ಪೋರ್ನ್‌ ವಿಡಿಯೋ ಮರುಸೃಷ್ಟಿಗೆ ಮೂವರು ಅಪ್ರಾಪ್ತರಿಂದ 3ನೇ ಕ್ಲಾಸ್ ಬಾಲಕಿ ಮೇಲೆ ರೇಪ್, ಕೊಲೆ

By Kannadaprabha News  |  First Published Jul 18, 2024, 8:05 AM IST

ಬಂಧಿತರು ವಿಚಾರಣೆ ವೇಳೆ, ‘ಬ್ಲೂಫಿಲಂ ನೋಡಿ ಅದರ ಮರುಸೃಷ್ಟಿಗೆ ತಾವು ಹೀಗೆ ಮಾಡಿದ್ದೆವು’ ಎಂದು ತಪ್ಪೊಪ್ಪಿಕೊಂಡಿದ್ದಾರೆ


ನಂದ್ಯಾಲ: ಜು.7ರಂದು ಆಂಧ್ರಪ್ರದೇಶದ ನಂದ್ಯಾಲ ಜಿಲ್ಲೆಯಲ್ಲಿ 8 ವರ್ಷದ ಬಾಲಕಿ ಮೇಲೆ ಮೂವರು ಅಪ್ರಾಪ್ತ ಬಾಲಕರು ನಡೆಸಿದ್ದ ಗ್ಯಾಂಗ್‌ರೇಪ್‌ಗೆ, ಅವರು ಪೋರ್ನ್‌ ವಿಡಿಯೋ ನೋಡಿ ಅದೇ ಘಟನೆಯನ್ನು ಮರುಸೃಷ್ಟಿ ಮಾಡಲು ಯತ್ನಿಸಿದ್ದೇ ಕಾರಣ ಎಂಬ ಆಘಾತಕಾರಿ ವಿಷಯ ಬೆಳಕಿಗೆ ಬಂದಿದೆ. ಬಂಧಿತರು ವಿಚಾರಣೆ ವೇಳೆ, ‘ಬ್ಲೂಫಿಲಂ ನೋಡಿ ಅದರ ಮರುಸೃಷ್ಟಿಗೆ ತಾವು ಹೀಗೆ ಮಾಡಿದ್ದೆವು’ ಎಂದು ತಪ್ಪೊಪ್ಪಿಕೊಂಡಿದ್ದಾರೆ

ಮೊಬೈಲ್‌ನಲ್ಲಿ ಅಶ್ಲೀಲ ವಿಡಿಯೋ ನೋಡಿದ್ದ 6 ಮತ್ತು 7ನೇ ತರಗತಿಯ ಮೂವರು ಬಾಲಕರು, ತಮ್ಮ ಮನೆಯ ಸಮೀಪದ ಬಾಲಕಿಯನ್ನು ನಿರ್ಜನ ಪ್ರದೇಶಕ್ಕೆ ಕರೆದೊಯ್ದು ವಿಡಿಯೋದಲ್ಲಿದ್ದಂತೆ ಗ್ಯಾಂಗ್‌ರೇಪ್‌ ಮಾಡಿದ್ದರು. ಬಳಿಕ ಆಕೆ ಈ ವಿಷಯ ಬಹಿರಂಗಪಡಿಸಬಹುದೆಂದು ಹೆದರಿ ಆಕೆಯ ಕತ್ತುಹಿಸುಕಿ ಹತ್ಯೆಗೈದು ಸಮೀಪದ ಕಾಲುವೆಗೆ ಎಸೆದಿದ್ದರು. ಬಾಲಕರ ಇಬ್ಬರ ವಯಸ್ಸು 12 ಮತ್ತೋರ್ವನ ವಯಸ್ಸು 13. ಇನ್ನು ಬಾಲಕಿ 3ನೇ ತರಗತಿಯಲ್ಲಿ ಓದುತ್ತಿದ್ದಳು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

Tap to resize

Latest Videos

ಎನ್‌ಡಿಆರ್‌ಎಫ್ ಸಿಬ್ಬಂದಿಯಿಂದ ಶೋಧ ಕಾರ್ಯ

ಬಳಿಕ ಒಬ್ಬ ಬಾಲಕ ಈ ವಿಷಯವನ್ನು ಪೋಷಕರಿಗೆ ತಿಳಿಸಿದ್ದ. ಈ ಹಿನ್ನೆಲೆಯಲ್ಲಿ ಬಾಲಕನ ತಂದೆ ಮತ್ತು ಬಂಧುವೊಬ್ಬರು ಕಾಲುವೆಯಿಂದ ಶವ ತೆಗೆದು ಅದಕ್ಕೆ ಕಲ್ಲು ಕಟ್ಟಿ ಸಮೀಪದ ಕೃಷ್ಣಾ ನದಿಯಲ್ಲಿ ಎಸೆದಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಪ್ರಕರಣ ಸಂಬಂಧ ಈಗಾಗಲೇ ಮೂವರು ಬಾಲಕರು, ಇಬ್ಬರು ಹಿರಿಯರನ್ನು ಬಂಧಿಸಲಾಗಿದೆ. ಆದರೆ ಬಾಲಕಿಯ ಶವ ಇನ್ನೂ ಸಿಕ್ಕಿಲ್ಲ. ಎನ್‌ಡಿಆರ್‌ಎಫ್ ಸಿಬ್ಬಂದಿಯಿಂದ ಶೋಧ ಕಾರ್ಯ ನಡೆಸಲಾಗುತ್ತಿದೆ. 

ಕಂಡಕ್ಟರ್ ಎದೆ, ಪ್ರೈವೇಟ್ ಪಾರ್ಟ್ ಟಚ್ ಮಾಡಿದ; ಬಸ್‌ನಲ್ಲಿ ಮಹಿಳೆಗೆ ಲೈಂಗಿಕ ಕಿರುಕುಳ

ಆಸೆ ತೋರಿಸಿ ಬಾಲಕಿಯನ್ನು ಕರೆದೊಯ್ದಿದ್ದರು!

ಪ್ರಕರಣದ ಕುರಿತು ಮಾಹಿತಿ ನೀಡಿರುವ ನಂದ್ಯಾಲ ಎಸ್‌ಪಿ ಆದಿರಾಜ್ ಸಿಂಗ್ ರಾಣಾ, ಜುಲೈ 7 ರಂದು ಈ ಘಟನೆ ನಡೆದಿದ್ದು, ಆರೋಪಿಗಳನ್ನು ಜುಲೈ 10ರಂದು ಬಂಧಿಸಲಾಗಿದೆ. 3ನೇ ಬಾಲಕಿಗೆ ತಿಂಡಿ ಕೊಡಿಸೋದಾಗಿ ಆಸೆ ತೋರಿಸಿ ಬಾಲಕರು ಕರೆದುಕೊಂಡು ಹೋಗಿದ್ದರು. ನಂತರ ಬ್ಲೂ ಫಿಲಂನಲ್ಲಿದ್ದಂತೆ ಆಕೆ ಮೇಲೆ ಅತ್ಯಾಚಾರ ಎಸೆದು, ಕತ್ತು ಹಿಸುಕಿ ಕೊಲೆ ಮಾಡಿದ್ದಾರೆ. ಮೂವರಲ್ಲಿ ಓರ್ವ ಬಾಲಕ ಈ ವಿಷಯವನ್ನು ಪೋಷಕರಿಗೆ ತಿಳಿಸಿದ್ದಾನೆ. ಬಾಲಕನ ತಂದೆ ಸಂಬಂಧಿಯೊಬ್ಬರ ಸಹಾಯದಿಂದ ಕಾಲುವೆಯಲ್ಲಿ ಶವವನ್ನು ಹೊರ ತೆಗೆದು, ಬೈಕ್‌ನಲ್ಲಿ ಸಾಗಿಸಿದ್ದಾರೆ. ಬೃಹತ್ ಕಲ್ಲನ್ನು ಬಾಲಕಿಯ ದೇಹದ ಜೊತೆ ಕಟ್ಟಿ ಎಸೆದಿದ್ದಾರೆ ಎಂದು ಹೇಳಿದ್ದಾರೆ.

ಬಾಲಕಿಯ ಕುಟುಂಬಕ್ಕೆ 10 ಲಕ್ಷ ಪರಿಹಾರ

ಮೃತದೇಹದ ಪತ್ತೆಗಾಗಿ ಡ್ರೋನ್ ಮತ್ತು ನೀರೊಳಗಿನ ಕ್ಯಾಮೆರಾಗಳಂತಹ ಎಲ್ಲಾ ಸಾಧನಗಳನ್ನು ಬಳಕೆ ಮಾಡುತ್ತಿದ್ದೇವೆ. ಶವ ಪತ್ತೆಗಾಗಿ ಎನ್‌ಡಿಆರ್‌ಎಫ್ ಸಿಬ್ಬಂದಿಯ ಸಹಾಯವನ್ನು ಸಹ ಕೇಳಲಾಗಿದೆ. ಎಲ್ಲಾ ಆರೋಪಿಗಳನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗುವುದು ಎಂದು ಎಸ್‌ಪಿ ಆದಿರಾಜ್‌ ಸಿಂಗ್ ರಾಣಾ ಮಾಹಿತಿ ನೀಡಿದ್ದಾರೆ. ಸಿಎಂ ಎನ್ ಚಂದ್ರಬಾಬು ನಾಯ್ಡು ಅವರು ಅಪ್ರಾಪ್ತ ಬಾಲಕಿಯ ಕುಟುಂಬಕ್ಕೆ 10 ಲಕ್ಷ ರೂಪಾಯಿ ಪರಿಹಾರ ನೀಡುವಂತೆ ಸೂಚನೆ ನೀಡಿದ್ದಾರೆ ಎಂದು ಆಂಧ್ರಪ್ರದೇಶ ಗೃಹ ಸಚಿವೆ ವಿ ಅನಿತಾ ಹೇಳಿದ್ದಾರೆ.

ಬೆಳಗಾವಿ: ಹಿಂದೂ ಬುದ್ಧಿಮಾಂದ್ಯೆ ಯುವತಿ ಮೇಲೆ ಅನ್ಯಕೋಮಿನ ವ್ಯಕ್ತಿಯಿಂದ ಅತ್ಯಾಚಾರಕ್ಕೆ ಯತ್ನ

 

click me!