* ಗುಲ್ಶನ್ ಕುಮಾರ್ ಪುತ್ರ ಹಾಗೂ ಟಿ-ಸೀರೀಸ್ ಕಂಪನಿ MD ಭೂಷಣ್ ಕುಮಾರ್ ವಿರುದ್ಧ ರೇಪ್ ಕೇಸ್
* 30 ವರ್ಷದ ಯುವತಿಯ ಮೇಲೆ ಅತ್ಯಾಚಾರ ಎಸಗಿರುವ ಆರೋಪ
* ಐಪಿಸಿ ಸೆಕ್ಷನ್ 376, 420, 506 ಅಡಿಯಲ್ಲಿ ಪ್ರಕರಣ ದಾಖಲು
* #MeToo ಅಭಿಯಾನದಲ್ಲೂ ತಳುಕು ಹಾಕಿತ್ತು ಭೂಷಣ್ ಕುಮಾರ್ ಹೆಸರು
ಮುಂಬೈ(ಜು.16): ಗುಲ್ಶನ್ ಕುಮಾರ್ ಪುತ್ರ ಹಾಗೂ ಟಿ-ಸೀರೀಸ್ ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಭೂಷಣ್ ಕುಮಾರ್ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲಾಗಿದೆ. ಮುಂಬೈನ ಡಿ.ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಭೂಷಣ್ ಕುಮಾರ್ ಟಿ-ಸೀರೀಸ್ ಯೋಜನೆಯಲ್ಲಿ ಕೆಲಸ ಮಾಡುವಂತೆ ಆಮಿಷವೊಡ್ಡಿ 30 ವರ್ಷದ ಯುವತಿಯ ಮೇಲೆ ಅತ್ಯಾಚಾರ ಎಸಗಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಭೂಷಣ್ ಕುಮಾರ್ ವಿರುದ್ಧ ಐಪಿಸಿ ಸೆಕ್ಷನ್ 376, 420, 506 ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ವರದಕ್ಷಿಣೆ ಪಿಡುಗು ತೊಲಗಿಸಲು ಕೇರಳ ರಾಜ್ಯಪಾಲರ ಉಪವಾಸ ಸತ್ಯಾಗ್ರಹ; ಸರ್ಕಾರಕ್ಕೆ ಮುಜುಗರ!
ದೂರು ನೀಡಿರುವ ಮಹಿಳೆ, ಕೆಲಸ ಕೊಡಿಸುವ ನೆಪದಲ್ಲಿ 2017 ರಿಂದ 2020 ರವರೆಗೆ ಮೂರು ವಿಭಿನ್ನ ಸ್ಥಳಗಳಲ್ಲಿ ಭೂಚಣ್ ಕುಮಾರ್ ಅತ್ಯಾಚಾರ ನಡೆಸಿದ್ದಾರೆಂದು ಆರೋಪಿಸಿದ್ದಾರೆ. ಸದ್ಯ ಪೊಲೀಸರು ಈ ಬಗ್ಗೆ ತನಿಖೆ ಆರಂಭಿಸಿದ್ದಾರೆ. ಪ್ರಕರಣದ ಬಗ್ಗೆ ಪೊಲೀಸರಿಗೆ ಮತ್ತಷ್ಟು ಮಾಹಿತಿ ನೀಡಿರುವ ಮಹಿಳೆ ಕಳೆದ ಮೂರು ವರ್ಷಗಳಿಂದ ಭೂಷಣ್ ಕುಮಾರ್, ಪ್ರಾಜೆಕ್ಟ್ ಒಂದರಲ್ಲಿ ಕೆಲಸ ಕೊಡಿಸುತ್ತೇನೆಂದು ವಿವಿಧ ಸ್ಥಳಗಳಿಗೆ ಕರೆದೊಯ್ದು ತನ್ನ ಮೇಲೆ ಅತ್ಯಾಚಾರ ಎಸಗಿದ್ದಾನೆ ಎಂದು ತಿಳಿಸಿದ್ದಾಳೆ. ಈ ಬಗ್ಗೆ ಯಾರಿಗಾದರೂ ಈ ಬಗ್ಗೆ ತಿಳಿಸಿದರೆ ಪರಿಣಾಮ ನೆಟ್ಟಗಿರಲ್ಲ, ಎಂದೂ ಬೆದರಿಕೆ ಹಾಕಿದ್ದರು ಎಂದು ತಿಳಿಸಿದ್ದಾರೆ. ಈ ಪ್ರಕರಣದಲ್ಲಿ ಭೂಷಣ್ ಕುಮಾರ್ ಅವರ ಹೇಳಿಕೆಯನ್ನು ಪೊಲೀಸರು ಶೀಘ್ರದಲ್ಲೇ ದಾಖಲಿಸಬಹುದು.
ಇದಕ್ಕೂ ಮುನ್ನ 2018 ರಲ್ಲಿ #MeToo ಅಭಿಯಾನದ ವೇಳೆ ಭೂಷಣ್ ಕುಮಾರ್ ಅವರ ವಿರುದ್ಧ ಮಹಿಳೆಯೊಬ್ಬರು ಲೈಂಗಿಕ ಕಿರುಕುಳದ ಆರೋಪ ಹೊರಿಸಿದ್ದರು. ಆದರೆ ಈ ಆರೋಪ ಸತ್ಯಕ್ಕೆ ದೂರವಾದದ್ದು ಎಂದು ಭೂಷಣ್ ಕುಮಾರ್ ವಾದಿಸಿದ್ದರು. ಅಲ್ಲದೇ ಅವರ ಪತ್ನಿ ದಿವ್ಯಾ ಕೂಡ ಈ ವಿವಿಚಾರದಲ್ಲಿ ಭೂಷಣ್ ಬೆಂಬಲಕ್ಕೆ ನಿಂತಿದ್ದರು. ನನ್ನ ಗಂಡನ ಕಠಿಣ ಪರಿಶ್ರಮದಿಂದಾಗಿ ಟಿ-ಸೀರೀಸ್ ಯಶಸ್ಸಿನ ಉತ್ತುಂಗಕ್ಕೇರಿದೆ. ಜನರು ಶ್ರೀಕೃಷ್ಣನ ವಿರುದ್ಧವೂ ನಿಂತಿದ್ದರು. ಸಮಾಜದಲ್ಲಿರುವ ಕೊಳಕನ್ನು ತೆಗೆದುಹಾಕುವುವುದು #MeToo ಉದ್ದೇಶವಾಗಿದೆ. ಆದರೆ ಕೆಲವರು ಇದನ್ನು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ ಎಂದು ದಿವ್ಯಾ ಹೇಳಿದ್ದರು.
ತಮ್ಮದೇ ಫ್ಲಾಟ್‌ನಲ್ಲಿ ಬೆತ್ತಲೆಯಾಗಿ ಪತ್ತೆಯಾದ ಮಾಡೆಲ್ ಮೃತದೇಹ
ಅನೇಕ ಚಿತ್ರಗಳನ್ನು ನಿರ್ಮಿಸಿದ್ದಾರೆ ಭೂಷಣ್ ಕುಮಾರ್:
2001 ರಲ್ಲಿ ಭೂಷಣ್ ಕುಮಾರ್ 'ತುಮ್ ಬಿನ್' ಚಿತ್ರವನ್ನು ನಿರ್ಮಿಸಿದರು. ಇದಾದ ಬಳಿಕ ಅವರು ಇಂಡಸ್ಟ್ರಿಗೆ ಅನೇಕ ಸೂಪರ್ ಹಿಟ್ ಸಿನಿಮಾಗಳನ್ನು ನೀಡಿದ್ದಾರೆ. ಭೂಲ್ ಭೂಲಯ್ಯಾ, ಆಶಿಕಿ 2, ಸನಮ್ ರೇ, ಆಲ್ ಈಸ್ ವೆಲ್, ಸರಬ್ಜಿತ್, ಬಾದ್‌ಶಾಹೊ, ತುಮ್ಹಾರಿ ಸುಲು, ಭಾರತ್ ಮತ್ತು ಸತ್ಯಮೇವ್ ಜಯತೆ ಮುಂತಾದ ಅನೇಕ ಚಿತ್ರಗಳನ್ನು ಭೂಷಣ್ ಕುಮಾರ್ ನಿರ್ಮಿಸಿದ್ದಾರೆ. ಅವರ ಪತ್ನಿ ದಿವ್ಯಾ ಖೋಸ್ಲಾ ಕೂಡ ಓರ್ವ ನಟಿ. ದಿವ್ಯಾ ಅಕ್ಷಯ್ ಕುಮಾರ್ ಅವರೊಂದಿಗೆ 'ಅಬ್ ತುಮ್ಹರೆ ಹವಾಲೆ ವತನ್ ಸಾಥಿ' ಚಿತ್ರದಲ್ಲಿ ಕೆಲಸ ಮಾಡಿದ್ದಾರೆ.