* ಅಕ್ರಮ ಸಂಬಂಧ ಪ್ರಶ್ನಿಸಿದಕ್ಕೆ ಪತ್ನಿ ಕೊಲೆ ಆರೋಪ
* ನೀರಿನ ಸಂಪ್ ಗೆ ಮುಳುಗಿಸಿ ಸಿಮ್ರಾನ್ (22) ಕೊಲೆ
* ಚಿಕ್ಕಮಗಳೂರು ನಗರದ ಪೆನ್ಷನ್ ಮೊಹಲ್ಲಾದಲ್ಲಿ ಘಟನೆ
* ಸಿಮ್ರಾನ್ ಪತಿ ಫೈರೂಜ್ ವಿರುದ್ಧ ಕೊಲೆ ಮಾಡಿರೋ ಆರೋಪ
ಚಿಕ್ಕಮಗಳೂರು(ಜೂ. 30) ಅಕ್ರಮ ಸಂಬಂಧ ಪ್ರಶ್ನಿಸಿದ ಪತ್ನಿಯನ್ನು ಗಂಡನೇ ಕೊಲೆ ಮಾಡಿದ ಆರೋಪ ಕೇಳಿ ಬಂದಿದೆ. ನೀರಿನ ಸಂಪ್ ನಲ್ಲಿ ಮುಳುಗಿಸಿ ಸಿಮ್ರಾನ್ (22) ಮಹಿಳೆಯನ್ನು ಹತ್ಯೆ ಮಾಡಲಾಗಿದೆ.
ಚಿಕ್ಕಮಗಳೂರು ನಗರದ ಪೆನ್ಷನ್ ಮೊಹಲ್ಲಾದಲ್ಲಿ ಘಟನೆ ನಡೆದಿದೆ. ಸಿಮ್ರಾನ್ ಪತಿ ಫೈರೂಜ್ ವಿರುದ್ಧ ಕೊಲೆ ಮಾಡಿರೋ ಆರೋಪ ಕೇಳಿಬಂದಿದೆ. ಮೂರು ತಿಂಗಳ ಹಿಂದೆಯಷ್ಟೇ ಸಿಮ್ರಾನ್-ಫೈರೋಜ್ ವಿವಾಹ ನಡೆದಿತ್ತು.
ಹಾಸನ; ಒಂದೇ ತಿಂಗಳಿನಲ್ಲಿ ಅಕ್ಕ-ತಂಗಿ ಆತ್ಮಹತ್ಯೆ, ವರದಕ್ಷಿಣೆ ಕಿರುಕುಳ?
ಸಿಮ್ರಾನ್ ಪತಿ ಫೈರೋಜ್, ಅತ್ತೆ, ಮಾವರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಜಿಲ್ಲಾಸ್ಪತ್ರೆ ಬಳಿ ಮಹಿಳೆಯ ಸಂಬಂಧಿಕರು ಆಕ್ರೋಶ ಹೊರಹಾಕಿದ್ದು ಆರೋಪಿಗಳಿಗೆ ಶಿಕ್ಷೆಯಾಗಬೇಕು ಎಂದು ಒತ್ತಾಯಿಸಿದ್ದಾರೆ.