Bengaluru: ತಾಯಿ ಜೊತೆ ಅಫೇರ್‌, ಬಾಣಸಿಗನ ಹತ್ಯೆ ಮಾಡಿದ ಪುತ್ರ!

By Santosh Naik  |  First Published Jul 29, 2023, 6:10 PM IST

ಆರೋಪಿ ತಲೆಮರೆಸಿಕೊಂಡಿದ್ದು, ಆತನ ಪತ್ತೆಗಾಗಿ ಪೊಲೀಸರು ಬಲೆ ಬೀಸಿದ್ದಾರೆ. ರಾಜಾಜಿನಗರದ ಪಿಜಿಯಲ್ಲಿ ಬಾಣಸಿಗನಾಗಿದ್ದ ರವಿ ಭಂಡಾರಿ ಅಲ್ಲಿಯೇ ಅಡುಗೆ ಸಹಾಯಕಿಯಾಗಿದ್ದ ಪದ್ಮಾವತಿ ಎನ್ನುವ ಮಹಿಳೆಯ ಜೊತೆ ಅನ್ಯೋನ್ಯವಾಗಿದ್ದ. ಅದಕ್ಕಾಗಿ ಕೊಲೆ ಆಗಿರುವ ಸಾಧ್ಯತೆ ಇದೆ ಎಂದಿದ್ದಾರೆ.
 


ಬೆಂಗಳೂರು (ಜು.29): ತಾಯಿ ಜೊತೆ ಅಫೇರ್‌ ಇರಿಸಿಕೊಂಡಿದ್ದ ಎನ್ನುವ ಕಾರಣಕ್ಕಾಗಿ ಪುತ್ರನೊಬ್ಬ ವ್ಯಕ್ತಿಯೊಬ್ಬನನ್ನು ಕೊಲೆ ಮಾಡಿದ ಘಟನೆ ನಗರದ ರಾಜಾಜಿನಗರ 6ನೇ ಬ್ಲಾಕ್‌ನಲ್ಲಿ ನಡೆದಿದೆ. ಶುಕ್ರವಾರ ರಾತ್ರಿ ಈ ಘಟನೆ ನಡೆದಿದೆ. 44 ವರ್ಷದ ರವಿ ಭಂಡಾರಿ ಸಾವು ಕಂಡಿರುವ ವ್ಯಕ್ತಿ. ಶುಕ್ರವಾರ ರಾತ್ರಿ ರಾಹುಲ್‌ ಎನ್ನುವ ವ್ಯಕ್ತಿ ತನ್ನ ಮನೆಯಲ್ಲಿಯೇ ರವಿ ಭಂಡಾರಿಗೆ ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾನೆ ಎನ್ನಲಾಗಿದೆ. ತನ್ನ ತಾಯಿಯಾಗಿರುವ ಪದ್ಮಾವತಿ ಜೊತೆ ಅನೈತಿಕ ಸಂಬಂಧ ಇಟ್ಟುಕೊಂಡಿರುವ ಶಂಕೆ ವ್ಯಕ್ತಪಡಿಸಿ ಆರೋಪಿ ಕೊಲೆ ಮಾಡಿದ್ದಾನೆ ಎಂದು ಹೇಳಲಾಗುತ್ತಿದ್ದು, ಆರೋಪಿ ತನ್ನ ಫೋನ್‌ ಸ್ವಿಚ್‌ ಆಫ್‌ ಮಾಡಿಕೊಂಡು ಪರಾರಿಯಾಗಿದ್ದಾನೆ.  ಈ ಕುರಿತು ಮಾಗಡಿ ರಸ್ತೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ. ಮೃತ ವ್ಯಕ್ತಿ ರವಿ ಭಂಡಾರಿ ರಾಜಾಜಿನಗರ ಪಿಜಿಯಲ್ಲಿ ಬಾಣಸಿಗನಾಗಿ ಕೆಲಸ ಮಾಡುತ್ತಿದ್ದ. ಇದೇ ಪಿಜಿಯಲ್ಲಿ ರಾಹುಲ್‌ನ ತಾಯಿ ಪದ್ಮಾವತಿ ಅಡುಗೆ ಸಹಾಯಕಿಯಾಗಿದ್ದರು. ಶುಕ್ರವಾರ ರಾತ್ರಿ ಪದ್ಮಾವತಿ ಅವರ ಮನೆಯಲ್ಲಿಯೇ ರವಿ ಭಂಡಾರಿಯ ಹತ್ಯೆಯಾಗಿದೆ. 

ಪದ್ಮಾವತಿಯ ಮಗ ರಾಹುಲ್ ಚಾಕುವಿನಿಂದ ಇರಿದು ರವಿ ಭಂಡಾರಿ ಹತ್ಯೆ ಮಾಡಿದ್ದಾರೆ. ತಾಯಿ ಜೊತೆ ಅನ್ಯೋನ್ಯವಾಗಿ ಮಾತನಾಡ್ತಾನೆ, ಅನೈತಿಕ ಸಂಬಂಧ ಶಂಕಿಸಿದ್ದ ರಾಹುಲ್‌ಕೊಲೆ ಮಾಡಿ ಪರಾರಿಯಾಗಿದ್ದಾರೆ. ಶುಕ್ರವಾರ ಮೃತ ರವಿ ಭಂಡಾರಿಗೆ ಕರೆ ಮಾಡಿ‌ ಮಾತಾಡಬೇಕೆಂದು ಆರೋಪಿ ರಾಹುಲ್‌ ಮನೆಗೆ ಕರೆಸಿಕೊಂಡಿದ್ದ. ಕೊಲೆ ನಡೆದ ಸಮಯದಲ್ಲಿ ಆರೋಪಿಯ ತಾಯಿ ಪದ್ಮಾವತಿ ಪಿಜಿಯಲ್ಲಿ ಇದ್ದರು. ಮಾಗಡಿರೋಡ್ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲು ಮಾಡಲಾಗಿದೆ.

ನೆರೆಮನೆಯ ಆಂಟಿ ಜೊತೆ ಲವ್‌, ಮಾರ್ಕೆಟ್‌ನಲ್ಲಿ ಗಂಡನನ್ನು ಬಿಟ್ಟು ಎಸ್ಕೇಪ್‌ ಆದ ಪತ್ನಿ!

ಕೊಲೆ ಮಾಡುವ ಮುನ್ನ ರವಿ ಹಾಗೂ ರಾಹುಲ್‌ ನಡುವೆ ತೀವ್ರ ಮಾತಿನ ಚಕಮಕಿ ನಡೆದಿರುವ ಸಾಧ್ಯತೆ ಇದೆ. ಸಿಟ್ಟಿನ ಭರದಲ್ಲಿ ರಾಹುಲ್‌ ಚಾಕು ಇರುವ ಪರಾರಿಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಪಿಜಿಯಲ್ಲಿ ಕೆಲಸ ಮುಗಿಸಿ ಪದ್ಮಾವತಿ ಮನೆಗೆ ವಾಪಾಸ್‌ ಬಂದಾಗ, ಮನೆಯಲ್ಲಿ ರವಿ ಹೆಣವಾಗಿ ಪತ್ತೆಯಾಗಿದ್ದಾನೆ. ತಕ್ಷಣವೇ ಆಕೆ ಪೊಲೀಸರಿಗೆ ಮಾಹಿತಿ ನೀಡಿದ್ದಳು.

Tap to resize

Latest Videos

'ಬೀಸೋ ಗಾಳಿಗೂ.. ಬೀಳೋ ಮರಕ್ಕೂ ಲವ್ವಾಗಿದೆ..' 47ರ ಮಹಿಳೆಯನ್ನು ಮದುವೆಯಾದ 76ರ ವೃದ್ಧ!

click me!