ತಸ್ಲಿಮ್ ಮೌಲಾಸಾಬ ಶೆರೆವಾಡ ಬಂಧಿತ ಆರೋಪಿ| ಹಾವೇರಿ ನಗರದಲ್ಲಿ ನಡೆದಿದ್ದ ಪ್ರಕರಣ| ಸಿಸಿ ಕ್ಯಾಮರಾದಲ್ಲಿ ಅತ್ಯಾಚಾರ ನಡೆಸಿದ ದೃಶ್ಯ ಸೆರೆ| ಸಿಸಿ ಕ್ಯಾಮರಾ ದೃಶ್ಯಾವಳಿ ಪೊಲೀಸರಿಗೆ ಕೊಟ್ಟು ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದ ಮಳಿಗೆಯ ಮಾಲೀಕ|
ಹಾವೇರಿ(ಡಿ.13): ನಗರದ ಹಾನಗಲ್ಲ ರಸ್ತೆಯಲ್ಲಿನ ವ್ಯಾಪಾರಿ ಮಳಿಗೆಯೊಂದರಲ್ಲಿ ಬುದ್ಧಿಮಾಂದ್ಯ ಮಹಿಳೆಯ ಮೇಲೆ ಅತ್ಯಾಚಾರ ನಡೆಸಿ ಪರಾರಿಯಾಗಿದ್ದ ಆರೋಪಿಯನ್ನು ಪೊಲೀಸರು ಶನಿವಾರ ಬಂಧಿಸಿದ್ದಾರೆ.
ನಗರದಲ್ಲಿ ಆಟೋ ಚಾಲಕನಾಗಿದ್ದ ತಾಲೂಕಿನ ಯತ್ತಿನಹಳ್ಳಿ ಗ್ರಾಮದ ನಿವಾಸಿ ತಸ್ಲಿಮ್ ಮೌಲಾಸಾಬ ಶೆರೆವಾಡ(23) ಎಂಬುವವನೇ ಬಂಧಿತ ಆರೋಪಿ. ಡಿ. 7ರಂದು ಮಧ್ಯರಾತ್ರಿ ಆರೋಪಿಯು ವ್ಯಾಪಾರಿ ಮಳಿಗೆಯಲ್ಲಿ ಮಲಗಿದ್ದ ಬುದ್ಧಿಮಾಂದ್ಯೆಯ ಮೇಲೆ ಅತ್ಯಾಚಾರ ನಡೆಸಿ ಪರಾರಿಯಾಗಿದ್ದ. ಮಳಿಗೆಯಲ್ಲಿದ್ದ ಸಿಸಿ ಕ್ಯಾಮರಾದಲ್ಲಿ ಅತ್ಯಾಚಾರ ನಡೆಸಿದ ದೃಶ್ಯ ಸೆರೆಯಾಗಿತ್ತು. ಮಳಿಗೆಯ ಮಾಲೀಕ ಸಿಸಿ ಕ್ಯಾಮರಾ ದೃಶ್ಯಾವಳಿಯನ್ನು ಪೊಲೀಸರಿಗೆ ಕೊಟ್ಟು ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದ.
ಇದೆಂಥಾ ಕ್ರೌರ್ಯ... ಬಾಲಕಿ ಅಪಹರಿಸಿ ಅತ್ಯಾಚಾರ ಎಸಗಿದ ಅಪರಿಚಿತ
ಸಿಸಿ ಕ್ಯಾಮರಾದಲ್ಲಿನ ದೃಶ್ಯದಲ್ಲಿ ಮುಖಕ್ಕೆ ಮುಖಗವಸು ಹಾಕಿದ್ದ ಆರೋಪಿಯನ್ನು ಪತ್ತೆ ಹಚ್ಚುವಲ್ಲಿ ಸಿಪಿಐ ಟಿ. ಮಂಜಣ್ಣ ನೇತೃತ್ವದ ತಂಡವು ದೂರು ದಾಖಲಾದ ಮೂರು ದಿನಗಳಲ್ಲಿ ಬಂಧಿಸುವಲ್ಲಿ ಯಶಸ್ವಿಯಾಗಿದೆ.