* ಪ್ರಿಯಕರನ ಜೊತೆ ಸೇರಿ ಪತಿ ಹತ್ಯೆ ಮಾಡಿದ ಪತ್ನಿ
* 9 ತಿಂಗಳ ನಂತರ ಕೊಲೆ ಪ್ರಕರಣ ಭೇಧಿಸಿದ ಪೊಲೀಸರು
* ಪತ್ನಿ ಉಮಾ ಮತ್ತು ಪ್ರಿಯಕರ ಅವಿನಾಶ್ ಬಂಧನ
* ಬನ್ನೂರು ಪೊಲೀಸರ ಕಾರ್ಯಾಚರಣೆ
ಮೈಸೂರು(ಜು. 19) ಪ್ರಿಯಕರನ ಜೊತೆ ಸೇರಿ ಪತಿ ಹತ್ಯೆ ಮಾಡಿದ ಪತ್ನಿ ಇದಿಗ ಪೊಲೀಸರ ಆತಿಥ್ಯದಲ್ಲಿದ್ದಾಳೆ. 9 ತಿಂಗಳ ನಂತರ ಕೊಲೆ ಪ್ರಕರಣವನ್ನು ಪೊಲೀಸರು ಪತ್ತೆ ಮಾಡಿದ್ದಾರೆ.
ಪತ್ನಿ ಉಮಾ (29) ಮತ್ತು ಪ್ರಿಯಕರ ಅವಿನಾಶ್ ಬಂಧನವಾಗಿದೆ. ಬನ್ನೂರು ಪೊಲೀಸರು ಕಾರ್ಯಾಚರಣೆ ನಡೆಸು ಅಕ್ಟೋಬರ್ 2020ರಲ್ಲಿ ನಡೆದಿದ್ದ ಕೊಲೆ ಪ್ರಕರಣ ಪತ್ತೆ ಮಾಡಿದ್ದಾರೆ. ವೆಂಕಟರಾಜು (50) ಹತ್ಯೆಯಾಗಿದ್ದ.
ಮೈಸೂರು ಜಿಲ್ಲೆ ಟಿ ನರಸೀಪುರ ತಾಲೂಕಿನ ಹುಣಸಗಳ್ಳಿ ಗ್ರಾಮದಲ್ಲಿ ಕೊಲೆ ನಡೆದಿತ್ತು. ವೆಂಕಟರಾಜು ಮೂಲತಃ ಮಂಡ್ಯ ಜಿಲ್ಲೆ ಹೊನಗಾನಹಳ್ಳಿ ಗ್ರಾಮದ ನಿವಾಸಿ. 10 ವರ್ಷದ ಹಿಂದೆ ಉಮಾಳನ್ನು ಮದುವೆಯಾಗಿದ್ದ. ಉಮಾ ಶ್ರೀರಂಗಪಟ್ಟಣ ತಾಲ್ಲೂಕಿನ ಬಳ್ಳೆಕೆರೆ ಗ್ರಾಮದ ನಿವಾಸಿ.
ಆಂಟಿ ಪ್ರೀತ್ಸೆ... ಬೀದಿ ಹೆಣವಾಗಿದ್ದ ಬಾಡಿ ಬಿಲ್ಡರ್
8 ವರ್ಷದ ಒಂದು ಹೆಣ್ಣು ಮಗು 6 ವರ್ಷದ ಗಂಡು ಮಗು ದಂಪತಿಗೆ ಇದೆ. ವಯಸ್ಸಿನ ಅಂತರದಿಂದಾಗಿ ಗಂಡ ಹೆಂಡತಿ ನಡುವೆ ಬಿರುಕು ಬಂದಿತ್ತು. ಈ ವೇಳೆ ಉಮಾಗೆ ಅವಿನಾಶ್ ಹತ್ತಿರವಾಗಿದ್ದ. ಅವಿನಾಶ್ ಉಮಾ ಪಕ್ಕದ ಮನೆಯ ನಿವಾಸಿಯಾಗಿದ್ದ. ಇಬ್ಬರು ಸೇರಿ ವೆಂಕಟರಾಜು ಹತ್ಯೆ ಮಾಡಿದ್ದರು.
ಅವಿನಾಶ್ ಅಜ್ಜಿ ಮನೆ ಹುಣಸಗಳ್ಳಿಗೆ ಕರೆಸಿಕೊಂಡು ಕೊಲೆ ಮಾಡಲಾಗಿತ್ತು. ಕಾಫಿಯಲ್ಲಿ ನಿದ್ದೆ ಮಾತ್ರೆ ಬೆರೆಸಿದ ಆರೋಪಿಗಳು ನಿದ್ರಾವಸ್ಥೆಯಲ್ಲಿದ್ದಾಗ ದೇಹದ ಖಾಸಗಿ ಭಾಗದ ಮೇಲೆ ಹಲ್ಲೆ ಮಾಡಿ ದಿಂಬಿನಿಂದ ಉಸಿರುಗಟ್ಟಿಸಿ ಕೊಲೆ ಮಾಡಿದ್ದಾರೆ. ನಂತರ ಸ್ವಾಭಾವಿಕ ಸಾವು ಎಂಬಂತೆ ಬಿಂಬಿಸಿದ್ದೆರು.