ಜಿಲ್ಲೆಯ ಗಜೇಂದ್ರಗಡ ತಾಲೂಕಿನ ಬೇವಿನಕಟ್ಟಿ ಗ್ರಾಮದ ಹೊರವಲಯದಲ್ಲಿನ ಲಕ್ಕಿ ಡಾಬಾಕ್ಕೆ ನುಗ್ಗಿದ್ದ ಪ್ರೊಬೆಷನರಿ ಪಿಎಸ್‌ಐ ಸೇರಿದಂತೆ ಐವರು ಗಲಾಟೆ ಮಾಡಿದ್ದಾರೆ. ಬಾಗಲಕೋಟೆ ಜಿಲ್ಲೆಯಲ್ಲಿ ಪ್ರೊಬೆಷನರಿ ಪಿಎಸ್‌ಐ ಆಗಿರುವ ಅರವಿಂದ ಅಂಗಡಿ ಹಾಗೂ ಸ್ನೇಹಿತರು ಡಾಬಾ ಮಾಲೀಕ ಶ್ರೀಶೈಲ ಕಳ್ಳಿಮಠ ಅವರ ಮೇಲೆ ಹಲ್ಲೆ ಮಾಡಿದ್ದಾರೆ.
ವರದಿ: ಗಿರೀಶ್ ಕಮ್ಮಾರ, ಏಷ್ಯಾನೆಟ್ ಸುವರ್ಣನ್ಯೂಸ್, ಗದಗ
ಗದಗ (ಜು.05): ಜಿಲ್ಲೆಯ ಗಜೇಂದ್ರಗಡ ತಾಲೂಕಿನ ಬೇವಿನಕಟ್ಟಿ ಗ್ರಾಮದ ಹೊರವಲಯದಲ್ಲಿನ ಲಕ್ಕಿ ಡಾಬಾಕ್ಕೆ ನುಗ್ಗಿದ್ದ ಪ್ರೊಬೆಷನರಿ ಪಿಎಸ್‌ಐ ಸೇರಿದಂತೆ ಐವರು ಗಲಾಟೆ ಮಾಡಿದ್ದಾರೆ. ಬಾಗಲಕೋಟೆ ಜಿಲ್ಲೆಯಲ್ಲಿ ಪ್ರೊಬೆಷನರಿ ಪಿಎಸ್‌ಐ ಆಗಿರುವ ಅರವಿಂದ ಅಂಗಡಿ ಹಾಗೂ ಸ್ನೇಹಿತರು ಡಾಬಾ ಮಾಲೀಕ ಶ್ರೀಶೈಲ ಕಳ್ಳಿಮಠ ಅವರ ಮೇಲೆ ಹಲ್ಲೆ ಮಾಡಿದ್ದಾರೆ.
undefined
ಗಜೇಂದ್ರಗಡ ತಾಲೂಕಿನ ಮುಶಿಗೇರಿ ಗ್ರಾಮದವರಾಗಿರೋ ಅರವಿಂದ ನಿನ್ನೆ (ಸೋಮವಾರ) ರಾತ್ರಿ ಸ್ನೇಹಿತರೊಂದಿಗೆ ಡಾಬಾಕ್ಕೆ ಹೋಗಿದ್ದರು. ಮೊದಲೇ ಕುಡಿದ ಮತ್ತಿನಲ್ಲಿದ್ದ ಗುಂಪು ಏಕಾಏಕಿ ಗಲಾಟೆ ಮಾಡಿದೆ. ಗುಂಪಿನಲ್ಲಿದ್ದ ಹನಂತಪ್ಪ ತೋರಣ್ಣವರ್ ದಾಬಾ ಮಾಲೀಕ ಶ್ರೀಶೈಲ ಅವರ ತಲೆಗೆ ಹಲ್ಲೆ ಮಾಡಿದ್ದ. ನಂತರ ಪುಂಡರ ಗುಂಪು ಡಾಬಾ ಧ್ವಂಸಗೊಳಿಸಿ ಗಲಾಟೆ ಮಾಡಿದೆ. ರಾತ್ರಿ ಕುಡಿದ ಮತ್ತಿನಲ್ಲಿ ಡಾಬಾಕ್ಕೆ ಎಂಟ್ರಿಯಾದ ಟೀಮ್, ಪಿಎಸ್‌ಐ ಹಾಗೂ ಆರ್ಮಿ ಆದ್ರೆ ಏನ್ ತಿಳಿದುಕೊಂಡಿದ್ದೀಯಾ ಅಂತಾ ಗಲಾಟೆ ಮಾಡಿದ್ರಂತೆ.
2A ಮೀಸಲಾತಿ ಪಂಚಮಸಾಲಿ ಮಹಿಳಾ ಘಟಕದಿಂದ ಮತದಾನ ಬಹಿಷ್ಕಾರ!
ಅಲ್ಲದೇ ಡಾಬಾದಲ್ಲಿನ ಫ್ರಿಜ್ಡ್, ಕೌಂಟರ್ ಒಡೆದು ಹಾಕಿದ್ದಾರೆ. ಸಾಲದಕ್ಕೆ ಅಡುಗೆ ಮನೆಗೆ ನುಗ್ಗಿ ಸಿಲಿಂಡರ್‌ನಿಂದ ಬೆಂಕಿ ಹಚ್ಚೋದಕ್ಕೂ ಮುಂದಾಗಿದ್ರಂತೆ. ಆರ್ಮಿಯಲ್ಲಿ ಕೆಲಸ ಮಾಡೋ ಹನಂತಪ್ಪ ತೋರಣ್ಣವರ್ ಕೌಂಟರ್ ಬಳಿ ಬಂದು ಹಲ್ಲೆ ಮಾಡಿದ್ದ. ಘಟನೆಯ ದೃಶ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದೆ. ಗಾಯಗೊಂಡಿದ್ದ ಶ್ರೀಶೈಲ ಕಳ್ಳಿಮಠ ಅವರು ಆಸ್ಪತ್ರೆಗೆ ಹೋಗೋದಕ್ಕೆ ಮುಂದಾಗಿದ್ದರು. ಆದ್ರೆ ಕಾರ್ ಹತ್ತೋದಕ್ಕೆ ಮುಂದಾಗಿದ್ದ ಶ್ರೀಶೈಲನನ್ನ ತಡೆದಿದ್ದ ಪ್ರೊಬೆಷನರಿ ಪಿಎಸ್‌ಐ ಅರವಿಂದ ಚಪ್ಪಲಿಯಿಂದ ಹಲ್ಲೆ ಮಾಡಿ ದರ್ಪ ತೋರಿದ್ದಾರಂತೆ.
ಪಾರ್ಸಲ್ ವಿಚಾರಕ್ಕೆ ಗಲಾಟೆ: ರಾತ್ರಿ ಕಠಮಟ್ಟ ಕುಡಿದಿದ್ದ ಗುಂಪು ಡಾಬಾದ ಫ್ಯಾಮಿಲಿ ರೂಮ್‌ನಲ್ಲಿ ಕೂತು ಕುಡಿಯೋದಕ್ಕೆ ಅವಕಾಶ ಕೇಳಿದ್ರಂತೆ. ಫ್ಯಾಮಿಲಿ ರೂಮ್‌ನಲ್ಲಿ ಅವಕಾಶ ಇಲ್ಲ. ಹೊರಗಡೆ ಪ್ರತ್ಯೇಕ ಅವಕಾಶ ಮಾಡಿ ಕೊಡ್ತೀನಿ ಅಲ್ಲಿ ಕುಡೀಬಹುದು ಅಂತಾ ಡಾಬಾ ಮಾಲೀಕ ತಿಳಿ ಹೇಳಿದರು. ಆದರೆ ಮೊದಲೇ ಕುಡಿದ ಮತ್ತಿನಲ್ಲಿದ್ದವರು ಗಲಾಟೆ ತೆಗೆದಿದ್ರು. ನಂತರ ಪಾರ್ಸೆಲ್ ಕೊಡಿ ಹೊರಗಡೆ ಹೋಗ್ತೀವಿ ಅಂತಾ ಗುಂಪಿನಲ್ಲಿದ್ದ ಮತ್ತಿಬ್ಬರು ಅಂದಿದಾರೆ. ಪಾರ್ಸೆಲ್ ನೀಡುವ ಸಂಧರ್ಭದಲ್ಲಿ ಹನಮಂತ ಮತ್ತೆ ಕಿರಿಕ್ ತೆಗಿದಿದ್ದಾನೆ. ಅಲ್ಲದೇ ಏಕಾಏಕಿ ಡಾಬಾ ಮಾಲೀಕ ಶ್ರೀಶೈಲ ಅವರ ತಲೆಗೆ ಸೋಡಾ ಬಾಟಲಿಯಿಂದ ಹಲ್ಲೆ ಮಾಡಿದ್ದಾನೆ.
ಚಿಕನ್, ರೊಟ್ಟಿ ತಿಂದ ಮನೆಯಲ್ಲೇ 2 ಹೆಣ ಉರುಳಿಸಿದ ಆಳು, ಬೆಚ್ಚಿಬಿದ್ದ ಗ್ರಾಮ
ಕೆಲ ದಿನಗಳ ಹಿಂದೆ ಡಾಬಾ ಮಾಲೀಕ ಶ್ರೀ ಶೈಲನಿ ಅವರಿಗೆ ಫೋನ್ ಮಾಡಿದ್ದ ಪಿಎಸ್‌ಐ ಅರವಿಂದ, ಖಾಜು ಮಸಾಲಾ ಪಾರ್ಸೆಲ್ ಮಾಡೋದಕ್ಕೆ ಹೇಳಿದ್ದ. ಹೊರಗಡೆ ಇದ್ದೀನಿ, ಡಾಬಾಕ್ಕೆ ಹೋಗಿ ಪಾರ್ಸೆಲ್ ಸಿಗುತ್ತೆ ಅಂತಾ ಶ್ರೀಶೈಲ ಹೇಳಿದ್ರು. ಅರವಿಂದ ಮ್ಯಾನೇಜರ್ ನಂಬರ್ ಕೇಳಿದಾರೆ. ಮ್ಯಾನೇಜರ್ ಇಲ್ಲ. ನೀವೇ ಹೋಗಿ ಸಿಗುತ್ತೆ ಅಂತಾ ಶ್ರೀಶೈಲ ಹೇಳಿದ್ರಂತೆ. ಇದ್ರಿಂದ ಅರವಿಂದ ಕೋಪಗೊಂಡಿದ್ರು. ಆಗಿನಿಂದ ಅರವಿಂದ ಕೆಂಡ ಕಾರುತ್ತಿದ್ದರು. ಇದೇ ಕಾರಣ ಮನಸ್ಸಿನಲ್ಲಿಟ್ಟುಕೊಂಡು ಅರವಿಂದ ಆ್ಯಂಡ್ ಟೀಮ್ ಹಲ್ಲೆ ಮಾಡಿದೆ ಅಂತಾ ಶ್ರೀಶೈಲ ಆರೋಪಿಸಿದ್ದಾರೆ. ಇದೀಗ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಶ್ರೀಶೈಲ ಮನೆಗೆ ಮರಳಿದ್ದಾರೆ. ಜವಾಬ್ದಾರಿಯುತ ಅಧಿಕಾರಿ ಸ್ಥಾನದಲ್ಲಿ ಇರುವವರೆ ಹೀಗೆ ಮಾಡಿದ್ರೆ ಸಾಮಾನ್ಯರು ಏನು ಮಾಡ್ಬೇಕು. ಗಲಾಟೆ ಮಾಡಿದ ಪುಂಡರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕು ಅನ್ನೋ ಆಗ್ರಹ ಜನರಿಂದ ಕೇಳಿ ಬರ್ತಿದೆ.