* ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನಲ್ಲಿ ನಡೆದ ಘಟನೆ
* ನಾಲ್ವರ ವಿರುದ್ಧ ದೂರು ದಾಖಲು
* ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿರುವ ಪೊಲೀಸರು
ಯಲ್ಲಾಪುರ(ಜು.09): ವಿರಿಸಿಕೊಂಡಿದ್ದ ಮಹಿಳೆಯೊಬ್ಬಳು ತನ್ನ ಕುಟುಂಬದವರೊಂದಿಗೆ ಸೇರಿಕೊಂಡು ತನ್ನ ಪತಿಯನ್ನೇ ಹತ್ಯೆ ಮಾಡಿ ಮೃತ ದೇಹ ನಾಪತ್ತೆ ಮಾಡಿದ್ದಾರೆ ಎಂದು ಯಲ್ಲಾಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ತಾಲೂಕಿನ ಅತ್ತಗಾರ್ ಬಳಗಾರಿನ ರಾಜೇಶ್ ನಾರಾಯಣ ನಾಯ್ಕ (29) ಹಾಲಿ ವಸತಿ ಚಿಕ್ಕ ಮಾವಳ್ಳಿ ಈತ ಕಾಣೆಯಾದ ಬಗ್ಗೆ ಜೂ. 14ರಂದು ಪೊಲೀಸ್ ಠಾಣೆಯಲ್ಲಿ ಈತನ ಪತ್ನಿ ಶ್ವೇತಾ ರಾಜೇಶ್ ನಾಯ್ಕ(29) ದೂರು ದಾಖಲಿಸಿದ್ದಳು.
ಅನೈತಿಕ ಸಂಬಂಧಕ್ಕೆ ಅಡ್ಡಿಯಾದ ಪತಿ ಕೊಲೆ : ಲವರ್ ಜೊತೆ ಸೇರಿ ಕೊಂದಳು
ಇಷ್ಟು ದಿನಗಳಾದರೂ ನಾಪತ್ತೆ ಆದ ವ್ಯಕ್ತಿಯ ಸುಳಿವಿರಲಿಲ್ಲ. ರಾಜೇಶನ ಪತ್ನಿ ಶ್ವೇತಾ ಬೇರೆಯವರ ಜತೆ ಅನೈತಿಕ ಸಂಬಂಧವಿರಿಸಿಕೊಂಡಿದ್ದಳು ಎಂದು ಮನೆಯಲ್ಲಿ ಆಗಾಗ ಜಗಳವಾಗುತ್ತಿತ್ತು. ಎಷ್ಟು ರಾಜಿ ಪಂಚಾಯ್ತಿ ಮಾಡಿದರೂ ಸುಧಾರಿಸಿರಲಿಲ್ಲ ಎಂದು ಹೇಳಲಾಗುತ್ತಿದೆ.
ಜೂ. 10ರಂದು ರಾತ್ರಿ 7ರಿಂದ 8.30ರ ನಡುವೆ ಚಿಕ್ಕ ಮಾವಳ್ಳಿಯ ರಾಜೇಶನ ಮನೆಯಲ್ಲಿ ಶ್ವೇತಾ, ತಂದೆ ದೀಪಕ ಮರಾಠಿ (53), ತಮ್ಮ ಗಂಗಾಧರ (26) ಹಾಗೂ ತಾಯಿ ಯಮುನಾ (50) ಸೇರಿಕೊಂಡು ಹೊಡೆದು ಸಾಯಿಸಿ ಮೃತದೇಹವನ್ನು ಎಲ್ಲಿಯೋ ನಾಪತ್ತೆ ಮಾಡಿದ್ದಾರೆ ಎಂದು ರಾಜೇಶನ ಅಕ್ಕ ದೀಪಾ ನಾರಾಯಣ ನಾಯ್ಕ (30) ದೂರು ದಾಖಲಿಸಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ.