Belagavi Crime News: ಬೇರೊಬ್ಬ ಮಹಿಳೆ ಜತೆ ಇರುವ ಫೋಟೊ ಬಗ್ಗೆ ಎಲ್ಲರಿಗೂ ಹೇಳುತ್ತಾನೆ ಎಂಬ ಕಾರಣಕ್ಕೆ ವ್ಯಕ್ತಿಯೊಬ್ಬ ಯುವಕನನ್ನು ಕೊಂದ ಘಟನೆ ಬೆಳಗಾವಿಯಲ್ಲಿ ನಡೆದಿದೆ
ಬೆಳಗಾವಿ (ಜು. 29): ಬೇರೊಬ್ಬ ಮಹಿಳೆ ಜತೆ ಇರುವ ಫೋಟೊ ಬಗ್ಗೆ ಎಲ್ಲರಿಗೂ ಹೇಳುತ್ತಾನೆ ಎಂಬ ಕಾರಣಕ್ಕೆ ವ್ಯಕ್ತಿಯೊಬ್ಬ ಯುವಕನನ್ನು ಕೊಂದ ಘಟನೆ ಬೆಳಗಾವಿಯಲ್ಲಿ (Belagavvi Crime) ನಡೆದಿದೆ. ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಯಕ್ಕಂಚಿ ಗ್ರಾಮದ ಕರಿಮಸೂತಿ ಕಾಲುವೆಯಲ್ಲಿ ಯುವಕನ ಶವ ಪತ್ತೆಯಾಗಿತ್ತು. ವಿಠ್ಠಲ್ ಬನ್ನೆನ್ನವರ್ (21) ಕಾಲುವೆಯಲ್ಲಿ ಶವವಾಗಿ ಪತ್ತೆಯಾಗಿದ್ದ ಯುವಕ. ಕಾಗವಾಡ ತಾಲೂಕಿನ ಉಗಾರ ಖುರ್ದ ಗ್ರಾಮದ ಯುವಕ ವಿಠ್ಠಲ್ ಬನ್ನೆನ್ನವರ್ ಮ್ರತ ವ್ಯಕ್ತಿ. ಈಗ ಈ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದ್ದು ಕೊಲೆ ಮಾಡಿ ತಲೆ ಮರೆಸಿಕೊಂಡಿದ್ದ ಇಬ್ಬರೂ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ
ಕೊಲೆ ಆರೋಪಿಯು ಬೇರೆ ಹೆಣ್ಣಿನ ಜತೆ ಇರುವ ಫೋಟೊ ವಿಠ್ಠಲ್ ನೋಡಿದ್ದ ಎನ್ನಲಾಗಿದೆ. ಬಳಿಕ ಫೋಟೊ ಬಗ್ಗೆ ಬೇರೆಯವರ ಮುಂದೆ ಹೇಳುತ್ತೆನೆ ಎಂದು ವಿಠ್ಠಲ್ ಬ್ಲಾಕ್ ಮೇಲ್ ಮಾಡಿದ್ದಾನೆ. ಇದಕ್ಕೆ ಬೆದರಿ ವಿಠ್ಠಲ್ ಗೆ ಊಟ, ಹಣಕ್ಕಾಗಿ ಆರೋಪಿ ಖರ್ಚು ಮಾಡುತ್ತಿದ್ದ. ಇದು ಅತಿಯಾದಾಗ ಸ್ನೇಹಿತ ವಿಠ್ಠಲ್‌ನನ್ನು ಕೊಲೆ ಮಾಡಲು ಆರೋಪಿ ಸ್ಕೆಚ್ ಹಾಕಿದ್ದ.
ಊಟಕ್ಕೆ ಬಾ ಎಂದು ಕರೆದು ಕಂಠ ಪೂರ್ತಿ ವಿಠ್ಠಲ್‌ಗೆ ಸಾರಾಯಿ ಕುಡಿಸಿದ್ದ ಕೊಲೆ ಆರೋಪಿ, ಇನ್ನೊಬ್ಬ ಬಾಲಾಪರಾಧಿಯ ಸಹಾಯ ಪಡೆದು ಕೊಲೆ ಮಾಡಿದ್ದ. ಸದ್ಯ ಕೊಲೆ ಮಾಡಿ ತಲೆ ಮರೆಸಿಕೊಂಡಿದ್ದ ಇಬ್ಬರೂ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಈ ಕುರಿತು ಬೆಳಗಾವಿಯಲ್ಲಿ ಎಸ್ ಪಿ ಡಾ, ಸಂಜೀವ್ ಪಾಟೀಲ್ ಮಾಹಿತಿ ನೀಡಿದ್ದಾರೆ.
ಸೋಶಿಯಲ್ ಮೀಡಿಯಾದಲ್ಲಿ ಸುಪಾರಿ ಕೊಟ್ಟು ತಂದೆಯನ್ನೇ ಕೊಲ್ಲಿಸಿದ ಪಾಪಿ ಪುತ್ರ