ಗಂಡನಿಂದಲೇ ಹೆಂಡತಿ ಬರ್ಬರ ಹತ್ಯೆಯಾಗಿದ್ದಾಳೆ. ಆಕೆಯ ಗಂಡನೇ ಹತ್ಯೆ ಮಾಡಿ ಪರಾರಿಯಾಗಿದ್ದಾನೆ ಎನ್ನುವ ಆರೋಪವು ಸಹ ಕೇಳಿ ಬಂದಿದೆ. ಸದ್ಯ ಪ್ರಕರಣ ದಾಖಲಿಸಿಕೊಂಡಿರೋ ಅಶೋಕ್ ನಗರ ಪೊಲೀಸರು ಆರೋಪಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.
ಕಿರಣ್.ಕೆ.ಎನ್.ಏಷ್ಯಾನೆಟ್ ಸುವರ್ಣ ನ್ಯೂಸ್
ಬೆಂಗಳೂರು (ಫೆ.13): ಆ ದಂಪತಿಗಳು ಮದುವೆಯಾಗಿ ಕೆಲ ವರ್ಷಗಳೇ ಕಳೆದು ಹೋಗಿತ್ತು. ಆದರೆ ಅವರಿಬ್ಬರ ವೈಮನಸ್ಸಿನಿಂದ ಇಬ್ಬರು ದೂರವಾಗಿದ್ರು. ಹೀಗಿದ್ರು ತಮ್ಮದೆ ಆದಂತಹ ಜೀವನದಲ್ಲಿ ಅವರು ತೊಡಗಿದ್ರು. ಆದ್ರೆ ಇವತ್ತು ಆಕೆಯ ಆಯಸ್ಸು ಮುಗಿದು ಹೋಗಿತ್ತು ಅನ್ನಿಸುತ್ತೆ. ಆಕೆಯ ಗಂಡನಿಂದಲೇ ಹೆಂಡತಿ ಬರ್ಬರ ಹತ್ಯೆಯಾಗಿದ್ದಾಳೆ. ಆಕೆಯ ಗಂಡನೆ ಹತ್ಯೆ ಮಾಡಿ ಪರಾರಿಯಾಗಿದ್ದಾನೆ ಎನ್ನುವ ಆರೋಪವು ಸಹ ಕೇಳಿ ಬಂದಿದೆ. ಕೌಸರ್ ಮುಬೀನ್ ವಯಸ್ಸು 35. ಸುಮಾರು ವರ್ಷಗಳ ಹಿಂದೆ ನದೀಮ್ ಎಂಬಾತನನ್ನು ವರಿಸಿದ್ದ ಈಕೆ ತದನಂತರ, ಇವರಿಬ್ಬರ ಮಧ್ಯೆ ಹೊಂದಾಣಿಕೆ ಆಗದ ಕಾರಣ ಇಬ್ಬರ ವೈಮನಸ್ಸಿನಿಂದ ಬೇರೆಯಾಗಿದ್ದರು. ಇನ್ನು ಮುಬೀನ ತನ್ನ ಮಗಳ ಜೊತೆ ಶಾಂತಿನಗರ ಬಳಿಯ ನಂಜಪ್ಪ ಸರ್ಕಲ್ ಬಳಿಯ ಮನೆಯೊಂದರಲ್ಲಿ ವಾಸವಿದ್ಲು. ಆದ್ರೆ ಇಂದು ಆಕೆಯ ಕೊನೆ ದಿನ ಅಂತ ಆಕೆಗೂ ಸಹ ಗೊತ್ತಿರಲಿಲ್ಲ ಅನ್ನಿಸತ್ತೆ ಮುಬೀನ ಬಾರದ ಲೋಕಕ್ಕೆ ಹೋಗಿದ್ದಾಳೆ.
ಇಬ್ಬರ ಮಧ್ಯೆ ಹೊಂದಾಣಿಕೆ ಇರದ ಕಾರಣ ಇಬ್ಬರು ಸಹ ಬೇರೆ ಬೇರೆ ವಾಸವಿದ್ರು. ಹೀಗಿದ್ರು ಸಹ ನದೀಮ್ ಆಗಾಗ ಮನೆ ಹತ್ತಿರ ಬಂದು ಆಗಾಗ ಜಗಳ ಮಾಡಿ ಹೋಗ್ತಾಯಿದ್ದ. ಇಂದು ಸಹ ಆಕೆ ಒಬ್ಬಳೆ ಇದ್ದಾಳೆ ಎಂದು ಗೊತ್ತಾಗಿ ಬಂದು ಜಗಳವಾಡಿದ್ದಾನೆ. ಇಬ್ಬರ ಮಧ್ಯೆ ಸಹ ಮಾತಿಗೆ ಮಾತು ಬೆಳೆದಿದೆ.. ಇಬ್ಬರು ಸಹ ಮನೆ ಹೊಸ್ತಿಲಲ್ಲಿಯೇ ಜಗಳವಾಡಿದ್ದಾರೆ. ಅಕ್ಕಪಕ್ಕದ ಮನೆಯವರಿಗೂ ಸಹ ಇವರ ಜಗಳ ಕೇಳಿಸುತ್ತಿತ್ತು.
ಅಮ್ಮನ ಮೇಲೆ ಲೈಂಗಿಕ ದೌರ್ಜನ್ಯಕ್ಕೆ ಸೇಡು ತೀರಿಸಿಕೊಂಡ UPSC aspirant ಮಗ
ಹೀಗಿರುವಾಗ್ಲೆ ನದೀಮ್ ಆಕೆಯನ್ನು ಮುಗಿಸಲೇ ಬೇಕು ಅಂತ ತೀರ್ಮಾನ ಮಾಡಿದ್ದ ಅನ್ನಿಸತ್ತೆ. ಹೀಗಾಗಿ ಜಗಳವಾಡುತ್ತಲೇ ಹೆಂಡತಿ ಕುತ್ತಿಗೆಗೆ ಚಾಕು ಇರಿದ್ದಿದ್ದ ಈ ಪಾಪಿ ಗಂಡ. ಬಾಗಿಲ ಹೊಸ್ತಿಲಲ್ಲೆ ಬಿದ್ದು ಕೌಸರ್ ಸಹ ಪ್ರಾಣ ಬಿಟ್ಟಿದ್ದಾಳೆ. ಜನರು ಸೇರುತ್ತಿದ್ದಂತೆ ಅಲ್ಲಿಂದ ಆತ ಕಾಲ್ ಕಿತ್ತಿದ್ದ. ತಕ್ಷಣ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರ ಸಹ ಸ್ಥಳಕ್ಕೆ ಬರುವಷ್ಟರಲ್ಲಿ ಆಕೆಯ ಪ್ರಾಣ ಪಕ್ಷಿ ಹಾರಿಹೋಗಿತ್ತು. ಇನ್ನು ಸ್ಥಳಕ್ಕೆ ಎಫ್.ಎಸ್.ಎಲ್ ತಂಡ ಮತ್ತು ಶ್ವಾನದಳದ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಶಾಲೆಯಲ್ಲಿ ಸಹ ಶಿಕ್ಷಕರ ಕಿರುಕುಳ ಆರೋಪ, ತಹಶಿಲ್ದಾರ ಕಚೇರಿ ಆವರಣದಲ್ಲಿ ನೇಣಿಗೆ ಶರಣಾದ
ಇದೀಗ ತನ್ನ ತಾಯಿಯನ್ನು ಕಳೆದುಕೊಂಡು ಕೌಸರ್ ನ ಮಗಳು ಇದೀಗ ಅನಾಥವಾಗಿದ್ದಾಳೆ. ಅದೇನೆ ಇದ್ರು ಸಹ ಇಷ್ಟವಿಲ್ಲ ಅಂದಿದ್ದರೆ ಇಷ್ಟು ದಿನ ಬದುಕುತ್ತಿದ್ದ ರೀತಿಯಲ್ಲಿಯೇ ಬದುಕ್ಕಿದ್ದರೆ ಎಲ್ಲಾವು ಸಹ ಸರಿಯಾಗುತ್ತಿತ್ತು. ಆದ್ರೆ ಕೋಪದ ಕೈಗೆ ಬುದ್ದಿಕೊಟ್ಟ ನದೀಮ್ ಒಂದು ಜೀವವನ್ನೆ ಬಲಿ ಪಡೆದಿದ್ದಾನೆ. ಸದ್ಯ ಪ್ರಕರಣ ದಾಖಲಿಸಿಕೊಂಡಿರೋ ಅಶೋಕ್ ನಗರ ಪೊಲೀಸರು ಆರೋಪಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.