ಹೈದರಾಬಾದ್: ಪತಿಯೊಂದಿಗೆ ಅನೈತಿಕ ಸಂಬಂಧ ಶಂಕೆ: ಮಹಿಳೆ ಮೇಲೆ ಐವರಿಂದ ರೇಪ್ ಮಾಡಿಸಿ ವಿಡಿಯೋ ಚಿತ್ರೀಕರಿಸಿದ ಪತ್ನಿ

By Suvarna News  |  First Published May 31, 2022, 3:35 PM IST

ತನ್ನ ಪತಿಯೊಂದಿಗೆ ಸಂಬಂಧ ಹೊಂದಿದ್ದ ಮಹಿಳೆಯ ಮೇಲೆ ಸೇಡು ತೀರಿಸಿಕೊಳ್ಳಲು ಹೈದರಾಬಾದ್ ಮಹಿಳೆಯೊಬ್ಬರು  ಆಕೆಯ ಮೇಲೆ ಸಾಮೂಹಿಕ ಅತ್ಯಾಚಾರ ಗೂಂಡಾಗಳನ್ನು ನೇಮಿಸಿದ್ದು, ಕೃತ್ಯವನ್ನು ಚಿತ್ರೀಕರಿಸಿದ್ದಾರೆ.


ಹೈದರಾಬಾದ್ (ಮೇ 31):  ತನ್ನ ಪತಿ ವಿವಾಹೇತರ ಸಂಬಂಧವನ್ನು ಹೊಂದಿದ್ದಾನೆ ಎಂದು ಅನುಮಾನಗೊಂಡ ಮಹಿಳೆಯೊಬ್ಬರು, ಪತಿ ಜತೆ ಸಂಬಂಧ ಹೊಂದಿದ್ದ ಮಹಿಳೆಯ ಮೇಲೆ ಸೇಡು ತೀರಿಸಿಕೊಳ್ಳಲು ಸಾಮೂಹಿಕ ಅತ್ಯಾಚಾರ (Rape) ಮತ್ತು ಸಂಪೂರ್ಣ ಕೃತ್ಯವನ್ನು ಚಿತ್ರೀಕರಿಸಲು ಐದು ರೌಡಿಗಳನ್ನು ನೇಮಿಸಿಕೊಂಡಿದ್ದರು ಎಂದು ಸೈಬರಾಬಾದ್ ಪೊಲೀಸರು ತಿಳಿಸಿದ್ದಾರೆ. ಪಶ್ಚಿಮ ಹೈದರಾಬಾದ್‌ನ ಉಪನಗರವಾದ ಕೊಂಡಾಪುರದ ಶ್ರೀರಾಮನಗರ ಕಾಲೋನಿಯಲ್ಲಿ ಗುರುವಾರ (ಮೇ 26) ಈ ಘಟನೆ ನಡೆದಿದೆ. ಪ್ರಮುಖ ಆರೋಪಿ ಗಾಯತ್ರಿ ತನ್ನ ಪತಿಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದ ಮಹಿಳೆಯ ಮೇಲೆ ಸೇಡು ತೀರಿಸಿಕೊಳ್ಳಲು ಯೋಜನೆ ರೂಪಿಸಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ.

ಸೈಬರಾಬಾದ್ ಪೊಲೀಸರ ಪ್ರಕಾರ, ಗಾಯತ್ರಿ ಅವರ ಪತಿ ಶ್ರೀಕಾಂತ್ ಮತ್ತು ಸಂತ್ರಸ್ತೆ ಯುಪಿಎಸ್‌ಸಿ ಪರೀಕ್ಷೆಗೆ (UPSC Exam) ತಯಾರಿ ನಡೆಸುತ್ತಿರುವಾಗ ಸ್ನೇಹಿತರಾದರು. ಸಂತ್ರಸ್ತೆ ದಂಪತಿಯ ಮನೆಗೆ ಆಗಾಗ್ಗೆ ಭೇಟಿ ನೀಡುತ್ತಿದ್ದರು ಮತ್ತು ಅಕ್ಟೋಬರ್ 2021 ರಿಂದ ಫೆಬ್ರವರಿ 2022 ರವರೆಗೆ ಅಲ್ಲಿಯೇ ಇದ್ದರು.

Tap to resize

Latest Videos

ಇದನ್ನೂ ಓದಿ: ಅಪ್ರಾಪ್ತೆ ಮೇಲೆ ನಾಲ್ವರ ಗ್ಯಾಂಗ್ ರೇಪ್, ಚಿತ್ರೀಕರಿಸಿ ವಿಡಿಯೋ ಹರಿಬಿಟ್ಟ ದುರುಳರು!

ಆದರೆ,  ಗಾಯತ್ರಿಗೆ ತನ್ನ ಪತಿ ಮತ್ತು ಸಂತ್ರಸ್ತೆ ಅನೈತಿಕ ಸಂಬಂಧ ಹೊಂದಿದ್ದಾರೆ ಎಂದು ಅನುಮಾನ ಬಂದಾಗ ಪರಿಸ್ಥಿತಿ ಬದಲಾಗಿದೆ. ಶ್ರೀಕಾಂತ್  ಅವರ ಪತ್ನಿಯೊಂದಿಗೆ ಹಲವಾರು ವಾದ ವಿವಾದಗಳ  ನಂತರ ಸಂತ್ರಸ್ತೆ ಮನೆಯಿಂದ ಹೊರಬಂದಿದ್ದರು. 

ಮೇ 26 ರಂದು ಗಾಯತ್ರಿ ತಮ್ಮನ್ನು ತನ್ನ ಮನೆಗೆ ಕರೆಸಿಕೊಂಡಿದ್ದಳು ಎಂದು ಸಂತ್ರಸ್ತೆ ಪೊಲೀಸರಿಗೆ ನೀಡಿದ ದೂರಿನಲ್ಲಿ ಆರೋಪಿಸಿದ್ದಾರೆ. ಅವಳು ಅಲ್ಲಿಗೆ ಹೋದಾಗ ಐದು ರೌಡಿಗಳು ಅವಳ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿದರು. ಪುರುಷರು ಈ ಕೃತ್ಯವನ್ನು ಚಿತ್ರೀಕರಿಸಿದರು ಅಲ್ಲದೇ  ಸಂತ್ರಸ್ತೆಯನ್ನು ಬಿಟ್ಟುಬಿಡುವ ಮೊದಲು ಪೊಲೀಸರನ್ನು ಸಂಪರ್ಕಿಸಿದರೆ ಭೀಕರ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದು ಬೆದರಿಕೆ ಹಾಕಿದರು. ದೂರು ದಾಖಲಿಸಿಕೊಂಡ ಪೊಲೀಸರು ಪ್ರಮುಖ ಆರೋಪಿ ಗಾಯತ್ರಿ ಸೇರಿದಂತೆ ಆರು ಮಂದಿಯನ್ನು ಬಂಧಿಸಿದ್ದಾರೆ. ಹೆಚ್ಚಿನ ತನಿಖೆ ನಡೆಯುತ್ತಿದೆ.

ಇದನ್ನೂ ಓದಿ: ಮುಂಬೈ: ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಶಾಲಾ ಪ್ಯೂನ್‌ ಬಂಧನ

click me!