Breaking: ಪವಿತ್ರಾ ಗೌಡ ಸೇರಿ 10 ಮಂದಿ ಜೈಲಿಗೆ, ದರ್ಶನ್ ಮೂರನೇ ಬಾರಿ ಪೊಲೀಸ್ ಕಸ್ಟಡಿಗೆ!

By Suvarna News  |  First Published Jun 20, 2024, 4:39 PM IST

ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಮತ್ತು ಗ್ಯಾಂಗ್‌  ಅನ್ನು ಕೋರ್ಟ್ ಗೆ ಹಾಜರುಪಡಿಲಾಯ್ತು. ಈ ವೇಳೆ ಪವಿತ್ರಾ ಗೌಡ ಸೇರಿ 10 ಮಂದಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ದರ್ಶನ್ ಮತ್ತೆ ಪೊಲೀಸ್‌ ಕಸ್ಟಡಿಗೆ.


ಬೆಂಗಳೂರು (ಜೂ.20): ಬೆಂಗಳೂರಿನಲ್ಲಿ ಚಿತ್ರದುರ್ಗದ ರೇಣುಕಾಸ್ವಾಮಿ (RenukaSwamy) ಕೊಲೆ ಪ್ರಕರಣ ಆರೋಪದ ಹಿನ್ನೆಲೆ ನಟ ದರ್ಶನ್ (Actor Darshan), ಆತ್ಮೀಯ ಗೆಳತಿ ಪವಿತ್ರಾ ಗೌಡ  (Pavithra Gowda) ಸೇರಿ ಒಟ್ಟು 17 ಮಂದಿಯನ್ನು 24ನೇ ಎಸಿಎಂಎಂ  ಕೋರ್ಟ್ ಗೆ ಹಾಜರುಪಡಿಸಲಾಯಿತು. ಈ ವೇಳೆ ಕೋರ್ಟ್ ಪವಿತ್ರಾ ಗೌಡ ಸೇರಿ 10 ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ  ಕಳುಹಿಸಲಾಗಿದ್ದು, ಪರಪ್ಪನ ಅಗ್ರಹಾರ ಸೇರೋದು ಫಿಕ್ಸ್ ಆಗಿದೆ. ಜುಲೈ 40ರವರೆಗೆ ಜೈಲಿನಲ್ಲಿರಲಿದ್ದಾರೆ.

ಉಳಿದಂತೆ ದರ್ಶನ್ (A2) ಸೇರಿ ರಾಜು (A9) ,ವಿನಯ್ (A10) ಹಾಗೂ ಪ್ರದೋಶ್ (A14) ಪೊಲೀಸ್ ವಶಕ್ಕೆ ನೀಡಲಾಗಿದೆ.  ಹೆಚ್ಚಿನ ವಿಚಾರಣೆ ಹಿನ್ನೆಲೆಯಲ್ಲಿ 2 ದಿನಗಳ ಕಾಲ ಪೊಲೀಸ್‌ ಕಸ್ಟಡಿಗೆ ನೀಡಲಾಗಿದೆ. ಅಂದರೆ ಶನಿವಾರದವರೆಗೆ ಪೊಲೀಸ್‌ ಕಸ್ಟಡಿಯಲ್ಲಿರಲಿದ್ದಾರೆ.

Tap to resize

Latest Videos

ಇನ್ನು ಮಿಕ್ಕವರಲ್ಲಿ ರವಿಶಂಕರ್ ಹಾಗೂ ಕಾರ್ತಿಕ್ ಈಗಾಗಲೇ ಜೈಲಿನಲ್ಲಿ ಇದ್ದಾರೆ. ನಿನ್ನೆ ಕೋರ್ಟ್ ಗೆ ಹಾಜರು ಪಡಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ನಿಖಿಲ್ ನಾಯಕ್‌ ನನ್ನು ಕೂಡ ಜೈಲಿಗೆ ಕಳುಹಿಸಲಾಗಿದೆ.

ಎ1, ಎ3 ರಿಂದ ಎ7, ಎ11 ರಿಂದ ಎ13, ಎ16ನೇ ಆರೋಪಿಗಳಿಗೆ  ನ್ಯಾಯಾಂಗ ಬಂಧನವಾಗಿದೆ. ಪವಿತ್ರಾಗೌಡ,  ಪವನ್, ರಾಘವೇಂದ್ರ, ನಂದೀಶ್, ಜಗದೀಶ್, ಅನುಕುಮಾರ್, ನಾಗರಾಜ್, ಲಕ್ಷ್ಮಣ್, ದೀಪಕ್, ಕೇಶವ್ ಮೂರ್ತಿ  ಇಷ್ಟು ಜನರಿಗೆ ನ್ಯಾಯಾಂಗ ಬಂಧನವಾಗಿದ್ದು, ಪರಪ್ಪನ ಅಗ್ರಹಾರ ಸೇರಲಿದ್ದಾರೆ. 

ಆರೋಪಿಗಳ ಪಟ್ಟಿ ಇಂತಿದೆ: A1.ಪವಿತ್ರಾಗೌಡ, A2.ದರ್ಶನ್, A3.ಪವನ್ ಅಲಿಯಾಸ್ ಪುಟ್ಟಸ್ವಾಮಿ ,A4.ರಾಘವೇಂದ್ರ ,A5.ನಂದೀಶ್,A6.ಜಗದೀಶ್  ಅಲಿಯಾಸ್ ಜಗ್ಗ , A7.ಅನುಕುಮಾರ್, A8.ರವಿ , A9.ರಾಜು (ಧನರಾಜ್) , A10.ವಿನಯ್, A11.ನಾಗರಾಜು, A12.ಲಕ್ಷ್ಮಣ್, A13.ದೀಪಕ್, A14.ಪ್ರದೋಶ್, A15.ಕಾರ್ತಿಕ್, A16.ಕೇಶವ ಮೂರ್ತಿ, A17.ನಿಖಿಲ್ ನಾಯಕ್.

ಕ್ಯಾಬಿನೆಟ್‌ ಮೀಟಿಂಗ್‌ನಲ್ಲಿ ದರ್ಶನ್‌ ಪರ ಲಾಬಿ ಮಾಡಿದ ಸಂಪುಟ ಸಹೋದ್ಯೋಗಿಗಳಿಗೆ ಸಿಎಂ ಎಚ್ಚರಿಕೆ!

ದರ್ಶನ್ ಸೇರಿ ನಾಲ್ವರು ಆರೋಪಿಗಳು ಪೊಲೀಸರು ವಶಕ್ಕೆ ನೀಡುವಂತೆ ಕೇಳಿದರು. ರಿಮ್ಯಾಂಡ್‌ ಅರ್ಜಿ ಸಲ್ಲಿಸಿ ದರ್ಶನ್, ವಿನಯ್, ಪ್ರದೋಷ್, ಲಕ್ಷ್ಮಣ್ , ನಾಗರಾಜ್ ನನ್ನು ಪೊಲೀಸ್ ವಶಕ್ಕೆ ನೀಡುವಂತೆ ಮನವಿ ಮಾಡಿದರು. ಉಳಿದಂತೆ ಎ1 ಆರೋಪಿ ಪವಿತ್ರಾ ಗೌಡ ಸೇರಿ ಉಳಿದ 12 ಆರೋಪಿಗಳನ್ನ ನ್ಯಾಯಾಂಗ ಬಂಧನಕ್ಕೆ ನೀಡುವಂತೆ ಮನವಿ ಮಾಡಿದರು.

ಕೊಲೆ ಕೇಸಿನಲ್ಲಿ ಪೊಲೀಸರ ಪರವಾಗಿ ಚಾಣಾಕ್ಷ ವಕೀಲ ಪಿ. ಪ್ರಸನ್ನ ಕುಮಾರ್ ಅವರು ವಾದಿಸಿದರು.  ದರ್ಶನ್ ಪರ ವಕೀಲ ಅನಿಲ್ ಬಾಬು ಮತ್ತು  ಪವಿತ್ರಾ ಗೌಡ ಪರ ವಕೀಲ ನಾರಾಯಣ ಸ್ವಾಮಿ ವಾದಿಸಿದರು.

ದರ್ಶನ್ ಮರ್ಯಾದೆ ಉಳಿಸಲು ಮುಂದಾದ ಪತ್ನಿ, ಮಾಧ್ಯಮಗಳಿಗೆ ತಡೆಯಾಜ್ಞೆ ತಂದ ವಿಜಯಲಕ್ಷ್ಮಿ!

ಕೊಲೆ ಹಿನ್ನೆಲೆ: ಜೂನ್ 8 ರಂದು ಚಿತ್ರದುರ್ಗದಿಂದ ರೇಣುಕಾಸ್ವಾಮಿಯನ್ನು ಕಿಡ್ನಾಪ್ ಮಾಡಿ ಬೆಂಗಳೂರಿಗೆ ಕರೆತಂದು ಪಟ್ಟಣಗೆರೆ ಶೆಡ್‌ನಲ್ಲಿಟ್ಟು ಚಿತ್ರಹಿಂಸೆ ನೀಡಿ ವಿಕೃತವಾಗಿ ಕೊಲೆ ಮಾಡಿ ಸುಮನಹಳ್ಳಿ ಬಳಿ ಬಿಸಾಡಲಾಗಿತ್ತು. ಜೂನ್ 9ರಂದು ಮೃತದೇಹ ಪತ್ತೆಯಾಗಿತ್ತು. ಜೂನ್ 11 ರಂದು ದರ್ಶನ್‌ ರನ್ನು ಮೈಸೂರಿನಲ್ಲಿ ಬಂಧಿಸಲಾಗಿತ್ತು.

ರೇಣುಕಾಸ್ವಾಮಿ ಮೃತದೇಹದ ಮರಣೋತ್ತರ ಪರೀಕ್ಷೆ ವರದಿಯಲ್ಲಿ ಉಲ್ಲೇಖಿಸಲಾದಂತೆ ಕೈಯಲ್ಲಿ ಕುಯ್ದ ಗುರುತು, ಬೆನ್ನಿನ ಮೇಲೆ ಬಾಸುಂಡೆ ಬರೆಗಳು, ತಲೆಗೆ ಪೆಟ್ಟು, ವೃಷಣದ ಮೇಲೆ ಗಾಯ, ಮರ್ಮಾಂಗದ ಬಳಿ ರಕ್ತಸ್ರಾವ, ಕಾಲುಗಳಲ್ಲಿ ಗಾಯ, ಕುತ್ತಿಗೆ ಭಾಗದಲ್ಲಿ ಗಾಯ, ಎದೆ ಮೇಲೆ ಕಚ್ಚಿದ ಗಾಯ (ನಾಯಿ ಕಚ್ಚಿರುವ ಸಾಧ್ಯತೆ) ಉಲ್ಲೇಖಿಸಲಾಗಿದೆ.

ರೇಣುಕಾಸ್ವಾಮಿ ಕೊಲೆಯ ಕೊನೆ ಹಂತ: ರೇಣುಕಾಸ್ವಾಮಿ ಮೇಲೆ ಕೊನೆಯ ಹಂತದ ಹಲ್ಲೆಯಲ್ಲೇ ದರ್ಶನ್‌ ನೇರವಾಗಿ ಪಾಲ್ಗೊಂಡಿದ್ದು. ತಮ್ಮ ಪ್ರಿಯತಮೆಗೆ ಮರ್ಮಾಂಗದ ಪೋಟೋ ಕಳುಹಿಸಿದ್ದಕ್ಕೆ ಕ್ರುದ್ಧರಾಗಿದ್ದ ದರ್ಶನ್‌, ರೇಣುಕಾಸ್ವಾಮಿ ಕಂಡಕೂಡಲೇ ರೋಷಾವೇಷ ತೋರಿಸಿದ್ದಾರೆ.

ಈ ಹಂತದಲ್ಲಿ ಆತನ ವೃಷಣ ಹಾಗೂ ಎದೆಯನ್ನು ತುಳಿದು ಹಿಂಸಿಸಿದ್ದಾರೆ. ದರ್ಶನ್ ಹಲ್ಲೆಯಿಂದ ಪ್ರಚೋದನೆಗೊಳಗಾಗಿರುವ ಅವರ ಸಹಚರರು, ರೇಣುಕಾಸ್ವಾಮಿಯನ್ನು ಹಣ್ಣುಗಾಯಿ ನೀರುಗಾಯಿ ಮಾಡಿದ್ದಾರೆ. ಆತನನ್ನು ಹಿಡಿದು ಅಲ್ಲೇ ನಿಂತಿದ್ದ ಲಾರಿಗೆ ಗುದ್ದಿಸಿದ್ದಾರೆ. ಆಗ ತಲೆಗೆ ಗಂಭೀರ ಪೆಟ್ಟಾಗಿ ತೀವ್ರ ರಕ್ತಸ್ರಾವವಾಗಿ ಆತ ಪ್ರಜ್ಞೆ ತಪ್ಪಿ, ರಕ್ತ ಸೋರಿ ಮೃತಪಟ್ಟಿದ್ದಾರೆ.

click me!