ತನ್ನ ಸಾಲ ಸೆಟಲ್ ಮಾಡಲು ಪತ್ನಿಯನ್ನೇ ಗೆಳೆಯರಿಗೆ ಬಿಟ್ಟುಕೊಟ್ಟ!

By Suvarna News  |  First Published Jun 10, 2021, 8:38 PM IST

* ಹೆಂಡತಿ ಯನ್ನೇ ಅತ್ಯಾಚಾರಕ್ಕೆ ಒಳಗಾಗು ಎಂದ ಪಾಪಿ ಪತಿ
* ತನ್ನ ಸಾಲ ತೀರಿಸಲು ಸ್ನೇಹಿತರೊಂದಿಗೆ  ಸಹಕರಿಸು ಎಂದ
* ಪತ್ನಿಗೆ ನಿದ್ದೆ ಮಾತ್ರೆ ಕೊಟ್ಟು ಹೀನ ಕೆಲಸ
* ಕೊಯಂಬತ್ತೂರಿನಿಂದ ಘೋರ ಪ್ರಕರಣ


ಕಡಲೂರು(ಜೂ.  10)   ತಾನು ಮಾಡಿಕೊಂಡಿದ್ದ ಸಾಲ ಸೆಟಲ್ ಮಾಡಿಕೊಳ್ಳಲು  ಹೆಂಡತಿಯ ಮೇಲೆ ಅತ್ಯಾಚಾರ ಮಾಡಲು ಗೆಳೆಯರನ್ನು ಪ್ರೇರೇಪಿಸಿದ ಪಾಪಿ ಪತಿಯ ಸುದ್ದಿ ವರದಿಯಾಗಿದೆ.  ಪ್ರಕರಣಕ್ಕೆ ಸಂಬಂಧಿಸಿ ವ್ಯಕ್ತಿ ಮತ್ತು ಆತನ  ಗೆಳೆಯರನ್ನು ವಶಕ್ಕೆ ಪಡೆಯಲಾಗಿದೆ. 

ಕಡಲೂರು ಪೊಲೀಸರು ಆರೋಪಿ ರಾಜಶೇಖರ್  (ಹೆಸರು ಬದಲಾಯಿಸಲಾಗಿದೆ)  ಮತ್ತೆ ಆತನ ಗೆಳೆಯರನ್ನು ಬಂಧಿಸಲಾಗಿದೆ. ಪನ್ರುತಿ ಮಹಿಳಾ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.  ರಾಜಶೇಖರ್ 2018 ರಲ್ಲಿ 21 ವರ್ಷದ ಪಾರ್ವತಿಯನ್ನು (ಹೆಸರು ಬದಲಾಯಿಸಲಾಗಿದೆ) ಮದುವೆಯಾಗಿದ್ದ.

Tap to resize

Latest Videos

ಆರೋಪಿ ಮದ್ಯ ವ್ಯಸನಿಯಾಗಿದ್ದು, ಕಳೆದ ಒಂದು ವರ್ಷದಿಂದ ಕೊರೋನಾ  ಕಾರಣ ಸರಿಯಾದ ಕೆಲಸ ಇರಲಿಲಲ್ಲ.  ದಂಪತಿಗೆ ಎರಡು ವರ್ಷದ ಮಗನಿದ್ದಾನೆ. ಆರೋಪಿ ಸ್ನೇಹಿರ ಬಳಿ ಸಾಲ ಮಾಡಿಕೊಂಡಿದ್ದ.   ಯಾವುದೇ ಹಣ ಉಳಿದಿಲ್ಲದ ಕಾರಣ ತನ್ನ ಇಬ್ಬರು ಸ್ನೇಹಿತರಾದ ಸುಂದರಮೂರ್ತಿ (25) ಮತ್ತು ಮಣಿಕಂದನ್ (26) ಗೆ ಪತ್ನಿಯನ್ನೇ ಬಿಟ್ಟುಕೊಡಲು ಮುಂದಾಗಿದ್ದಾನೆ.

ವೈದ್ಯರಿಂದಲೇ ಯುವತಿ ಮೇಲೆ ಗ್ಯಾಂಗ್ ರೇಪ್

ರಾಜಶೇಖರ್ ಪತ್ನಿಗೆ ವಿಟಮಿನ್ ಟ್ಯಾಬ್ಲೆಟ್ ಎಂದು ಹೇಳಿ ಮತ್ತು ಏರಿಸುವ ಮಾತ್ರೆ ನೀಡಿದ್ದಾನೆ.  ಇದಾದ ಮೇಲೆ ಮಹಿಳೆ ಪ್ರಜ್ಞೆ ತಪ್ಪಿದ್ದಾಳೆ. ನಂತರ ಪತಿ ತನ್ನ ಸ್ನೇಹಿತ ಸುಂದರಮೂರ್ತಿಗೆ ಕರೆ ಮಾಡಿ ಬರಲು ಹೇಳಿದ್ದಾನೆ.  ಎಚ್ಚರಗೊಂಡಾಗ ಮಹಿಳೆಗೆ ತನ್ನ ಮೇಲೆ ದೌರ್ಜನ್ಯ ಆಗಿರುವುದು ಗೊತ್ತಾಗಿದೆ.

ಇನ್ನೊಂದು ದಿನ ಸ್ನೇಹಿತ ಮಣಿಕಂದನ್ ಜತೆ ಗಂಡ ಕುಡಿದು ಮನೆಗೆ ಬಂದಿದ್ದಾನೆ.  ಪತ್ನಿ ನಿದ್ದೆ ಮಾಡುತ್ತಿದ್ದಾಗ ಗೆಳೆಯನಿಗೆ ಅತ್ಯಾಚಾರ ಮಾಡು ಎಂದು ಪ್ರೇರೇಪಿಸಿದ್ದಾನೆ. .

ಪಾರ್ವತಿ ಗಾಬರಿಯಿಂದ ಎಚ್ಚರಗೊಂಡು ದುರುಳನಿಂದ ತಪ್ಪಿಸಿಕೊಂಡಿದ್ದಾಳೆ.  ಗಂಡನ ಮೇಲೆ ಅನಿವಾರ್ಯವಾಗಿ ಹಲ್ಲೆ ಮಾಡಿದ್ದಾಳೆ.  ಇದಾದ ಮೇಲೆ ಪೊರ್ವತಿ ತನ್ನ ಮಗುವನ್ನು ಕರೆದುಕೊಂಡು ತವರು ಮನೆಗೆ ಬಂದಿದ್ದಾಳೆ. ಅಲ್ಲಿಗೂ ಬಂದ ಪತಿ ಗೆಳೆಯರೊಂದಿಗೆ ಸಹಕರಿಸು ಎಂದು ಒತ್ತಡ ಹೇರಲು ಶುರು ಮಾಡಿದ್ದಾನೆ. ಮನನೊಂದ ಮಹಿಳೆ ಬೇರೆ ದಾರಿ ಕಾಣದೆ ಪೊಲೀಸರ ಮೊರೆ ಹೋಗಿದ್ದಾರೆ. 

 

click me!