Woman Murder: ಕಿಟಕಿಯಲ್ಲಿ ಇಣುಕಿದ ಕಿರಾತಕರು, ಪ್ರಶ್ನೆ ಮಾಡಿದ್ದಕ್ಕೆ 3 ಮಕ್ಕಳ ತಾಯಿ ಕೊಂದೇ ಬಿಟ್ಟರು!

By Suvarna News  |  First Published Jan 5, 2022, 1:18 AM IST

* ಇಣುಕಿ ನೋಡಿದ್ದನ್ನು ಪ್ರಶ್ನೆ ಮಾಡಿದ್ದಕ್ಕೆ ಹಲ್ಲೆ 
* ಗಂಡ ಮನೆಯಲ್ಲಿ ಇಲ್ಲದ ವೇಳೆ ಕಿರಾತಕರ ಕೃತ್ಯ
* ಮೂವರು ಮಕ್ಕಳ ತಾಯಿಯನ್ನು ಬಡಿದು ಕೊಂದರು


ರಾಜ್‌ಕೋಟ್ (ಜ. 05)ಕ್ಷುಲಕ ಕಾರಣಕ್ಕೆ ಕೊಲೆ (Murder) ಪ್ರಕರಣಗಳು ವರದಿಯಾಗುತ್ತಿರುವುದು ಹೊಸದೇನೂ ಅಲ್ಲ. ಅದೇ ಸಾಲಿಗೆ ಇನ್ನೊಂದು ಸೇರ್ಪಡೆ.  ಗುಜರಾತ್‌ನ (Gujarat) ರಾಜ್‌ಕೋಟ್‌ನ ಶಾಪರ್ ವೆರಾವಲ್ ಪ್ರದೇಶದಲ್ಲಿ ಭಾನುವಾರ ರಾತ್ರಿ ಇಬ್ಬರು ವ್ಯಕ್ತಿಗಳು 30 ವರ್ಷದ ಮಹಿಳೆಯನ್ನು(Woman) ಮನೆಯಿಂದ ಹೊರಗೆ ಎಳೆದು ತಂದು ಮನಸಿಗೆ ಬಂದಂತೆ ಥಳಿದಿದ್ದಾರೆ.  ಪರಿಣಾಮ ಮಹಿಳೆ ಸಾವನ್ನಪ್ಪಿದ್ದಾರೆ. ಮೃತ ಮಹಿಳೆಯನ್ನು ಶಬ್ನಮ್ ಚೌಹಾಣ್ ಎಂದು ಗುರುತಿಸಲಾಗಿದೆ.

ನೆರೆ ಮನೆಯವರೇ ಇಂಥ ಕೃತ್ಯ ಮಾಡಿದ್ದಾರೆ.  ಮಹಿಳೆಗೆ ಮೂವರು ಮಕ್ಕಳಿದ್ದಾರೆ. ಬಿಹಾರ (Bihar)ಮೂಲದ ಮಹಿಳೆ  ಗಂಡ (Husband) ಮತ್ತು ಮಕ್ಕಳೊಂದಿಗೆ (Children)ಚಿಕ್ಕ ಕೋಣೆಯಲ್ಲಿ ವಾಸವಿದ್ದಳು. ಮೂವರು ಮಕ್ಕಳು ಐದು ವರ್ಷಕ್ಕಿಂತ ಸಣ್ಣವರು. ಸೋನು ಮತ್ತು ಆತನ ಸಹೋದರ ಶಂಭು ಉತ್ತರ ಪ್ರದೇಶದವರಾಗಿದ್ದು ಪಕ್ಕದಲ್ಲಿ ವಾಸವಿದ್ದರು.

Tap to resize

Latest Videos

Sexual Harassment : ಮದುವೆಗೆ ಅಡ್ಡಿ ಎಂದು ಮಗುವಿನ ಮೇಲೆ ಎರಗಿದ ಅಜ್ಜಿಯ ಬಾಯ್ ಫ್ರೆಂಡ್!

ಭಾನುವಾರ ಸಂಜೆ  ಸೋನು ಶಬನಮ್ ಗೆ ಕಿರುಕುಳ ನೀಡಲು ಆರಂಭಿಸಿದ್ದಾನೆ. ಮಹಿಳೆಯ ಗಂಡ ಕೆಲಸದ ಮೇಲೆ ಹೊರಗಡೆ ಹೋಗಿದ್ದರು.  ಕಿಟಕಿಯಿಂದ ಇಣುಕಿ ನೋಡಿದ್ದು ಅಲ್ಲದೇ ಕೀಟಲೆ ಮಾಡಲು ಆರಂಭಿಸಿದ್ದಾನೆ. ಮಹಿಳೆ ಇದನ್ನು ಪ್ರಶ್ನೆ ಮಾಡಿದ್ದಕ್ಕೆ ಆಕೆಯನ್ನು ಹೊರಗೆ ಎಳೆದು ತಂದು ಮನಸಿಗೆ ಬಂದ ಹಾಗೆ ಹಲ್ಲೆ ಮಾಡಲಾಗಿದೆ.

ಕೂದಲು ಹಿಡಿದು ಎಳೆದು ತಂದ ವಿಡಿಯೋ ಸಹ ವೈರಲ್ ಆಗಿದೆ. ಗಂಡ ಸಂತೋಷ್ ಬಂದು ನೋಡಿದಾಗ ಪತ್ನಿ ರಕ್ತದ ಮಡುವಿನಲ್ಲಿ ಬಿದ್ದಿದ್ದರು.  ಆಸ್ಪತ್ರೆಗೆ ಕರೆದುಕೊಂಡು  ಹೋಗುವ ಯತ್ನ ಮಾಡಲಾಯಿತು. ಆದರೆ ಆಸ್ಪತ್ರೆ ತಲುಪುವ ವೇಳೆಗೆ ಮಹಿಳೆ ಮೃತಪಟ್ಟಿದ್ದರು.

ಕೆಲಸಕ್ಕಿದ್ದ ವೃದ್ಧನ ಕೊಲೆ:  ಅಪ್ರಾಪ್ತ ಮಗಳಿಗೆ (Girl) ಕಿರುಕುಳ (Sexual harassment) ನೀಡುತ್ತಿದ್ದ ಎಂಬ ಶಂಕೆ ಮೇಲೆ ದಂಪತಿ (Couple)ಮನೆ ಕೆಲಸಕ್ಕೆ ಇದ್ದ  70 ವರ್ಷದ  ವ್ಯಕ್ತಿಯನ್ನು ಹತ್ಯೆ (Murder)ಮಾಡಿದದ್ದಾರೆ. ಬರ್ಬರವಾಗಿ ಕೊಂದು ಹಾಕಿದ್ದರು.
 
ಹತ್ಯೆ ಮಾಡಿ ಶವವವನ್ನು ಮಂಖುರ್ದ್‌ ರೈಲ್ವೆ (Indian Railways) ನಿಲ್ದಾಣದ ಬಳಿ ಹಾಕಿದ್ದಾರೆ.  ಕೊಲೆಯಾಗುವುದಕ್ಕೆ ಎಂಟು ದಿನಗಳ ಮುಂಚೆ ವೃದ್ಧ ಮನೆಕೆಲಸಕ್ಕೆ ಇವರ ಬಳಿ ಸೇರಿಕೊಂಡಿದ್ದ. ಪೊಲೀಸರು ಹೇಳುವಂತೆ ಕೊಲೆಯಾದ ವ್ಯಕ್ತಿ ಮತ್ತು ಕೊಲೆ ಆರೋಪ ಹೊತ್ತಿರುವ ದಂಪತಿ  ಬಿಹಾರ ಮೂಲದವರಾಗಿದ್ದು, ಪರಸ್ಪರ ಮೊದಲಿನಿಂದ ಪರಿಚಯಸ್ಥರು.

ಏನಾಯಿತು?  ರಾತ್ರಿ 10 ಗಂಟೆ ಸುಮಾರಿಗೆ ದಂಪತಿ ಮಗಳು ಮಲಗಿದ್ದಳು. ಕೆಲಸಕ್ಕೆ ಸೇರಿಕೊಂಡಿದ್ದ ವೃದ್ಧ ಆಕೆಯನ್ನು   ಅನುಚಿತವಾಗಿ ಸ್ಪರ್ಶಿಸಿದ್ದಾನೆ ಎಂಬ ಕಾರಣವೇ ಕೊಲೆಗೆ ಮೂಲ.  ಮಗಳು ಕೂಗಿಕೊಂಡಾಗ ಅಲ್ಲಿಗೆ ಬಂದ ದಂಪತಿ  ಏಕಾಏಕಿ ಬೆಲ್ಟ ಮತ್ತು ಬಿದಿರಿನ ಕೋಲಿನಿಂದ ಹಲ್ಲೆ ಮಾಡಿದ್ದಾರೆ. ದಂಪತಿಯ ಏಟಿಗೆ ವೃದ್ಧ ಸಾವನ್ನಪ್ಪಿದ್ದಾನೆ.

ಸತ್ತವನ ಗುರುತು ಪತ್ತೆಯಾಗಿದ ನಂತರ  ತನಿಖೆ ಆರೋಪಿಗಳ ಪತ್ತೆಗೆ ಬಲೆ  ಬೀಸಲಾಗಿದೆ.  ಕೊಲೆಗಾರರು ಪಾಟ್ನಾಗೆ ಎಸ್ಕೇಪ್ ಆಗಲು ಯತ್ನಿಸುತ್ತಿದ್ದಾರೆ ಎಂಬ ಮಾಹಿತಿ ಸಿಕ್ಕಿದ ತಕ್ಷಣ ಪೊಲೀಸರು ಅಲರ್ಟ್ ಆಗಿದ್ದು  ದಂಪತಿಯನ್ನು ಅರೆಸ್ಟ್ ಮಾಡಿದ್ದಾರೆ.

ಬಾಲಕಿಯರ ಮೇಲೆ ದೌರ್ಜನ್ಯ: ಪ್ರವಾಸಕ್ಕೆಂದು ಬಂದಿದ್ದ ಬಾಲಕಿಯರ ಮೇಲೆ ದೌರ್ಜ್ಯನ್ಯ ಎಸಗಿದ ನಕಲಿ ಪೊಲೀಸ್ ಅಧಿಕಾರಿಯನ್ನು ಬಂಧಿಸಲಾಗಿತ್ತು. ಆರೋಪಿ  ರಾಂಬಾಬು ಮತ್ತೆ ಮತ್ತೆ ಇಂಥದ್ದೇ ಪ್ರಕರಣದಲ್ಲಿ  ಭಾಗಿಯಾಗುತ್ತಿದ್ದ.   ಸರ್ಕಾರಿ ವಸತಿ ಕಾಲೇಜಿನ ವಿದ್ಯಾರ್ಥಿನಿಯರ ಮೇಲೆ ಕ್ರೌರ್ಯ ಮೆರೆದಿದ್ದ.

ಪೊಲೀಸರು ಹೇಳುವಂತೆ ಇಬ್ಬರು ಬಾಲಕಿಯರು ತಮ್ಮ ಗೆಳೆಯರೊಂದಿಗೆ ಸಮಯ ಕಳೆಯಲು ಹತ್ತಿರದ ಹಳ್ಳಿಗೆ ಹೋಗಿದ್ದರು. ರವಡಾ ಗ್ರಾಮದ ನದಿ ಪ್ರದೇಶಕ್ಕೆ ತೆರಳಿದ್ದರು. ಇದನ್ನು ಆರೋಪಿ ರಾಂಬಾಬು ಗಮನಿಸಿದ್ದಾನೆ.   ಅಲ್ಲಿಗೆ ತೆರಳಿ ಹುಡುಗ ಮತ್ತು ಹುಡುಗಿಯರ ಪೋಟೋ ತೆಗೆದುಕೊಂಡಿದ್ದು ಅವರನ್ನು ಬೆದರಿಸಲು ಆರಂಭಿಸಿದ್ದಾನೆ. ಈ ಪೋಟೋಗಳನ್ನು ನಿಮ್ಮ ಶಿಕ್ಷಕರು ಮತ್ತು ಪಾಲಕರಿಗೆ ತೋರಿಸುತ್ತೇನೆ ಎಂದು ಬೆದರಿಸಿದ್ದ. 

 

click me!