ಶಿಕ್ಷಕನಿಂದಲೇ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ/ 4 ತಿಂಗಳ ಗರ್ಭಿಣಿಯಾಗಿರುವ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿ/ ಹಾವೇರಿ ಜಿಲ್ಲೆಯಲ್ಲಿ ಘಟನೆ/ ಮನೆಗೆ ಬಂದ ಶಿಕ್ಷಕನಿಂದ ಘೋರ ಕೆಲಸ
ಹಾವೇರಿ(ಜೂ. 19) ನಗರದ ಖಾಸಗಿ ಶಿಕ್ಷಣ ಸಂಸ್ಥೆಯ ಗಣಿತ ಶಿಕ್ಷಕನೋರ್ವ ವಿದ್ಯಾರ್ಥಿನಿಯೊಂದಿಗೆ ಸಲುಗೆಯಿಂದ ನಡೆದುಕೊಂಡು ಮನೆಗೆ ಪಾಠ ಹೇಳುವ ನೆಪದಲ್ಲಿ ಬಂದು ಪುಸಲಾಯಿಸಿ, ದೈಹಿಕ ಸಂಬಂಧ ನಡೆಸಿದ್ದಾನೆ. ಪರಿಣಾಮ ವಿದ್ಯಾರ್ಥಿನಿ ಗರ್ಭಿಣಿಯಾಗಿದ್ದಾಳೆ.
ಜೂ. 25ರಿಂದ ಎಲ್ಲ ವಿದ್ಯಾರ್ಥಿಗಳಂತೆ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆಯಬೇಕಿದ್ದ ವಿದ್ಯಾರ್ಥಿನಿ ಈಗ ಗರ್ಭಿಣಿಯಾಗಿ ಮನೆಯಿಂದ ಹೊರಬರದಂತಾಗಿದ್ದಾಳೆ.
ಸ್ನೇಹಿತನ ಕಾಮ ತೀಟೆಗೆ ಪತ್ನಿ ಕಳಿಸಿ ಗಂಡನೇ ಕೋಣೆ ಕಾವಲುಗಾರನಾದ
ಜೂ. 17ರಂದು ವಿದ್ಯಾರ್ಥಿನಿ ಜಿಲ್ಲಾಸ್ಪತ್ರೆಗೆ ತಪಾಸಣೆಗೆ ಹೋದ ಸಮಯದಲ್ಲಿ ಗರ್ಭಿಣಿ ಆಗಿರುವುದು ಬೆಳಕಿಗೆ ಬಂದಿದ್ದು, ವಿದ್ಯಾರ್ಥಿನಿಯೇ ಈಗ ಈ ಕುರಿತು ಮಹಿಳಾ ಪೊಲೀಸ್ ಠಾಣೆಯಲ್ಲಿ ಅತ್ಯಾಚಾರದ ದೂರು ದಾಖಲಿಸಿದ್ದಾಳೆ.
‘ಜನವರಿಯಲ್ಲಿ ನನ್ನ ಮನೆಯಲ್ಲಿ ಯಾರು ಇಲ್ಲದ ವೇಳೆಯಲ್ಲಿ ಬಂದಿದ್ದ ಹಾವೇರಿಯ ವಿಶ್ವೇಶ್ವರಯ್ಯ ಶಾಲೆಯ ಗಣಿತ ಶಿಕ್ಷಕನಾಗಿರುವ ಶಿಗ್ಗಾಂವಿ ತಾಲೂಕು ಅಂದಲಗಿಯ ಪ್ರವೀಣಕುಮಾರ ಚನ್ನಬಸಪ್ಪ ಮರಿಯಣ್ಣನವರ ನನ್ನ ಮೇಲೆ ಎರಡು ಬಾರಿ ಅತ್ಯಾಚಾರ ಎಸಗಿದ್ದಾನೆ’ ಎಂದು ಆರೋಪಿಸಿದ್ದಾಳೆ.
ದೂರು ದಾಖಲಿಸಿಕೊಂಡಿರುವ ಹಾವೇರಿ ಮಹಿಳಾ ಠಾಣೆಯಲ್ಲಿ ಪೊಲೀಸರು ಆರೋಪಿ ಶಿಕ್ಷಕನನ್ನು ವಶಕ್ಕೆ ಪಡೆದು ವಿಚಾರಣೆ ಮುಂದುವರೆಸಿದ್ದಾರೆ.