ವಾಸ್ತುತಜ್ಞ ಚಂದ್ರಶೇಖರ ಗುರೂಜಿ ಹತ್ಯೆ ಪ್ರಕರಣದಲ್ಲಿ ಆರೋಪಿಗಳನ್ನ ಪೊಲೀಸರು ಬಂಧಿಸಿದ್ದು, ವಿಚಾರಣೆ ನಡೆಸಿದ್ದಾರೆ. ವಿಚಾರಣೆ ವೇಳೆ ಹಂತಕರ ಸ್ಫೋಟಕ ಮಾಹಿತಿಗಳನ್ನ ಬಿಚ್ಚಿಟ್ಟಿದ್ದಾರೆ. ಅದನ್ನ ಏಷ್ಯಾನೆಟ್ ಸುವರ್ಣ ನ್ಯೂಸ್ ನಿಮ್ಮ ಮುಂದಿಡುತ್ತಿದೆ.
ವರದಿ:- ಗುರುರಾಜ ಹೂಗಾರ, ಹುಬ್ಬಳ್ಳಿ
ಹುಬ್ಬಳ್ಳಿ, (ಜುಲೈ.07): ವಾಸ್ತುತಜ್ಞ ಚಂದ್ರಶೇಖರ ಗುರೂಜಿ ಹತ್ಯೆ ಪ್ರಕರಣದಲ್ಲಿ ಬಗೆದಷ್ಟು ರೋಚಕ ವಿಚಾರಗಳು ಹೊರಬರುತ್ತಿವೆ. ಜುಲೈ 3 ರಂದೇ ಬೆಂಗಳೂರಿನ ಕಾರ್ಯಕ್ರಮ ಒಂದರಲ್ಲಿ ಭಾಗವಹಿಸಲು ಆಗಮಿಸಲಿದ್ದ ಗುರೂಜಿಯನ್ನ ಹತ್ಯೆಗೈಯುವ ಪ್ಲಾನ್ ರೂಪಿಸಲಾಗಿತ್ತು ಎಂಬ ವಿಚಾರ ತನಿಖೆ ವೇಳೆ ಬೆಳಕಿಗೆ ಬಂದಿದೆ.
ಹಂತಕರು ವಿಚಾರಣೆ ವೇಳೆ ಬಾಯ್ಬಿಟ್ಟ ಒಂದೊಂದು ರೋಚಕ ಸತ್ಯಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್ ಬಯಲಿಗೆಳಿದೆ. ಹತ್ಯೆಗೂ ಮುನ್ನ ಹಂತಕ ಮಹಾಂತೇಶ್ ಶಿರೂರ್ ಮಾಡಿದ್ದ ಪ್ಲಾನ್ ಹೇಗಿತ್ತು ? ಯಾವ ಕಾರಣಕ್ಕಾಗಿ ಗುರೂಜಿ ಅವರನ್ನು ಕೊಲೆ ಮಾಡಿದೆ ಎಂಬುದನ್ನು ವಿಚಾರಣೆ ವೇಳೆ ಹಂತಕ ಮಹಾಂತೇಶ್ ಹಾಗು ಮಂಜುನಾಥ ಮರೆವಾಡ ಬಾಯ್ಬಿಟ್ಟದ್ದು, ವಿಚಾರಗಳನ್ನು ಕೇಳಿದ ಪೊಲೀಸರೇ ಒಂದು ಕ್ಷಣ ದಂಗಾಗಿ ಹೋಗಿದ್ದಾರೆ.
undefined
ಚಂದ್ರಶೇಖರ ಗುರೂಜಿ ಮರ್ಡರ್ ಮಿಸ್ಟ್ರಿ! ಪೊಲೀಸರೆದುರು ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಹಂತಕರು
ಸಾರ್ವಜನಿಕವಾಗಿಯೇ ಗುರೂಜಿಯನ್ನ ಹತ್ಯೆ ಮಾಡುವುದು, ಅವರ ಹತ್ಯೆ ಸಾರ್ವಜನಿಕರನ್ನು ಬೆಚ್ಚಿಬೀಳಿಸುವಂತಿರಬೇಕು ಎಂಬುದು ಹಂತಕರ ಪ್ಲಾನ್ ಆಗಿತ್ತು. ಬೆನಾಮಿ ಆಸ್ತಿ ಮರಳಿ ಪಡೆಯುವ ವಿಚಾರದಲ್ಲಿ ಗುರೂಜಿ ಹಾಗೂ ಮಹಾಂತೇಶ್ ನಡುವೆ ದೊಡ್ಡ ಮಟ್ಟದ ವೈಮನಸ್ಯ ಉಂಟಾಗಿತ್ತು. ಚಂದ್ರಶೇಖರ ಗುರೂಜಿ, ಮಹಾಂತೇಶ್ ಜೊತೆ ಅತ್ಯಂತ ನಿರ್ದಯವಾಗಿ ವರ್ತಿಸಿದ್ದರು ಎನ್ನಲಾಗಿದೆ. ಇದೇ ಕಾರಣಕ್ಕೆ ಚಂದ್ರಶೇಖರ ಗುರೂಜಿಯನ್ನ ಉಳಿಸಲೇ ಬಾರದು ಎಂದು ನಿರ್ಧರಿಸಿದ್ದ ಮಹಾಂತೇಶ್ ಸಮಯಕ್ಕಾಗಿ ಕಾದು ಕುಳಿತಿದ್ದ.
ಜುಲೈ 3 ರಂದು ಚಂದ್ರಶೇಖರ ಗುರೂಜಿ ಬೆಂಗಳೂರಿನಲ್ಲಿ ಕಾರ್ಯಕ್ರಮದಲ್ಲಿ ಒಂದರಲ್ಲಿ ಭಾಗವಹಿಸಲಿದ್ದಾರೆ ಎಂಬುದನ್ನು ಖಚಿತಪಡಿಸಿಕೊಂಡಿದ್ದ ಮಹಾಂತೇಶ್. ಗುರೂಜಿ ಅವರನ್ನು ಬೆಂಗಳೂರಿನಲ್ಲೇ ಕೊಲೆ ಮಾಡುವ ಪ್ಲಾನ್ ರೂಪಿಸಿದ್ದ, ಆದ್ರೇ ಚಂದ್ರಶೇಖರ ಗುರೂಜಿಯವರ ,11 ವರ್ಷದ ಮೊಮ್ಮಗ ಅನಾರೋಗ್ಯದಿಂದ ಮೃತಪಟ್ಟ ಕಾರಣಕ್ಕೆ ಗುರೂಜಿಯ ಬೆಂಗಳೂರಿನ ಕಾರ್ಯಕ್ರಮ ರದ್ದು ಮಾಡಿ ಹುಬ್ಬಳ್ಳಿಗೆ ಬಂದಿದ್ದರು, ಇದರಿಂದಾಗಿ ಹಂತಕ ಮಹಾಂತೇಶ್ ರೂಪಿಸಿದ್ದ ಪ್ಲಾನ್ ಫೇಲ್ ಆಗಿತ್ತು.
ಸರಳ ವಾಸ್ತು ಚಂದ್ರಶೇಖರ್ ಗುರೂಜಿ ಹತ್ಯೆ ಮುಂಚೆ ಆರೋಪಿ ಮಾಡಿದ್ದ ಸಿಕ್ರೇಟ್ ಪ್ಲಾನ್
ಕೊಲೆಗೂ ಮುನ್ನ ನಿರಂತರವಾಗಿ ಗುರೂಜಿ ಭೇಟಿ ಮಾಡಿದ್ದ ಹಂತಕರು.
ಗುರೂಜಿ ಹತ್ಯೆಗೈಯುವ ಮುನ್ನ ಹಂತಕರು ಸತತ ಎರಡು ದಿನಗಳಿಂದ ಗುರೂಜಿ ಅವರನ್ನು ನಿರಂತರವಾಗಿ ಭೇಟಿ ಮಾಡಿದ್ದರು.ಜುಲೈ ೩ ರಂದು ಮೊಮ್ಮಗನ ಅಂತ್ಯಕ್ರಿಯೆ ಮುಗಿಸಿ ಗೋಕುಲ ರಸ್ತೆಯ ತಮ್ಮದೇ ಅಪಾರ್ಟ್‌ಮೆಂಟ್ ನಲ್ಲಿ ತಂಗಿದ್ದ ಗುರೂಜಿ ಅವರನ್ನು ಕುಟುಂಬಸ್ಥರ ಸಮ್ಮುಖದಲ್ಲಿ ಭೇಟಿಯಾಗಿದ್ದರು. ಇನ್ನು ಜುಲೈ ನಾಲ್ಕರಂದು ಪ್ರೆಸಿಡೆಂಟ್ ಹೋಟೆಲ್ ನಲ್ಲಿತಂಗಿರುವ ವಿಚಾರ ತಿಳಿದು ಅಲ್ಲಿಗೆ ತೆರೆಳಿ ಅರ್ದ ಗಂಟೆಗೂ ಹೆಚ್ಚು ಕಾಲ ಮಾತುಕತೆ ನಡೆಸಿದ್ದರು. ಆದ್ರೇ ಗುರೂಜಿ ಗೆ ಅಗಲಿ, ಅವರ ಕುಟುಂಬಸ್ಥರಿಗೆ ಆಗಲಿ ಸಣ್ಣ ಸುಳಿವು ಸಿಕ್ಕಿರಲಿಲ್ಲ..!
ಗುರೂಜಿಗೆ ಬಲಗೈ ಬಂಟನಂತೆ ಕೆಲಸ ಮಾಡುತ್ತಿದ್ದ, ಹಂತಕ ಮಹಾಂತೇಶ್
2008 ರಿಂದ 2016 ವರೆಗೆ ಹಂತಕ ಮಹಾಂತೇಶ್ ಸರಳ ವಾಸ್ತ ಸಂಸ್ಥೆಯಲ್ಲಿ ಕೆಲಸಮಾಡುತ್ತಿದ್ದ.ಈ ವೇಳೆ ಮಹಾಂತೇಶ್ ಸಂಸ್ಥೆಯಲ್ಲಿ ವೈಸ್ ಪ್ರೆಸಿಡೆಂಟ್ ಹುದ್ದೆನೀಡಲಾಗಿತ್ತು. ಕೇವಲ ಕರ್ನಾಟಕ ಮಾತ್ರವಲ್ಲದೆ ಇಡೀ ದೇಶದ ಇತರೆ ರಾಜ್ಯಗಳ ಶಾಖೆ ನಿರ್ವಾಹಣೆ, ಹಣಕಾಸು ವ್ಯವಹಾರ, ದೊಡ್ಡ ದೊಡ್ಡ ಇವೆಂಟ್ ಗಳ ಆಯೋಜಿಸುವುದು, ಉದ್ಯೋಗಿಗಳ ನೇಮಕಾತಿ ಹೀಗೆ ಪ್ರತಿಯೊಂದು ಕೆಲಸವನ್ನು ಮಹಾಂತೇಶ್ ನೇರವಾಗಿ ಮಾಡುತ್ತಿದ್ದ, ಅಷ್ಟೇ ಅಲ್ಲದೇ ಸಿ.ಜಿ. ಪರಿವಾರ ಸಂಸ್ಥೆಯಲ್ಲಿ ಗುರೂಜಿ ನಂತರದ ಸ್ಥಾನ ಮಹಾಂತೇಶ್ ನಿರ್ವಹಣೆ ಮಾಡುತ್ತಿದ್ದ. ಇದರಿಂದ ಸಾವಿರಾರು ಉದ್ಯೋಗಿಗಳಿಗೆ ಮಹಾಂತೇಶ್ ಬಾಸ್ ಆಗಿದ್ದ.
2008 ರಿಂದ 2015 ರ ಅವಧಿಯಲ್ಲಿ ಚಂದ್ರಶೇಖರ ಗುರೂಜಿ ಸಂಸ್ಥೆಯ 10 ಕ್ಕೂ ಹೆಚ್ಚು ನೌಕರರು ಹೆಸರಲ್ಲಿ ಕೋಟ್ಯಾಂತರ ರೂಪಾಯಿ ಬೆನಾಮಿ ಆಸ್ತಿ ಮಾಡ್ತಾರೆ. ಒಂದು ಅಂದಾಜಿನ ಪ್ರಕಾರ ಹುಬ್ಬಳ್ಳಿ ಧಾರವಾಡ ಅವಳಿ ನಗರ ಸೇರಿದಂತೆ ಉತ್ತರ ಕರ್ನಾಟಕ ಭಾಗದ 200 ಎಕರೆಗೂ ಅಧಿಕ ಭೂಮಿಯನ್ನು ಬೆನಾಮಿ ಹೆಸರಲ್ಲಿ ಮಾಡಿದ್ರು. ಆದ್ರೆ ಗುರೂಜಿ ಮಾಡಿದ ಬಹುತೇಕ ಬೆನಾಮಿ ಆಸ್ತಿಗಳಲ್ಲೇವು ಮಹಾಂತೇಶ ಶಿರೂರ್ ಸೇರಿದಂತೆ ಅವರ ಕೈ ಕೆಳಗೆ ಕೆಲಸ ಮಾಡುವ ಹುಡುಗರ ಹೆಸರಲ್ಲಿ ಇದ್ದುವು ಅನ್ನೊದು ತಿಳಿಯಲೇ ಬೇಕಾದ ವಿಚಾರ.
2016 ರಲ್ಲಿ ಮಹಾಂತೇಶ್ ನನ್ನ ಸಂಸ್ಥೆಯಿಂದ ಹೊರಗಟ್ಟಿದ ಗುರೂಜಿ..!!
ಹೌದು ಸರಳ ವಾಸ್ತು ಸಂಸ್ಥೆಯಲ್ಲಿ ಅತ್ಯಂತ ಕೀ ಪ್ಲೇಸ್ ನಲ್ಲಿದ್ದ ಮಹಾಂತೇಶ್ ನ ಒಂದೊಂದೇ ಅವ್ಯವಹಾರಗಳು ಬೆಳಕಿಗೆ ಬರಲಾರಂಭಿಸಿದ್ವು.ಇದನ್ನು ಮನಗಂಡ ಗುರೂಜಿ, ಮಹಾಂತೇಶನಿಗೆ ಸಂಸ್ಥೆಯಿಂದ ಗೇಟ್ ಪಾಸ್ ನೀಡಿದ್ದರು. ಇದು ಮಹಾಂತೇಶನ ಅಸಮಾಧಾನಕ್ಕೆ ಕಾರಣವಾಗಿತ್ತು. ಆಗ ಸ್ವಲ್ಪ ದಿನ ಸುಮ್ಮನಿದ್ದ ಮಹಾಂತೇಶ್ ತನ್ನ ಹೆಸರಲ್ಲಿ ಇದ್ದ ಒಂದೊಂದೇ ಬೆನಾಮಿ ಆಸ್ತಿಗಳನ್ನು ಮಾರಾಟಕ್ಕೆ ಮುಂದಾಗಿದ್ದ. ಅಷ್ಟೇ ಅಲ್ಲದೇ ಸಂಸ್ಥೆಯ ನೌಕರರು ಹೆಸರಲ್ಲಿ ಮಾಡಿದ್ದ ಆಸ್ತಿಗಳ ವಿವರ ಅರಿತಿದ್ದ ಮಹಾಂತೇಶ್ ಆ ಯುವಕರನ್ನು ಗುರೂಜಿ ವಿರುದ್ಧ ತಿರುಗಿ ಬಿಳುವಂತೆ ಮಾಡ್ತಾರೆ.
ಆಗ ಗುರೂಜಿ ಅನಿವಾರ್ಯವಾಗಿ ಮಹಾಂತೇಶ್ ನ ಸಹಾಯಪಡೆದು ಒಂದೊಂದೇ ಬೆನಾಮಿ ಆಸ್ತಿಗಳನ್ನು ಮರಳಿ ಪಡೆಯಲು ಆರಂಭಿಸಿದ್ದ, ಅದಕ್ಕಾಗಿ ಮಹಾಂತೇಶನಿಗೆ ಆಗಾಗ್ಗೆ ಒಂದಿಷ್ಟು ಹಣವನ್ನು ನೀಡುತ್ತಿದ್ದ ಎನ್ನಲಾಗಿದೆ. ಆದರೆ ಯಾವಾಗ ಮಹಾಂತೇಶ್ ನ ಹೆಸರಲ್ಲಿದ್ದ ಬೆನಾಮಿ ಆಸ್ತಿ ಮತ್ತೊಬ್ಬರಿಗೆ ಮಾರಾಟ ಮಾಡಿದ್ದ ತಿಳಿಯುತ್ತಿದ್ದಂತೆ ಗುರೂಜಿ ಆ ಆಸ್ತಿಗಳ ಮೇಲೆ ಕೋರ್ಟ್ ನಲ್ಲಿ ದಾವೆ ಹೂಡಿದ್ದರು. ಇದರಿಂದ ಮಹಾಂತೇಶ್ ಮತ್ತಷ್ಟು ಕ್ರೋಧಗೊಂಡಿದ್ದ. ಈಗಾಗಲೇ ಆಸ್ತಿ ಮಾರಾಟ ಮಾಡಿ ಅವರಿಂದ ಹಣ ಪಡೆದಿದ್ದ ಮಹಾಂತೇಶನಿಗೆ ಹೊಸ ತಲೆ ನೋವು ನೀವು ಶುರಿವಾಗಿತ್ತು.
ಗುರೂಜಿಯನ್ನ ಮುಗಿಸಲೇಬೆಕು ಎಂದು ನಿರ್ಧರಿಸಿದ್ಸ ಮಹಾಂತೇಶ್ ಶಿರೂರ
ಗುರೂಜಿ ಬೆನಾಮಿ ಆಸ್ತಿಗಳನ್ನು ಮರಳಿಕೊಡಿಸುವಾಗ ಗುರೂಜಿ ಮಾತುಕೊಟ್ಟಂತೆ, ಮಹಾಂತೇಶ ಶಿರೂರ್ ಗೆ ಹಣ ನೀಡಿರಲಿಲ್ಲವಂತೆ. ತನಗೆ ಕೊಡುವುದಾಗಿ ಹೇಳಿದ್ದ ೬೦ ಲಕ್ಷ ಹಣ, ಹಾಗು ಪ್ಲ್ಯಾಟ್ ಕೊಡಿ ಎಂದು ಮಹಾಂತೇಶ್ ಗುರೂಜಿ ಬಳಿ ಕೇಳಿಕೊಂಡಿದ್ದ. ಅದಕ್ಕೆ ಆರಂಭದಲ್ಲಿ ಒಪ್ಪಿಕೊಂಡಿದ್ದ ಗುರೂಜಿ ನಂತರ ಕೊಟ್ಟಿರಲಿಲ್ಲವಂತೆ.
ಅಷ್ಟೇ ಅಲ್ಲದೇ ಮಹಾಂತೇಶ ತನ್ನ ಹೆಸರಲ್ಲಿ ಇದ್ದ ಜಮೀನು ಮುಖಂಡರೊಬ್ಬರಿಗೆ ಮಾರಾಟ ಮಾಡಿದ್ದ, ಅದರ ಗುರೂಜಿ ಹಾಕಿದ್ದ ಕೇಸ್ ವಾಪಸು ಪಡೆಯುವಂತೆ ಕೇಳಿಕೊಂಡಿದ್ದನಂತೆ. ಅದಕ್ಕೂ ಗುರೂಜಿ ಒಪ್ಪಿರಲಿಲ್ಲ.. ಒಂದುಕಡೆ ಆಸ್ತಿಮಾರಾಟ ಮಾಡಿ ಹಣ ಪಡೆದಿದ್ದ ಮಹಾಂತೇಶಗೆ ಮುಖಂಡರೊಬ್ಬರು ಹಣ ಮರಳಿಕೊಡುವಂತೆ ಕಿರುಕುಳ ಇತ್ತು ಎನ್ನಲಾಗಿದೆ ಈ ಎಲ್ಲಕಾರಣಗಳಿಗಾಗಿ ಗುರೂಜಿ ಹತ್ಯೆಗೈಯುವ ಪ್ಲಾನ್ ಮಾಡಿಕೊಂಡಿದ್ದ. ಮೂರು ತಿಂಗಳಿಂದ ತನ್ನ ಆಪ್ತರ ಬಳಿ ಗುರೂಜಿ ಗೆ ಒಂದು ಗತಿ ಕಾಣಿಸುವುದಾಗಿ ಹೇಳಿಕೊಂಡಿಓಡಾಡುತ್ತಿದ್ದನಂತೆ. ಅದರಂತೆ ಜುಲೈ 5 ರಂದು ಮಂಜುನಾಥ ಜೊತೆ ಗೂಡಿ ಹೋಟೆಲ್ ಗೆ ಬಂದಿದ್ದ ಮಹಾಂತೇಶ್ ಜಮೀನು ವಿಚಾರ ಮಾತನಾಡುವುದು ಇದೆ ಬನ್ನ ಎಂದು ಕರೆಸಿಕೊಂಡು ಹೋಟೆಲನ ಲಾಂಜ್ ನಲ್ಲಿ ಚಾಕುವಿನಿಂದ ಬರ್ಬರವಾಗಿ ಇರಿದು ಕೊಂದಿದ್ದಾನೆ.