Chikkamagaluru: ರಾಡಿನಿಂದ ಹೊಡೆದು ತಾಯಿ ಹತ್ಯೆ: ಆರೋಪಿ ಬಂಧನ

By Govindaraj S  |  First Published Jul 22, 2022, 1:14 PM IST

ಪ್ರಪಂಚದಲ್ಲಿ ತಾಯಿಯ ಋಣ ದೊಡ್ಡದು ಎನ್ನುವ ನಾಣ್ಣುಡಿಯಿದೆ. ಕೆಟ್ಟ ಮಗ ಪ್ರಪಂಚದಲ್ಲಿ ಇರಬಹುದು, ಆದ್ರೆ ತಾಯಿ ಇರಲು ಸಾಧ್ಯವೇ ಇಲ್ಲ, ತನ್ನ ಮಕ್ಕಳಾಗಿ ಸರ್ವಸ್ವವನ್ನು ತ್ಯಾಗ ಮಾಡುವ ತ್ಯಾಗಮಯಿ ತಾಯಿ, ಆದ್ರೆ ಕಾಫಿನಾಡಿನಲ್ಲೊಬ್ಬ ಪಾಪಿ ಮಗ ಹಣಕ್ಕಾಗಿ ಹತ್ಯೆ ಮಾಡಿದ್ದಾನೆ.


ವರದಿ: ಆಲ್ದೂರು ಕಿರಣ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿಕ್ಕಮಗಳೂರು 

ಚಿಕ್ಕಮಗಳೂರು (ಜು.22): ಪ್ರಪಂಚದಲ್ಲಿ ತಾಯಿಯ ಋಣ ದೊಡ್ಡದು ಎನ್ನುವ ನಾಣ್ಣುಡಿಯಿದೆ. ಕೆಟ್ಟ ಮಗ ಪ್ರಪಂಚದಲ್ಲಿ ಇರಬಹುದು, ಆದ್ರೆ ತಾಯಿ ಇರಲು ಸಾಧ್ಯವೇ ಇಲ್ಲ, ತನ್ನ ಮಕ್ಕಳಾಗಿ ಸರ್ವಸ್ವವನ್ನು ತ್ಯಾಗ ಮಾಡುವ ತ್ಯಾಗಮಯಿ ತಾಯಿ, ಆದ್ರೆ ಕಾಫಿನಾಡಿನಲ್ಲೊಬ್ಬ ಪಾಪಿ ಮಗ ಹಣಕ್ಕಾಗಿ ಹತ್ಯೆ ಮಾಡಿ, ಆಕಸ್ಮಿಕ ಸಾವು ಎಂದು ಬಿಂಬಿಸಿ ಅಂತ್ಯಸಂಸ್ಕಾರವನ್ನು ಮಾಡಿ ಡ್ರಾಮಾ ಸೃಷ್ಠಿ ಮಾಡಿದ್ದ ಪಾಪಿ ಮಗ ಇದೀಗ ಪೊಲೀಸರ ಅತಿಥಿ ಆಗಿದ್ದಾನೆ.

Latest Videos

undefined

ಕುಡಿತದ ಚಟ-ಹಣಕ್ಕಾಗಿ ತಾಯಿ ಹತ್ಯೆ‌: ಹಣಕ್ಕಾಗಿ ಜಗಳ ಮಾಡಿ ಹೆತ್ತ ತಾಯಿಯನ್ನೇ ಕೊಲೆ ಮಾಡಿ ಡ್ರಾಮಾ ಮಾಡಿದ್ದ ಮಗ ಪೊಲೀಸರ ಅತಿಥಿ ಆಗಿರುವ ಘಟನೆ ಚಿಕ್ಕಮಗಳೂರು ತಾಲ್ಲೂಕಿನ ಹಚ್ಚಡ ಮನೆ ಗ್ರಾಮದಲ್ಲಿ ನಡೆದಿದೆ. ತಾಯಿಯನ್ನು ಕೊಂದು ನಂತರ ಆಕಸ್ಮಿಕವಾಗಿ ಬೆಂಕಿ ತಗುಲಿ ಮೃತಪಟ್ಟಿದ್ದಾರೆ ಎಂದು ಡ್ರಾಮ ಸೃಷ್ಠಿ ಮಾಡಿ ಅಂತ್ಯ ಸಂಸ್ಕಾರವನ್ನು ಮಾಡಿ ಕೊಲೆಯನ್ನು ಮುಚ್ಚಿ ಹಾಕುವ ಯತ್ನವನ್ನು ಮಾಡಿದ್ದಾನೆ ಪಾಪಿ ಮಗ. ಆದ್ರೆ  ಸಂಬಂಧಿಕರ ನೀಡಿದ ದೂರು, ಪೊಲೀಸರ ತನಿಖೆಯಿಂದ ಹೆತ್ತ ತಾಯಿಯನ್ನು ಕೊಂದು ಡ್ರಾಮ ಮಾಡಿರುವ ಘಟನೆ ಬೆಳಕಿಗೆ ಬಂದಿದೆ. ತಾಯಿಯನ್ನು ಹತ್ಯೆ ಮಾಡಿದ ಆರೋಪಿ ಬಸವರಾಜು (26) ಎಂಬಾತನನ್ನು ಪೊಲೀಸರು ಬಂಧಿಸಿದ್ದು, ಪ್ರಕರಣ ಮುಚ್ಚಿ ಹಾಕಲು ಸಹಕರಿಸಿದ ಆರೋಪದ ಮೇಲೆ ಗ್ರಾಮದ 14 ಜನರ ವಿರುದ್ಧ ದೂರು ದಾಖಲಾಗಿದೆ.

ಮಳೆ ನಿಂತರೂ ಅವಾಂತರ ನಿಂತಿಲ್ಲ: ಭೂಕುಸಿತದ ಭೀತಿಯಲ್ಲಿ ಕಾಫಿನಾಡಿನ ಜನ

ಪ್ರಕರಣದ ಹಿನ್ನೆಲೆ: ಹಚ್ಚಡಮನೆ ಗ್ರಾಮದ ಲತಾ (55) ಮತ್ತು ಅವರ ಪುತ್ರ ಬಸವರಾಜು ಅವರ ನಡುವೆ ಜುಲೈ 18ರಂದು ಮಧ್ಯಾಹ್ನ ಹಣಕಾಸಿನ ವಿಚಾರಕ್ಕೆ ಜಗಳ ನಡೆದಿದೆ. ಕುಡಿತದ ಚಟವನ್ನು ಹೊಂದಿದ್ದ ಮಗ ಬಸವರಾಜ್‌ಗೆ ಹಣಕ್ಕಾಗಿ ಜಗಳ ಆರಂಭಿಸಿದ್ದಾನೆ. ಕೂಲಿ ಕೆಲಸ ಮಾಡಿ ಜೀವನ ಸಾಗುತ್ತಿದ್ದ ತಾಯಿಗೆ ಒಬ್ಬನೇ ಮಗ ಕೆಲಸ ಮಾಡಿದೇ ನಿತ್ಯವೂ ಕಿರುಕುಳ ನೀಡುತ್ತಿದ್ದ, ಅವತ್ತು ಕೂಡ ಹಣಕ್ಕಾಗಿ ಜಗಳ ಮಾಡಿದ್ದಾನೆ. ಯಾವಾಗ ತಾಯಿ ಹಣವನ್ನು ಕೊಡಲು ನಿರಾಕರಣೆ ಮಾಡಿದ್ರು ಆಗ ಬಸವರಾಜು ತಾಯಿಯ ತಲೆಗೆ ಸೌದೆ ಒಲೆಯನ್ನು ಊದುವ ಕೊಳವೆಯಿಂದ ಹೊಡೆದಿದ್ದಾನೆ. 

ಸಂಜೆ ಮತ್ತೆ ಮನೆಗೆ ಬಂದು ಕುಡಿಯಲು ಹಣ ಕೇಳಿದ್ದು, ಮತ್ತೆ ಜಗಳ ಆಗಿದೆ. ಆಗ ರಾಡ್‌ನಿಂದ ಲತಾ ಅವರ ಮೇಲೆ ಹಲ್ಲೆ ಮಾಡಿದ್ದು, ತಲೆಗೆ ತೀವ್ರ ಸ್ವರೂಪದ ಪೆಟ್ಟು ಬಿದ್ದಿದ್ದರಿಂದ ಅವರು ಮೃತಪಟ್ಟಿದ್ದಾರೆ. ಕೊಲೆ ಪ್ರಕರಣ ಮುಚ್ಚಿ ಹಾಕಲು ಆಕಸ್ಮಿಕ ಬೆಂಕಿ ತಗುಲಿ ಮೃತಪಟ್ಟಿದ್ದಾರೆ ಎಂದು ನಂಬಿಸಲು ಡೀಸೆಲ್ ಸುರಿದು ಮನೆಯಲ್ಲೇ ತಾಯಿಗೆ ಬೆಂಕಿ ಹಚ್ಚಿದ್ದಾನೆ, ಅರೆಬರೆ ಸುಟ್ಟ ಶವವನ್ನು ಸ್ಮಶಾನಕ್ಕೆ ಸಾಗಿಸಿ ಅಲ್ಲಿ ಪೂರ್ಣ ಸುಟ್ಟು ಹಾಕಲಾಗಿದೆ. ಗ್ರಾಮದ ಕೆಲವರಿಗೆ ಈ ವಿಷಯ ತಿಳಿದಿದ್ದರೂ ಅವರು ಪೊಲೀಸರಿಗೆ ಮಾಹಿತಿ ನೀಡದೆ ತಾಯಿ ಆಕಸ್ಮಿಕ ಬೆಂಕಿ ತಗುಲಿ ಮೃತಪಟ್ಟಿದ್ದಾರೆ ಎಂಬ ಮಗನ ನಾಟಕಕ್ಕೆ ಸಹಕಾರ ನೀಡಿ ಅಂತ್ಯಕ್ರಿಯೆ ಮಾಡಿದ್ದಾರೆ ಎಂದು ಹೇಳಲಾಗಿದೆ. 

ಸಂಬಂಧಿಕರು, ಘಟನೆಯ ವಿಚಾರವನ್ನು ಆಲ್ದೂರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ತನಿಖೆ ಆರಂಭಿಸಿದಾಗ ಆರೋಪಿ ಬಸವರಾಜುನನ್ನು ಬೇಲೂರು ಸಮೀಪದ ಅವರ ಸಂಬಂಧಿಕರ ಮನೆಯಲ್ಲಿ ಬಂಧಿಸಿದ್ದಾರೆ. ಆಕಸ್ಮಿಕ ಸಾವು ಎಂದು ನಂಬಿಸಲು ಗ್ರಾಮದ ಕೆಲವರ ಸಹಕಾರ ನೀಡಿದ್ದಾರೆ. ಬಸವರಾಜು ಮದ್ಯ ವ್ಯಸನಿಯಾಗಿದ್ದು, ಪದೇಪದೆ ಹಣಕ್ಕಾಗಿ ತಾಯಿಯೊಂದಿಗೆ ಜಗಳ ಮಾಡುತ್ತಿದ್ದ. ಜುಲೈ 18ರಂದು ಕೂಡ ಹಣಕ್ಕಾಗಿ ಜಗಳ ಮಾಡಿದ್ದಾನೆ. ಕುಡಿದ ಅಮಲಿನಲ್ಲಿ ರಾಡಿನಿಂದ ತಾಯಿ ಲತಾ ತಲೆಗೆ ಹೊಡೆದಾಗ ರಕ್ತಸ್ರಾವವಾಗಿ ಅವರು ಮೃತಪಟ್ಟಿದ್ದಾರೆ. ಕೊಲೆ ಮಾಡಿದ ನಂತರ ಪಾರಾಗಲು ಆಕಸ್ಮಿಕವಾಗಿ ಬೆಂಕಿ ತಗುಲಿ ಮೃತಪಟ್ಟಿದ್ದಾರೆ ಎಂದು ನಂಬಿಸಲು ಶವದ ಮೇಲೆ ಡೀಸೆಲ್ ಸುರಿದ ಬೆಂಕಿ ಹಚ್ಚಿದ್ದಾನೆ. ಶವ ಸಂಪೂರ್ಣ ಸುಟ್ಟಿಲ್ಲ. 

ಚಿಕ್ಕಮಗಳೂರು: ಚಾರ್ಮಾಡಿ ಘಾಟ್‌ನಲ್ಲಿ ಟ್ರಾಫಿಕ್ ಜಾಮ್‌, ಬೇಸತ್ತ ವಾಹನ ಸವಾರರು

ಆಗ ಕೆಲವರ ಸಹಕಾರದಿಂದ ಶವವನ್ನು ಸ್ಮಶಾನಕ್ಕೆ ಸಾಗಿಸಿ ಅಲ್ಲಿ ಬೆಂಕಿ ಹಚ್ಚಿ ಪೂರ್ಣ ಸುಟ್ಟಿದ್ದಾನೆ. ಡೀಸೆಲ್ ಬಾಟಲಿ, ತಲೆಗೆ ಹೊಡೆಯಲು ಬಳಸಿದ್ದ ಕೊಳವೆ ಮತ್ತು ಶವಕ್ಕೆ ಬೆಂಕಿ ಹಚ್ಚಲು ತಂದಿದ್ದ ಡೀಸೆಲ್ ಮನೆಯಲ್ಲಿ ಸಿಕ್ಕಿದ್ದು, ಪೊಲೀಸರು ವಶಪಡಿಸಿಕೊಂಡಿದ್ದಾರೆ. ಸಾಕ್ಷ್ಯನಾಶಪಡಿಸಲು ಸಹಕರಿಸಿದ ಕಾರಣಕ್ಕೆ ಗ್ರಾಮದ 14 ಜನರ ವಿರುದ್ಧ ದೂರು ದಾಖಲು ಮಾಡಿಕೊಂಡಿದ್ದಾರೆ. ಹಚ್ಚಡಮನೆ ಗ್ರಾಮದ ಪಾಪಣ್ಣ, ಚಂದ್ರ, ಮೂರ್ತಣ್ಣ, ಕೋಗಿಲೆಮನೆ ಗ್ರಾಮದ ಚಂದ್ರಮ್ಮ, ಮಾಡಲ್‌ ಗ್ರಾಮದ ಚೆನ್ನಿ, ಮಾಣಿಮಕ್ಕಿ ಗ್ರಾಮದ ವೆಂಕಟೇಶ್‌, ಮಹೇಶ್‌, ಕುಮಾರ್, ಗಣೇಶ್, ನಿಶಾಂತ್, ವಿಶ್ವ, ರಮೇಶ್‌ ಎಂಬುವರ ವಿರುದ್ಧ ಕೊಲೆ ಸಾಕ್ಷಿ ನಾಶಪಡಿಸಲು ಸಹಕರಿಸಿದ ಆರೋಪ ಮೇಲೆ ದೂರು ದಾಖಲಾಗಿದೆ. ಎಎಸ್ಪಿ ಕೃಷ್ಣಮೂರ್ತಿ, ಬಿಎಸ್ಪಿ ಪುರುಷೋತ್ತಮ್‌, ಸಿಪಿಐ ಸತ್ಯನಾರಾಯಣ, ಪಿಎಸ್‌ಐ ಗ್ರಾಮಕ್ಕೆ ಭೇಟಿ ನೀಡಿದ್ದರು.

click me!