ಕೊಡಗು ವಿಎಚ್‌ಪಿ ಜಿಲ್ಲಾಧ್ಯಕ್ಷನ ಹತ್ಯೆಗೆ ಯತ್ನ: ಮಿಸ್ಸಾಗಿ ಪಕ್ಕದ ಸೀಟಿಗೆ ಬಿದ್ದ ಬುಲೆಟ್ !

By Ravi Janekal  |  First Published Apr 13, 2023, 12:54 PM IST

ವಿಶ್ವ ಹಿಂದೂ ಪರಿಷತ್ತಿನ ಬೈಟೆಕ್ ಮುಗಿಸಿ ವಾಪಸ್ಸಾಗುತ್ತಿದ್ದ ವೇಳೆ ವಿಎಚ್‌ಪಿ ಕೊಡಗು ಜಿಲ್ಲಾಧ್ಯಕ್ಷ ಹಾಗೂ ವಕೀಲ ಕೃಷ್ಣ ಮೂರ್ತಿ ಅವರ ಮೇಲೆ ಶೂಟ್ ಮಾಡಿ ಹತ್ಯೆ ಮಾಡುವ ಯತ್ನ ನಡೆಸಲಾಗಿದೆ. 


ರದಿ: ರವಿ.ಎಸ್ ಹಳ್ಳಿ ಏಷ್ಯಾನೆಟ್ ಸುವರ್ಣ 

ಕೊಡಗು (ಏ.13) : ವಿಶ್ವ ಹಿಂದೂ ಪರಿಷತ್ತಿನ ಬೈಟೆಕ್ ಮುಗಿಸಿ ವಾಪಸ್ಸಾಗುತ್ತಿದ್ದ ವೇಳೆ ವಿಎಚ್‌ಪಿ ಕೊಡಗು ಜಿಲ್ಲಾಧ್ಯಕ್ಷ ಹಾಗೂ ವಕೀಲ ಕೃಷ್ಣ ಮೂರ್ತಿ ಅವರ ಮೇಲೆ ಶೂಟ್ ಮಾಡಿ ಹತ್ಯೆ ಮಾಡುವ ಯತ್ನ ನಡೆಸಲಾಗಿದೆ. 

Latest Videos

undefined

ನಿನ್ನೆ ತಡರಾತ್ರಿ ಕುಶಾಲನಗರ(Kushalanagar)ದಲ್ಲಿ ವಿಎಚ್‌ಪಿ(VHP)ಯ ಬೈಟೆಕ್ ಮುಗಿಸಿ ಚೆಟ್ಟಳ್ಳಿ ಮಾರ್ಗವಾಗಿ ಮಡಿಕೇರಿ(Madikeri)ಗೆ ವಾಪಸ್ಸಾಗುತ್ತಿದ್ದ ವೇಳೆ ಅಭ್ಯತ್ ಮಂಗಲದ ಸಮೀಪದ ಕೃಷ್ಣ ಮೂರ್ತಿ(VHP District president Krishnamurthy) ಅವರು ಬರುತ್ತಿದ್ದ ಕಾರಿನ ಮೇಲೆ ಶೂಟ್ ಮಾಡಲಾಗಿದೆ. ಕಾರು ಚಲಾಯಿಸಿಕೊಂಡು ಒಬ್ಬರೇ ಬರುತ್ತಿದ್ದ ಕೃಷ್ಣ ಮೂರ್ತಿ ಅವರ ಕಾರಿಗೆ ಏನೋ ಬಡಿದ ಶಬ್ದ ಕೇಳಿಸಿದೆ. ಹೀಗಾಗಿ ಅವರು ಕಾರಿನೊಳಗಿನ ಲೈಟ್ ಹಾಕಿ ನೋಡಿದಾಗ ಕಾರು ಡೋರಿನ ಗ್ಲಾಸ್ ಪುಡಿ ಪುಡಿಯಾಗಿದ್ದು, ಕಿಟಕಿ ಮೂಲಕ ಹಾದ ಬುಲೆಟ್ ಕೃಷ್ಣಮೂರ್ತಿ ಅವರು ಕುಳಿತಿದ್ದ ಪಕ್ಕದ ಸೀಟನ್ನು ಸೀಳಿದೆ. 

ಕೊಡಗು: ನಕಲಿ ಮದ್ಯ ಸೇವಿಸಿ ಐವರ ಸಾವು

ತಕ್ಷಣವೇ ಎಚ್ಚೆತ್ತುಕೊಂಡ ಕೃಷ್ಣಮೂರ್ತಿ ಅವರು ಕಾರನ್ನು ವೇಗವಾಗಿ ಚಲಾಯಿಸಿಕೊಂಡು ಮಡಿಕೇರಿ ಪೊಲೀಸ್ ಠಾಣೆ(Madikeri police stateion)ಗೆ ಆಗಮಿಸಿ ಮಡಿಕೇರಿ ಗ್ರಾಮಾಂತರ ಪೊಲೀಸರಿಗೆ ದೂರು ನೀಡಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಎಸ್.ಪಿ ರಾಮರಾಜನ್ ಮತ್ತು ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸದ್ಯ ಕೃಷ್ಣಮೂರ್ತಿ ಅವರ ಕಾರು ಮಡಿಕೇರಿ ಗ್ರಾಮಾಂತರ ಪೊಲೀಸರ ಸುಪರ್ದಿಯಲ್ಲಿ ಇದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ. 

ಈ ಕುರಿತು ಪ್ರತಿಕ್ರಿಯಿಸಿರುವ ಕೃಷ್ಣಮೂರ್ತಿಯವರು, ನನ್ನ ಕಿರಿಯ ಸಹೋದ್ಯೋಗಿ ಕಂಠಿಕಾರ್ಯಪ್ಪ ಅವರನ್ನು ಕುಶಾಲನಗರದಿಂದ ಚಟ್ಟಳ್ಳಿಗೆ ಬಿಟ್ಟು ಬರುತ್ತಿರುವ ಸಂದರ್ಭ ಈ ಘಟನೆ ನಡೆದಿದೆ. ಘಟನೆ ನಡೆಯುತ್ತಿದ್ದಂತೆ ಎಚ್ಚೆತ್ತುಕೊಂಡು ವಿಎಚ್‌ಪಿ ಸ್ನೇಹಿತರಿಗೆ ಮಾಹಿತಿ ನೀಡಿ ಕೂಡಲೇ ಠಾಣೆಗೆ ದೂರು ನೀಡಿದ್ದೇನೆ. ಸದ್ಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಕೊಡಗು ಪೊಲೀಸರು ಉತ್ತಮವಾಗಿ ಸ್ಪಂದಿಸಿ ಕೂಡಲೇ ಕಾರ್ಯಪ್ರವೃತ್ತರಾಗಿ ಕೂಲಂಕಷವಾಗಿ ತನಿಖೆ ನಡೆಸುತ್ತಿದ್ದಾರೆ. ಇದೂವರೆಗೆ ನನಗೆ ಯಾವುದೇ ಬೆದರಿಕೆಗಳು ಇರಲಿಲ್ಲ. ಯಾರೂ ವಿರೋಧಿಗಳು ಎನ್ನುವವರು ಇರಲಿಲ್ಲ. ಈಗ ಈ ಘಟನೆ ಆಗಿದ್ದು ಆತಂಕ ಮೂಡಿಸಿದೆ. ಪೊಲೀಸರು ಎಲ್ಲಾ ರೀತಿಯಿಂದಲೂ ತನಿಖೆ ನಡೆಸುತ್ತಿದ್ದು, ನೈಜತೆ ಏನು ಎನ್ನುವುದು ಗೊತ್ತಾಗಬೇಕಾಗಿದೆ ಎಂದಿದ್ದಾರೆ. ಸದ್ಯ ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಐಪಿಸಿ ಸೆಕ್ಷನ್ 307 ಅಡಿಯಲ್ಲಿ ಪ್ರಕರಣ ದಾಖಲಾಗಿದೆ.

BIG3: ಲಕ್ಷಾಂತರ ರೂ. ವಿದ್ಯುತ್ ತೆರಿಗೆ ಬಾಕಿ: ಸುಂಟಿಕೊಪ್ಪ ಗ್ರಾಪಂ ಎಡವಟ್ಟು

click me!