* ಮಾರಕಾಸ್ತ್ರಗಳಿಂದ ಕೊಚ್ಚಿ ರೌಡಿಶೀಟರ್‌ನನ್ನ ಹತ್ಯೆಗೈದ ದುಷ್ಕರ್ಮಿಗಳು
* ಆನಂದ್ ಕೊಲೆಯಾದ ರೌಡಿಶೀಟರ್
* ಈ ಸಂಬಂಧ ಪೀಣ್ಯ ಠಾಣೆಯಲ್ಲಿ ಪ್ರಕರಣ ದಾಖಲು
ಬೆಂಗಳೂರು(ಅ.25): ಮೂರು ದಿನಗಳ ಹಿಂದೆಯಷ್ಟೇ ಅಪಹರಣ(Kidnap) ಪ್ರಕರಣದಲ್ಲಿ ಜಾಮೀನು ಪಡೆದು ಜೈಲಿನಿಂದ ಹೊರಬಂದಿದ್ದ ರೌಡಿಶೀಟರ್‌ನೊಬ್ಬನನ್ನು ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಹತ್ಯೆಗೈದು(Murder) ಪರಾರಿಯಾಗಿರುವ ಘಟನೆ ಭಾನುವಾರ ಪೀಣ್ಯ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಪೀಣ್ಯ ನಿವಾಸಿ ಆನಂದ್(36) ಕೊಲೆಯಾದ ರೌಡಿಶೀಟರ್(Rowdysheeter). ರಾತ್ರಿ 8ರ ಸಮಯದಲ್ಲಿ ನೆಲಗದರನಹಳ್ಳಿಯ ಶಿವಪುರದ ಬಳಿ ಆನಂದ್ ಹೋಗುತ್ತಿದ್ದಾಗ, ಬೈಕ್‌ಗಳಲ್ಲಿ ಬಂದು ಅಡ್ಡಗಟ್ಟಿರುವ ದುಷ್ಕರ್ಮಿಗಳು(Miscreants) ಏಕಾಏಕಿ ಮಾರಕಾಸ್ತ್ರಗಳಿಂದ ಹಲ್ಲೆಗೈದು ಪರಾರಿಯಾಗಿದ್ದಾರೆ.
undefined
3 ತಿಂಗಳ ವಯಸ್ಸಿನ ತನ್ನ ಮೊಮ್ಮಗನ್ನೇ ಕೊಂದು ಪರಾರಿಯಾದ ಅಜ್ಜಿ!
ಪೀಣ್ಯ ಹಾಗೂ ರಾಜಗೊಪಾಲಗರ ಪೊಲೀಸ್(Police) ಠಾಣೆ ರೌಡಿಶೀಟರ್ ಆಗಿರುವ ಆನಂದ್ ವಿರುದ್ಧ ಹಲವು ಪ್ರಕರಣಗಳಿವೆ. ತನ್ನ 18ನೇ ವಯಸ್ಸಿನಲ್ಲೇ ಕೊಲೆ ಮಾಡಿ ಜೈಲು(Jail) ಸೇರಿದ್ದ ಆನಂದ್, 2016ರಲ್ಲಿ ಅಪ್ಪಿ ಎಂಬಾತನನ್ನು ಕೊಲೆ ಮಾಡಿದ್ದ. ಕೆಲ ದಿನಗಳ ಹಿಂದೆಯಷ್ಟೇ ಅಪಹರಣ ಪ್ರಕರಣದಲ್ಲಿ ಜೈಲು ಸೇರಿದ್ದ ಆನಂದ್, ಮೂರು ದಿನದ ಹಿಂದೆಯಷ್ಟೇ ಜಾಮೀನು(Bail) ಪಡೆದು ಹೊರಬಂದಿದ್ದ. ಹಳೇಯ ದ್ವೇಷದ ಹಿನ್ನೆಲೆಯಲ್ಲಿ ಪರಿಚಿತರೇ ಆನಂದ್‌ನನ್ನು ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಹತ್ಯೆಯ ವಿಚಾರ ತಿಳಿದು ಉತ್ತರ ವಿಭಾಗದ ಡಿಸಿಪಿ ವಿನಾಯಕ ವಸಂತ ರಾವ್ ಪಾಟೀಲ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಈ ಸಂಬಂಧ ಪೀಣ್ಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.