ಮಹಿಳೆಯನ್ನು ಹತ್ಯೆಗೈದು ಬೋಟ್ ಮೂಲಕ ಸಾಗಿಸಿ ಗಂಗಾ ನದಿಗೆ ಎಸೆದ ದೃಶ್ಯವೊಂದು ಆತಂಕಕ್ಕೆ ಕಾರಣವಾಗಿದೆ. ಹಾಡಹಗಲೇ ಯಾವುದೇ ಭಯವಿಲ್ಲದೆ ಆರೋಪಿಗಳು ಈ ಕೃತ್ಯ ಎಸಗಿದ್ದಾರೆ. ಈ ವಿಡಿಯೋ ವೈರಲ್ ಬೆನ್ನಲ್ಲೇ ಯುಪಿ ಪೊಲೀಲಿಸರು ಅಲರ್ಟ್ ಆಗಿದ್ದಾರೆ.
ಲಖನೌ(ಜು.30) ಗಂಗಾ ನದಿಯಲ್ಲಿ ನಾಲ್ವರು ಬೋಟ್ ಮೂಲಕ ಸಾಗಿ ನದಿ ಮಧ್ಯೆ ಮಹಿಳೆ ಮೃತದೇಹವನ್ನು ನದಿಗೆ ತಳ್ಳಿ ಹಾಕುತ್ತಿರುವ ವಿಡಿಯೋ ಒಂದು ಇದೀಗ ಭಾರಿ ಆತಂಕಕ್ಕೆ ಕಾರಣವಾಗಿದೆ. ಹಾಡಹಗಲೇ ಈ ಘಟನೆ ನಡೆದಿದೆ. ಮಹಿಳೆ ಹತ್ಯೆ ಮಾಡಿ ಬೋಟ್ ಮೂಲಕ ಸಾಗಿಸಿ ನದಿಗೆ ಎಸೆದ ಈ ದೃಶ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ ಉತ್ತರ ಪ್ರದೇಶ ಪೊಲೀಸರು ಅಲರ್ಟ್ ಆಗಿದ್ದಾರೆ. ಈ ವಿಡಿಯೋ ಆಧರಿಸಿ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.
ಈ ವಿಡಿಯೋದಲ್ಲಿ ನಾಲ್ವರು ಆರೋಪಿಗಳು ಬೋಟ್ ಮೂಲಕ ಸಾಗುವ ದೃಶ್ಯವಿದೆ. ಬೋಟ್ ಮುಂಭಾಗದಲ್ಲಿ ಮಹಿಳೆ ಮೃತದೇಹವನ್ನು ಇಡಲಾಗಿದೆ. ಓರ್ವ ಆರೋಪಿ ಮೃತದೇಹಕ್ಕೆ ಮುಚ್ಚಿರುವ ಬಚ್ಚೆಯನ್ನು ಸರಿ ಮಾಡುತ್ತಿದ್ದಾನೆ. ವೇಗವಾಗಿ ಸಾಗುತ್ತಿರುವ ಕಾರಣ ಗಾಳಿಗೆ ಬಟ್ಟೆ ಹಾರುತ್ತಿದೆ. ಇದನ್ನು ಸರಿ ಮಾಡಿದ ಓರ್ವನಿಗೆ ಮತ್ತಿಬ್ಬರು ಸಾಥ್ ನೀಡಿದ್ದಾರೆ. ಬೋಟ್ ತುಂಬಿ ಹರಿಯುತ್ತಿರುವ ಗಂಗಾ ನದಿಯ ಮಧ್ಯ ಭಾಗಕ್ಕೆ ತೆರಳುತ್ತಿದ್ದಂತೆ ನಾಲ್ವರು ಮಹಿಳೆ ಮೃತದೇಹವನ್ನು ನದಿಗೆ ತಳ್ಳಿ ಹಾಕಿದ್ದಾರೆ.
undefined
20 ದಿನದಲ್ಲಿ ಮರಳಿಸುವೆ ನನ್ನ ಹುಡುಕಬೇಡಿ, ಮನೆ ದೋಚಿ ಮಾಲೀಕನಿಗೆ ವ್ಯಾಟ್ಸಾಪ್ ಸಂದೇಶ!
ಮೃತದೇಹ ತಳ್ಳಿ ಹಾಕಿದ ಬಳಿ ಬೋಟ್ ಯೂಟರ್ನ್ ತೆಗೆದುಕೊಂಡಿದ್ದಾರೆ. ಮೃತದೇಹ ನೀರಿನ ಆಳಕ್ಕೆ ಇಳಿಯುತ್ತಿದ್ದಂತೆ ಆರೋಪಿಗಳು ಮರಳಿದ್ದಾರೆ. ಇವೆಲ್ಲವೂ ಹಾಡ ಹಗಲೇ ನಡೆದಿದೆ. ಈ ಘಟನೆಯನ್ನು ಬೋಟ್‌ನಲ್ಲಿದ್ದವರೇ ರೆಕಾರ್ಡ್ ಮಾಡಿದ್ದಾರೆ. ಆದರೆ ಅಚಾನಕ್ಕಾಗಿ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡಿದೆ.
Hello इसे देखिए –
कुछ लोग ब्रजघाट गंगा में एक लड़की की लाश फेंक रहे हैं। मेरे सोर्स के अनुसार, ऑनर किलिंग हुई और लाश को ठिकाने लगा दिया। pic.twitter.com/BnRCElEmjB
ಈ ಆರೋಪಿಗಳ ಹಾವ ಭಾವ ನೋಡಿದರೆ ಇವರು ಈ ರೀತಿ ಹಲವು ಕೃತ್ಯಗಳನ್ನು ಎಸೆದಿರುವ ಸಾಧ್ಯತೆ ಇದೆ. ಹೀಗಾಗಿ ಸೂಕ್ತ ತನಿಖೆ ನಡೆಸಿ ಆರೋಪಿಗಳ ಪತ್ತೆ ಹಚ್ಚಬೇಕು. ಈ ರೀತಿ ಅದೆಷ್ಟು ಹೆಣ್ಣುಮಕ್ಕಳು ಗಂಗಾ ನದಿ ಸೇರಿದ್ದಾರೆ ಏನೋ? ಮತ್ತೊಂದು ಘಟನೆ ನಡೆಯದಂತೆ ಪೊಲೀಸರು ಅಲರ್ಟ್ ಆಗಬೇಕು ಎಂದು ಹಲವರು ಸೋಶಿಯಲ್ ಮೀಡಿಯಾದಲ್ಲಿ ಆಗ್ರಹಿಸಿದ್ದಾರೆ. ಇದೇ ವೇಳೆ ಘಟನೆ ಖಂಡಿಸಿ ಪ್ರಕರಣ ಪತ್ತೆ ಹಚ್ಚುವಂತೆ ಹಲವರು ಒತ್ತಾಯಿಸಿದ್ದಾರೆ.
ಒಮ್ಮೆ ರಮೇಶ ಮತ್ತೊಮ್ಮೆ ಸುರೇಶ, 25 ಬಾರಿ ಮದುವೆಯಾಗಿ ಕಣ್ಣಾಮುಚ್ಚಾಲೆ ಆಟವಾಡಿದ ವಂಚಕ ಸೆರೆ!
ಉತ್ತರ ಪ್ರದೇಶದ ಹಪುರ್ ಬಳಿ ಈ ಘಟನೆ ನಡೆದಿದೆ ಎಂದು ಪೊಲೀಸರು ಅಂದಾಜಿಸಿದ್ದಾರೆ. ಈ ವಿಡಿಯೋದಲ್ಲಿರುವ ನಾಲ್ವರ ಗುರತು ಪತ್ತೆಗೆ ಪೊಲೀಸರು ಶ್ರಮಿಸುತ್ತಿದ್ದಾರೆ. ಬೇರೆಡೆ ಮಹಿಳೆ ಹತ್ಯೆ ಮಾಡಿ ಗಂಗಾ ನದಿಗೆ ಎಸೆದಿರುವ ಸಾಧ್ಯತೆ ಇದೆ. ಇದು ಮರ್ಯಾದಾ ಹತ್ಯೆಯಾಗಿರುವ ಸಾಧ್ಯತೆಯನ್ನು ಪೊಲೀಸರು ಹೇಳಿದ್ದಾರೆ.