ಕಲಬುರಗಿ: ಬಾಲಕಿ ಮೇಲೆ ಸ್ವಂತ ಮಾವನಿಂದ ರೇಪ್‌, ಕಾಮುಕ ಅರೆಸ್ಟ್‌

By Kannadaprabha News  |  First Published Jun 20, 2020, 2:08 PM IST

ಅತ್ಯಾಚಾರ ಆರೋಪಿ ಬಂಧನ| ಕಲಬುರಗಿ ಜಿಲ್ಲೆಯ ಶರಣಶರಸಗಿ ಗ್ರಾಮದಲ್ಲಿ ನಡೆದಿದ್ದ ಘಟನೆ| ಆರೋಪಿ ಪೀರಪ್ಪ ಶಾಂತಪ್ಪ ಪೂಜಾರಿ ಬಂಧನ| ಮನೆಯಲ್ಲಿ ಯಾರೂ ಇಲ್ಲದ ವೇಳೆ ಬಂದು ಬಾಲಕಿಗೆ ಬೆದರಿಸಿ ಅತ್ಯಾಚಾರ ಎಸಗಿ ತಲೆ ಮರೆಸಿಕೊಂಡಿದ್ದ ಕಾಮುಕ| 


ಕಲಬುರಗಿ(ಜೂ.20): ಅಪ್ರಾಪ್ತ ಬಾಲಕಿ (10) ಮೇಲೆ ಅವಳ ಸ್ವಂತ ಮಾವನೇ ಅತ್ಯಾಚಾರ ನಡೆಸಿದ ಘಟನೆ ಶರಣಶರಸಗಿ ಗ್ರಾಮದಲ್ಲಿ ನಡೆದಿದೆ. ದುಷ್ಕೃತ್ಯ ಎಸಗಿ ಪರಾರಿಯಾಗಿದ್ದ ಆರೋಪಿ ಪೀರಪ್ಪ ಶಾಂತಪ್ಪ ಪೂಜಾರಿ ಸಾ.ದುತ್ತರಗಾಂವ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. 

ಮನೆಯಲ್ಲಿ ಯಾರೂ ಇಲ್ಲದ ವೇಳೆ ಬಂದ ಆರೋಪಿಯು ಬಾಲಕಿಗೆ ಬೆದರಿಸಿ ಅತ್ಯಾಚಾರ ಎಸಗಿ ತಲೆ ಮರೆಸಿಕೊಂಡಿದ್ದನು. ಈ ಕುರಿತು ಕಲಬುರಗಿ ಮಹಿಳಾ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. 

Tap to resize

Latest Videos

ಪತಿಯ ಕಿರುಕುಳ ದೂರು ನೀಡಿದಾಕೆಯ ಮನೆಗೆ ಬಂದು ಪೇದೆಯಿಂದ ಅತ್ಯಾಚಾರ

ನಗರ ಪೊಲೀಸ್‌ ಆಯುಕ್ತ ಎನ್‌ ಸತೀಶ ಕುಮಾರ, ಉಪ ಪೊಲೀಸ್‌ ಆಯುಕ್ತ ಡಿ.ಕಿಶೋರಬಾಬು (ಬಿ) ಉಪ ವಿಭಾಗದ ಎಸಿಪಿ ಎಸ್‌.ಬಿ. ಗಿರೀಶ ಅವರ ಮಾರ್ಗದರ್ಶನದಲ್ಲಿ ಮಹಿಳಾ ಪೊಲೀಸ್‌ ಠಾಣೆಯ ಪಿಐ ಮಹಾಂತೇಶ ಪಾಟೀಲ ಮತ್ತು ಸಿಬ್ಬಂದಿಯವರು ಆರೋಪಿಯನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
 

click me!