ಹೆಣ್ಣು ಕೊಟ್ಟ ಅತ್ತೆಯನ್ನೇ ಕೊಂದ ಕಿರಾತಕ ಅಳಿಯ! ಕೊಲೆಯ ಕಾರಣ ಕೇಳಿ ಪತ್ನಿಯೇ ಶಾಕ್!

By Ravi Janekal  |  First Published Dec 14, 2023, 7:43 AM IST

ಮಗಳ ಮುಂದೆಯೇ ತಾಯಿಯ ಹತ್ಯೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ಹೆಂಡತಿ ದೂರವಾಗಲು ಅತ್ತೆಯೇ ಕಾರಣವೆಂದು ಅಳಿಯನೇ ಮುಸುಕುಧಾರಿಯಾಗಿ ಬಂದು ಅತ್ತೆಯನ್ನು ಕೊಲೆ ಮಾಡಿರುವುದು ಮಾಡಿರುವುದು ಬಯಲಾಗಿದೆ.


ಮಂಡ್ಯ (ಡಿ.14): ಮಗಳ ಮುಂದೆಯೇ ತಾಯಿಯ ಹತ್ಯೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ಹೆಂಡತಿ ದೂರವಾಗಲು ಅತ್ತೆಯೇ ಕಾರಣವೆಂದು ಬಗೆದು ಅಳಿಯನೇ ಮುಸುಕುಧಾರಿಯಾಗಿ ಬಂದು ಕೊಲೆ ಮಾಡಿರುವುದು  ಪೊಲೀಸ್ ತನಿಖೆ ವೇಳೆ ಆಘಾತಕಾರಿ ವಿಷಯ ಬಯಲಾಗಿದೆ.

ಅಳಿಯ ಕಾಂತರಾಜು ಕೊಲೆ ಮಾಡಿರುವ ಆರೋಪಿ. ಮೊನ್ನೆ ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೂಕಿನ ಎಲೆಕೆರೆ ಗ್ರಾಮದಲ್ಲಿ  ನಡೆದಿದ್ದ ಹತ್ಯೆ. ಮಗಳು ಅರ್ಪಿತಾ ಮುಂದೆಯೇ ಮಧ್ಯ ರಾತ್ರಿ 12.30 ರಲ್ಲಿ ಕೊಲೆಯಾಗಿದ್ದ ತಾಯಿ ಪಾರ್ವತಮ್ಮ(50). ರಾತ್ರಿ ಮುಸುಕುದಾರಿಯೊಬ್ಬ ಫಾಲೋ ಮಾಡಿಕೊಂಡು ಬಂದು
ಚಾಕುವಿನಿಂದ ಕತ್ತು ಕೂಯ್ದು ಕೊಲೆಗೈದು ಎಸ್ಕೇಪ್ ಆಗಿದ್ದ ಹಂತಕ. 

Tap to resize

Latest Videos

ಬೆಂಗಳೂರು, ಮಂಡ್ಯ, ಮೈಸೂರಿನ 900 ಭ್ರೂಣ ಹತ್ಯೆ ಕೇಸನ್ನು ಸಿಐಡಿ ತನಿಖೆಗೆ ವಹಿಸಿದ ಸರ್ಕಾರ!

ಪೊಲೀಸರ ತನಿಖೆಯಿಂದ ಬಯಲು:

ಹತ್ಯೆ ಪ್ರಕರಣ ಸಂಬಂಧ ತನಿಖೆ ನಡೆಸಿದ್ದ ಪೊಲೀಸರು, ಮಗಳ ಗಂಡನೇ ಅತ್ತೆಯನ್ನು ಕೊಂದಿರುವ ಆಘಾತಕಾರಿ ವಿಚಾರ ಬಯಲು ಮಾಡಿದ್ದಾರೆ. ಅರ್ಪಿತಾ ತವರು ಮನೆ ಸೇರಲು ಮೃತ ಪಾರ್ವತಮ್ಮಳೆ ಕಾರಣ ಎಂಬ ಸೇಡು ತುಂಬಿಕೊಂಡಿದ್ದ ಆರೋಪಿ ಕಾಂತರಾಜ್ ಹೀಗಾಗಿ ಅತ್ತೆಯನ್ನು ಮುಗಿಸಲು ಸಂಚು ಮಾಡಿದ್ದ. ಮೊನ್ನೆ ಹಬ್ಬದ ಹಿನ್ನಲೆ ಮನೆ ದೇವರ ಪೂಜೆಗೆ ತೆರಳಿದ್ದ ಪಾರ್ವತಮ್ಮ ಹಾಗೂ ಮಗಳು. ಪೂಜೆ ಮುಗಿಸಿ ವಾಪಸ್ಸು ಆಗುವಾಗ ಹಿಂದೆ ಫಾಲೋ ಮಾಡಿದ್ದ ಅಳಿಯ. ಯಾರಿಗೂ ಗುರುತು ತಿಳಿಯದಂತೆ ಮುಸುಕುದಾರಿಯಾಗಿ, ಜರ್ಕಿನ್ ಧರಿಸಿ ಬಂದು ಹತ್ಯೆ ಮಾಡಿ ಎಸ್ಕೇಪ್ ಆಗಿದ್ದ ಕಾಂತರಾಜು. 

Mandya: ಟಾರ್ಗೆಟ್ ಮಾಡಿದ್ದು ತಮ್ಮನನ್ನ ಹಂತಕರ ಕೈಯಲ್ಲಿ ತಗಲಾಕಿ ಪ್ರಾಣ ಬಿಟ್ಟಿದ್ದು ಅಣ್ಣ!

ಸ್ವಂತ ಹೆಂಡತಿಗೆ ತಿಳಿಯದಂತೆ ವೇಷ ಧರಿಸಿ ಬಂದಿದ್ದ ಹಂತಕ ಕಾಂತರಾಜು. ಅತ್ತೆಯನ್ನ ಕೊಂದ ಬಳಿಕ ಏನೂ ಗೊತ್ತಿಲ್ಲದ್ದಂತೆ ತಮ್ಮೂರಿನ ಮನೆಯಲ್ಲಿ ಇದ್ದ ಕೀಚಕ. ಅನುಮಾನದ ಮೇಲೆ ವಿಚಾರಣೆ ನಡೆಸಿದ ವೇಳೆ ಹೊರಬಿತ್ತು ಸತ್ಯ! ಹೆಂಡತಿ ತವರು ಮನೆ ಸೇರಲು ಅತ್ತೆಯೇ ಕಾರಣ ಎಂದು ಕೊಲೆ ಮಾಡಿರುವ ಬಗ್ಗೆ ಬಾಯ್ಬಿಟ್ಟಿರೋ ಕಾಂತರಾಜು.

click me!