳೆದುಕೊಂಡಿದ್ದೇವೆ. ನಮಗೆ ಎಷ್ಟು ನೋವು ಆಗಿರಬಾರದು? ಕೇಸ್ ನಿಂದ ಮುಕ್ತವಾಗಿ ಅನಂತರ ನೀವು ಧಾರವಾಡಕ್ಕೆ ಬಂದು ಬರ್ತಡೇ ಆಚರಣೆ ಮಾಡಿಕ್ಕೊಳ್ಳಲಿ ಎಂದು ಗುರುನಾಥ್ ಗೌಡರು ಪತ್ರಿಕಾಗೋಷ್ಟಿಯಲ್ಲಿ ಹೇಳಿದರು.