ಹಾವೇರಿ ಜಿಲ್ಲೆ ರಾಣಿಬೆನ್ನೂರು ತಾಲೂಕಿನ ಹನುಮನಮಟ್ಟಿ ಕೃಷಿ ಮಹಾವಿದ್ಯಾಲಯದಲ್ಲಿ ನಡೆದ ಘಟನೆ| ಸಹಾಯಕ ಅಧ್ಯಾಪಕ ಡಾ.ನೂರ್‌ನವಾಜ್‌ನಿಂದ ಹೇಯ ಕೃತ್ಯ| ಲಾಕ್‌ಡೌನ್‌ಅವಧಿಯಲ್ಲಿ ಬಲವಂತದಿಂದ ಅತ್ಯಾಚಾರ|
ರಾಣಿಬೆನ್ನೂರು(ಮಾ.19): ವಿದ್ಯಾರ್ಥಿನಿಯ ಮೇಲೆ ಅಧ್ಯಾಪಕರೇ ಲೈಂಗಿಕ ದೌರ್ಜನ್ಯ ಎಸಗಿರುವ ಘಟನೆ ಹಾವೇರಿ ಜಿಲ್ಲೆ ರಾಣಿಬೆನ್ನೂರು ತಾಲೂಕಿನ ಹನುಮನಮಟ್ಟಿ ಕೃಷಿ ಮಹಾವಿದ್ಯಾಲಯದಲ್ಲಿ ನಡೆದಿದೆ. ನೊಂದ ವಿದ್ಯಾರ್ಥಿನಿ ರಾಣಿಬೆನ್ನೂರು ಗ್ರಾಮೀಣ ಠಾಣೆ ಪೊಲೀಸರಿಗೆ ದೂರು ನೀಡಿದ್ದಾಳೆ.
ಆರೋಪಿ ಸಹಾಯಕ ಅಧ್ಯಾಪಕ ಡಾ.ನೂರ್‌ನವಾಜ್, 2019ರಿಂದ, ‘ನೀನು ನನಗೆ ಇಷ್ಟ. ನೀನು ಸಹರಿಸಿದರೆ ನನ್ನ ವಿಷಯದ ಪರೀಕ್ಷೆಯಲ್ಲಿ ಉತ್ತೀರ್ಣ ಮಾಡುತ್ತೇನೆ. ಇಲ್ಲವಾದರೆ ಕಡಿಮೆ ಅಂಕ ನೀಡಿ ಫೇಲ್‌ಮಾಡುತ್ತೇನೆ’ ಎಂದು ಹೆದರಿಸಿ ತನ್ನ ಚೇಂಬರಿನಲ್ಲಿಯೇ ಅತ್ಯಾಚಾರ ನಡೆಸಿದ್ದಾನೆ ಎಂದು ವಿದ್ಯಾರ್ಥಿನಿ ದೂರಿನಲ್ಲಿ ಆರೋಪಿಸಿದ್ದಾಳೆ.
ಅಪ್ರಾಪ್ತೆಯ ಅಪಹರಿಸಿ ಅತ್ಯಾಚಾರ : 26 ದಿನದಲ್ಲಿ ಗಲ್ಲು ಶಿಕ್ಷೆ
ಲಾಕ್‌ಡೌನ್‌ಅವಧಿಯಲ್ಲಿ ಬಲವಂತದಿಂದ ಹಾವೇರಿಗೆ ಕರೆದುಕೊಂಡು ಹೋಗಿ ಒಂದು ಮನೆ ಮಾಡಿ ನಿರಂತರ ಅತ್ಯಾಚಾರ ಮಾಡಿದ್ದಾನೆ. ಆರೋಪಿಯ ಪತ್ನಿಗೆ ವಿಷಯ ಗೊತ್ತಾಗಿ ಮಾ.12ರಂದು ಹಾವೇರಿಗೆ ಬಂದು ತನ್ನ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ವಿದ್ಯಾರ್ಥಿನಿ ತಿಳಿಸಿದ್ದಾಳೆ.