ವಿಜಯನಗರ ಜಿಲ್ಲೆ ಹರಪನಹಳ್ಳಿ ತಾಲ್ಲೂಕಿನ ಬೇವಿನಹಳ್ಳಿ ಬಳಿ ಕಳೆದ ಮೂರು ದಿನಗಳ ಹಿಂದೆ ನಡೆದ ಜಿಮ್ ಟ್ರೈನರ್ ಧನ್ಯಕುಮಾರ್ ಬ್ರೂಟಲ್ ಮರ್ಡರ್ ಪ್ರಕರಣವನ್ನು ವಿಜಯನಗರ ಪೊಲೀಸರು ಬೇಧಿಸಿದ್ದಾರೆ.
ವರದಿ: ವರದರಾಜ್, ದಾವಣಗೆರೆ
ದಾವಣಗೆರೆ (ಮೇ.02): ವಿಜಯನಗರ ಜಿಲ್ಲೆ ಹರಪನಹಳ್ಳಿ ತಾಲ್ಲೂಕಿನ ಬೇವಿನಹಳ್ಳಿ ಬಳಿ ಕಳೆದ ಮೂರು ದಿನಗಳ ಹಿಂದೆ ನಡೆದ ಜಿಮ್ ಟ್ರೈನರ್ (Gym Trainer) ಧನ್ಯಕುಮಾರ್ ಬ್ರೂಟಲ್ ಮರ್ಡರ್ ಪ್ರಕರಣವನ್ನು (Murder Case) ವಿಜಯನಗರ ಪೊಲೀಸರು (Police) ಬೇಧಿಸಿದ್ದಾರೆ. ದಾವಣಗೆರೆ ಮೂಲದ ಮೂವರನ್ನು ಬಂಧಿಸಿ (Arrest) ಕೊಲೆ ಕಾರಣ ಬಾಯ್ಬಿಡಿಸಿದ್ದಾರೆ.
ಧನ್ಯಕುಮಾರ್ ಕೊಲೆ ನಡೆದಿದ್ದು ಹೇಗೆ?: ಏಪ್ರಿಲ್ 27ರ ರಾತ್ರಿ ಹರಪನಹಳ್ಳಿ ತಾಲ್ಲೂಕ್ ಉಚ್ಚಂಗಿದುರ್ಗ ಬಳಿ ಹಾಲಮ್ಮ ತೋಪಿಗೆ ತಮ್ಮ ಸ್ನೇಹಿತರ ಜೊತೆ ಊಟಕ್ಕೆಂದು ಹೋಗಿದ್ದರು .ಅಲ್ಲಿ ಊಟವಾದ ನಂತರ ಮಧ್ಯರಾತ್ರಿ 1:30 ರ ಸುಮಾರಿಗೆ ಬೇವಿನಹಳ್ಳಿ ತಾಂಡದ ಬಳಿ ಜಿಮ್ ಟ್ರೈನರ್ ಧನ್ಯಕುಮಾರ್ (Dhanyakumar) ಬರ್ಬರ ಹತ್ಯೆ (Murder) ನಡೆಯಿತು. ಬೆಳಿಗ್ಗೆ ಜಮೀನನಲ್ಲಿ ರಕ್ತಸಿಕ್ತವಾಗಿ ಬಿದ್ದಿದ್ದ ಮೃತದೇಹ ನೋಡಿ ಅರಸೀಕೆರೆ ಪೊಲೀಸರಿಗೆ ಬೇವಿನಹಳ್ಳಿ ಗ್ರಾಮಸ್ಥರು ಮಾಹಿತಿ ನೀಡಿದ್ದರು.
ಬಾಡೂಟಕ್ಕೆ ಹೋದವನ ಬರ್ಬರ ಹತ್ಯೆ, ಜಿಮ್ ಬಾಡಿಗೆ ಚಾಕುವಿನಿಂದ ಚುಚ್ಚಿ ಕೊಲೆ
ಸ್ಥಳಕ್ಕೆ ಹರಪನಹಳ್ಳಿ ಡಿವೈಎಸ್ಪಿ, ಸರ್ಕಲ್ ಇನ್ಸ್ಪೆಕ್ಟರ್, ವಿಜಯನಗರ ಎಸ್ ಪಿ ಅರುಣ್ ಭೇಟಿ ನೀಡಿ ಕೊಲೆ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದರು. ಧನ್ಯಕುಮಾರ್ ಮೂಲತಃ ನಿಟ್ಟುವಳ್ಳಿಯವರಾಗಿದ್ದು ಅಲ್ಲಿನ ಸ್ನೇಹಿತರ ಜೊತೆ ಊಟಕ್ಕೆ ಹೋಗಿದ್ದ ಬಗ್ಗೆ ಮಾಹಿತಿ ಪಡೆದ ಪೊಲೀಸರು ದಾವಣಗೆರೆ ಬಂದು ತನಿಖೆ ಆರಂಭಿಸಿ ಪ್ರಕರಣದಲ್ಲಿ ಮೂವರನ್ನು ಅರೆಸ್ಟ್ ಮಾಡಿದ್ದಾರೆ.
ಬಂಧಿತ ಆರೋಪಿಗಳೆಲ್ಲರು ದಾವಣಗೆರೆಯವರು: ಕೆಟಿಜೆ ನಗರದ ರವಿ(24) ಮಲ್ಲಿಕಾರ್ಜುನ ಆಲಿಯಾಸ್ ಮಲ್ಲಿ (25) ಸುದೀಪ್ ಆಲಿಯಾಸ್ ಸುದಿ (21) ಬಂಧಿತ ಆರೋಪಿಗಳು. ಎರಡು ರೌಡಿಗಳ ಗುಂಪುಗಳ ವಿಚಾರಕ್ಕೆ ಕೊಲೆ ನಡೆಸಲಾಗಿದೆ. ಆ ಬ್ಯಾಚ್ ಬೆಳೆಯುತ್ತಿದೆ, ಅವರ ಜತೆ ಧನ್ಯಕುಮಾರ್ ಬೆಳೆಯಬಾರದು ಅಂತ ಕೊಲೆಯಾಗಿದೆ. ಕೊಲೆ ಪ್ರಕರಣದ ಬಗ್ಗೆ ಇನ್ನು ತನಿಖೆ ನಡೆಯುತ್ತಿದೆ, ಇನ್ನೂ ಈ ಕೇಸ್‌ನಲ್ಲಿ ಬೇರೆಯವರಿದ್ದಾರೆ ಅಂತ ಮಾಹಿತಿ ಇದೆ ಅವರನ್ನು ವಿಚಾರಣೆ ನಡೆಸುವುದಾಗಿ ಎಸ್ಪಿ ಅರುಣ್ ತಿಳಿಸಿದ್ದಾರೆ. ಹರಪನಹಳ್ಳಿ ಡಿವೈಎಸ್ಪಿ, ಸಿಪಿಐ, ಮತ್ತು ಹರಪನಹಳ್ಳಿ, ಅರಸಿಕೇರೆ, ಹಲವಾಗಲು ಪಿಎಸ್ಐಗಳ ನೇತೃತ್ವದಲ್ಲಿ ತಂಡ ಮಾಡಲಾಗಿತ್ತು. ಮೂರೇ ದಿನಗಳಲ್ಲಿ ದಾವಣಗೆರೆ ಪೊಲೀಸರ ಸಹಕಾರ ಪಡೆದು ಮೂವರನ್ನು ಅರೆಸ್ಟ್ ಮಾಡಲಾಗಿದೆ.
ಎರಡು ರೌಡಿ ಗುಂಪುಗಳ ಮಧ್ಯೆ ನಡೆಯುತ್ತಿದೆ ಶೀತಲ ಸಮರ: ಧನ್ಯಕುಮಾರ್ ಇತ್ತಿಚೆಗೆ ಒಂದು ಗುಂಪಿನಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದ ಆ ಗುಂಪಿನ ನಾಯಕನಿಗೆ ನಿಷ್ಠೆಯಾಗಿದ್ದು ಆತನನ್ನು ಹೊಗಳುತ್ತಿದ್ದ ಇದು ಇನ್ನೊಂದು ಗುಂಪಿನಲ್ಲಿ ಪ್ರವರ್ಧಮಾನಕ್ಕೆ ಬರುತ್ತಾನೆ ಅನ್ನೋ ಕಾರಣದಿಂದ ಕೊಲೆ ಮಾಡಲಾಗಿದೆ ಎಂದು ಆರೋಪಿಗಳ ಹೇಳಿದ್ದಾರೆ. ಒಂದು ತಿಂಗಳ ಹಿಂದೆಯೇ ಎರಡು ಗುಂಪುಗಳ ನಡುವೆ ಕೋಲ್ಡ್ ವಾರ್ ಆರಂಭವಾಗಿದ್ದು ಸಂಘರ್ಷ ನಡೆಯುತ್ತದೆ ಎಂದು ಇಂಟಲಿಜೆನ್ಸ್ ಪೊಲೀಸ್ ಸೂಚನೆಯನ್ನು ನೀಡಿತ್ತು.
ಅದಕ್ಕೆ ಸಂಬಂಧಿಸಿದಂತೆ ನಗರದಲ್ಲಿ ಸಣ್ಣಪುಟ್ಟ ಘಟನೆಗಳು ನಡೆದಿದ್ದವು. ದಾವಣಗೆರೆ ಪೊಲೀಸ್ ಸ್ವಲ್ಪ ಎಚ್ಚರವಹಿಸಿದ್ದರೇ ಬರ್ಬರ ಕೊಲೆ ತಪ್ಪಿಸಬಹುದಿತ್ತು ಎನ್ನುತ್ತವೆ ಮೂಲಗಳು. ಈ ಕೊಲೆಯಿಂದ ಎರಡು ಗುಂಪುಗಳ ನಡುವೆ ವೈಷಮ್ಯ ತಾರಕಕ್ಕೇರಿದೆ. ರೌಡಿಸಂ ಚಟುವಟಿಕೆಗಳ ಮೇಲೆ ಪೊಲೀಸರು ಕಡಿವಾಣ ಹಾಕದಿದ್ದರೆ ದಾವಣಗೆರೆ ನಗರದಲ್ಲಿ ಅಶಾಂತಿ ವಾತವರಣಕ್ಕೆ ಕಾರಣವಾಗುತ್ತದೆ.
ಗಂಡನಿಗೆ ಮೋಸ, ಗದ್ದೆಯಲ್ಲಿ ಬಾಯ್‌ಫ್ರೆಂಡ್ ಜತೆ ಚಕ್ಕಂದ: ರೆಡ್ ಹ್ಯಾಂಡಾಗಿ ಸಿಕ್ಕಿಬಿದ್ದ ಹೆಂಡತಿ
ಪೊಲೀಸರ ಬಿಗಿ ಕ್ರಮ: ಇತ್ತಿಚೆಗೆ ದಾವಣಗೆರೆ ನಗರದಲ್ಲಿ ರೌಡಿಸಂ ಚಟುವಟಿಕೆಗಳು ಹೆಚ್ಚಾಗಿವೆ.ಕಳೆದ ಎರಡು ದಿನಗಳ ಹಿಂದೆ ಮನೆಯೊಂದಕ್ಕೆ ನುಗ್ಗಿ ಕುಟುಂಬವೊಂದಕ್ಕೆ ಧಮಕಿ ಹಾಕಿದ ಆರೋಪದ ಮೇಲೆ ಗಾರಮಂಜ ಎಂಬ ರೌಡಿಶೀಟರ್ ನನ್ನು ಬಂಧಿಸಲಾಗಿದೆ. ಅದರ ಬೆನ್ನಲ್ಲೇ ಪುಡಿ ರೌಡಿಗಳು ಇದೀಗ ಬರ್ಬರವಾಗಿ ಧನ್ಯಕುಮಾರ್‌ನನ್ನು ಕೊಲೆ ಮಾಡಿದ್ದಾರೆ.ಕ್ಷುಲ್ಲಕ ಕಾರಣಕ್ಕೆ ಕೊಲೆ ಮಾಡುವಂತಹ ಮಾನಸಿಕತೆಯನ್ನು ಹೊಂದಿರುವವರ ಮೇಲೆ ಪೊಲೀಸರು ಕಠಿಣ ಕ್ರಮ ಕೈಗೊಳ್ಳಬೇಕಿದೆ.