ಕೇರಳದಿಂದ ವರದಿಯಾದ ದಾರುಣ ಘಟನೆ/ ಮಗುವಿನ ಮುಂದೆಯೇ ತಾಯಿ ಮೇಲೆ ಅತ್ಯಾಚಾರ/ ಗಂಡನೇ ಪ್ರಮುಖ ಆರೋಪಿ/ ಅತ್ಯಾಚಾರ ಮಾಡಿ ಸಿಗರೇಟ್ ನಿಂದ ಸುಟ್ಟ ಪಾಪಿಗಳು
ತಿರುವನಂತಪುರ(ಜೂ. 05) 5 ವರ್ಷದ ಮಗನ ಮುಂದೆಯೇ ತಾಯಿಯ ಮೇಲೆ ಅತ್ಯಾಚಾರ ಮಾಡಿದ ದುರುಳರು ಸಿಗರೇಟ್ ನಿಂದ ಆಕೆಯನ್ನು ಕಂಡಕಂಡಲ್ಲಿ ಸುಟ್ಟಿದ್ದಾರೆ.
ಕೇರಳ ತಿರುವನಂತಪುರ ಹೊರವಲಯದಿಂದ ದಾರುಣ ಘಟನೆ ವರದಿಯಾಗಿದೆ. ಪ್ರಕರಣಕ್ಕೆ ಸಂಬಂಧಿಸಿ ಮಹಿಳೆ ಪತಿಸೇರಿ ಐವರನ್ನು ಬಂಧಿಸಲಾಗಿದೆ.
ನನ್ನ ಮತ್ತು ನನ್ನ ಮಗನನ್ನು ಗಂಡ ಹತ್ತಿರದ ಬೀಚ್‌ಗೆ ಕರೆದುಕೊಂಡು ಹೋಗಿದ್ದ. ಅಲ್ಲಿ ಅವರ ಸ್ನೇಹಿತರ ಮನೆಗೂ ಕರೆದೊಯ್ದಿದ್ದ. ಇದಾದ ಮೇಲೆ ನನಗೆ ಒತ್ತಾಯ ಪೂರ್ವಕವಾಗಿ ಮದ್ಯ ಕುಡಿಸಲಾಗಿದೆ. ಅಲ್ಲಿಂದ ನನ್ನನ್ನು ಖಾಲಿ ಇರುವ ಫ್ಲಾಟ್ ಒಂದಕ್ಕೆ ಕರೆದುಕೊಂಡು ಹೋಗಲಾಗಿದೆ ಎಂದು ಮಹಿಳೆ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ವಿವಾಹಿತನ ಕಾಮದಾಟದಿಂದ ಮಗುವಿಗೆ ಜನ್ಮ ನೀಡಿದ ಬಾಲಕಿ
ಖಾಲಿ ಫ್ಲಾಟ್ ನಲ್ಲಿ ನನ್ನ ಮೇಲೆ ದೌರ್ಜನ್ಯ ಮಾಡಲಾಗಿದೆ. ಸಿಗರೇಟಿನಿಂದ ಕಂಡಕಂಡಲ್ಲಿ ಸುಟ್ಟಿದ್ದಾರೆ. ಮುಖಕ್ಕೆ ಬಾರಿಸಿದ್ದಾರೆ ಎಂದು ನೋವು ಹೇಳಿಕೊಂಡಿದ್ದಾರೆ.
ಮಹಿಳೆಯ ಪುಟ್ಟ ಕಂದನ ಮೇಲೆಯೂ ದಾಳಿ ಮಾಡಲಾಗಿದೆ. ಮಗುವನ್ನು ಮನೆಗೆ ಡ್ರಾಪ್ ಮಾಡಿ ಮತ್ತೆ ಇಲ್ಲಿಗೆ ಬರುವಂತೆ ದುರುಳರು ಆರ್ಡರ್ ಮಾಡಿದ್ದಾರೆ.
ಅಲ್ಲಿಂದ ಜೀವ ಉಳಿಸಿಕೊಂಡು ಬಂದ ಮಹಿಳೆ ದಾರಿಹೋಕರೊಬ್ಬರ ಬಳಿ ವಿಷಯ ಹೇಳಿಕೊಂಡಿದ್ದಾರೆ. ನಂತರ ಪೊಲೀಸರಿಗೆ ಸಂಗತಿ ತಿಳಿಸಲಾಗಿದೆ.
ನೊಂದ ಮಹಿಳೆಯ ಗಂಡನೇ ಈ ಪ್ರಕರಣದಲ್ಲಿ ಪ್ರಮುಖ ಆರೋಪಿ. ದೂರು ನೀಡಬೇಡ ಎಂದು ಒತ್ತಾಐ ಸಹ ಮಾಡಿದ್ದ. ಬಂಧಿತ ಕೆಲವರಿಗೆ ಕ್ರಿಮಿನಲ್ ಹಿನ್ನಲೆಯೂ ಇದೆ ಎಂದು ತಿರುವನಂತಪುರ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಮಹಿಳಾ ಆಯೋಗ ಮತ್ತು ಮಕ್ಕಳ ಆಯೋಗ ಸಹ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದು ಆರೋಪಿಗಳ ಮೇಲೆ ಪ್ರಕರಣ ದಾಖಲಿಸಿಕೊಂಡಿದೆ.