ಹೆಂಡತಿ-ನಾದಿನಿ ಕೊಂದು ಶವಗಳೊಂದಿಗೆ ಸೆಕ್ಸ್ ಮಾಡಿದ/ ಇಪ್ಪತ್ತು ದಿನಗಳ ನಂತರ ಆರೋಪಿ ಬಂಧನ/ ಹೆಂಡತಿ ಅಕ್ರಮ ಸಂಬಂಧ ಇಟ್ಟುಕೊಂಡಿದ್ದಾಳೆ ಎಂಬ ಶಂಕೆ
ಚಂಡೀಘಡ(ಸೆ. 25) ಈತ ಅಂತಿಂಥ ವಿಕೃತಕಾಮಿ ಅಲ್ಲ. ಪತ್ನಿ, ನಾದಿನಿ ಮತ್ತು ಅತ್ತೆಯನ್ನು ಕೊಂದು ಅವರ ಶವಗಳೊಂದಿಗೆ ಸೆಕ್ಸ್ ಮಾಡಿದ್ದಾನೆ. ಹರಿಯಾಣದ ಪಾಣಿಪತ್ ನಿಂದ ಘಟನೆ ವರದಿಯಾಗಿದೆ.
ಸೋನೆಪತ್ ಜಿಲ್ಲೆಯ ಪಟ್ಟಿಕಲಿಯಾನ ಗ್ರಾಮದ ನಿವಾಸಿ 27 ವರ್ಷದ ನೂರ್ ಹಸನ್ ಎಂಬಾತನ ಹೀನಾಯ ಕೃತ್ಯ ಬೆಳಕಿಗೆ ಬಂದಿದೆ. ಸೆಪ್ಟೆಂಬರ್ 6 ರಂದು ಜಿಲ್ಲೆಯ ಸಮಲ್ಖ ಪಟ್ಟಣದಲ್ಲಿ ಈ ಘಟನೆ ನಡೆದಿದೆ. 3 ಬೇರೆ ಬೇರೆ ಸ್ಥಳಗಳಲ್ಲಿ ಒಂದಾದ ಮೇಲೆ ಒಂದು ಒಂದೇ ಕುಟುಂಬದ ಮೂವರು ಹೆಣ್ಣುಮಕ್ಕಳ ಮೃತದೇಹಗಳು ಪತ್ತೆಯಾಗಿತ್ತು. ಈ ತ್ರಿವಳಿ ಕೊಲೆ ಪ್ರಕರಣ ಸುದ್ದಿಗೆ ಗ್ರಾಸವಾಗಿತ್ತು. ಪೊಲೀಸರು ಈ ಕೊಲೆ ಪ್ರಕರಣದ ಮೂಲ ಪತ್ತೆ ಹಚ್ಚಿ ಆರೋಪಿಯನ್ನು ಬಂಧಿಸಿದ್ದಾರೆ.
ಕಾಗೆಗಳ ಶವ ಸಂಭೋಗ; ಇದೆಂತಾ ವಿಚಿತ್ರ ನಡುವಳಿಕೆ
ಆರೋಪಿ ನೂರ್ ಹಸನ್ ಎಂಬಾತ ತನ್ನ ಪತ್ನಿ ಮಧು ಅಕ್ರಮ ಸಂಬಂಧ ಹೊಂದಿದ್ದಾಳೆ ಎಂಬ ಶಂಕೆಯಲ್ಲಿದ್ದ. ಇದೇ ಕಾರಣಕ್ಕೆ ಆಕೆಯೊಂದಿಗೆ ಜಗಳ ಮಾಡಿಕೊಂಡಿದ್ದ. ಇದೇ ಕೋಪದಲ್ಲಿ ಸೆಪ್ಟೆಂಬರ್ 5 ರಂದು ಡ್ರಗ್ಸ್ ಸೇವಿಸಿ ಮನೆಗೆ ಬಂದಿದ್ದ. ಈ ವೇಳೆ ಮತ್ತೆ ಗಲಾಟೆ ಶುರುವಾಗಿದೆ. ನಶೆಯಲ್ಲಿ ನೂರ್ ಹಸನ್, ತನ್ನ ಪತ್ನಿ ಮಧು (25 ) ನಾದಿನಿ ಮನಿಷಾ (18 )ರನ್ನ ಚಾಕುವಿನಿಂದ ಇರಿದು ಕೊಂದಿದ್ದಾನೆ.
ಬಳಿಕ ಅವರ ಮೃತದೇಹಗಳ ಜೊತೆ ಸೆಕ್ಸ್ ಮಾಡಿದ್ದಾನೆ. ಬಳಿಕ ಮೂರೂ ಮೃತದೇಹಗಳನ್ನು ಬೇರೆ ಬೇರೆ ಕಡೆ ತೆಡಗೆದುಕೊಂಡು ಹೋಗಿ ಎಸೆದಿದ್ದಾನೆ. ಸೆಪ್ಟೆಂಬರ್ 8 ರಂದು ಬರ್ಷಮ್ ಗ್ರಾಮದಲ್ಲಿರುವ ತನ್ನ ಅತ್ತೆಯ ಮನೆಗೆ ಹೋಗಿ ಆಕೆಯನ್ನು ಕತ್ತು ಹಿಸುಕಿ ಕೊಂದಿದ್ದಾನೆ. ನಂತರ ಆಕೆಯ ಗುರುತನ್ನು ಪತ್ತೆ ಮಾಡಬಾರದೆಂದು ಮೃತದೇಹವನ್ನು ಸುಡಲು ಪ್ರಯತ್ನಿಸಿದ್ದಾನೆಎಂದು ಪೊಲಿಸರು ಮಾಹಿತಿ ನೀಡಿದ್ದಾರೆ.
ಆರೋಪಿ ನೂರ್ ಹಸನ್ ತನ್ನ ಪತ್ನಿ ಮತ್ತು ಇಬ್ಬರು ಮಕ್ಕಳೊಂದಿಗೆ ಸಮಲ್ಖ ಪಟ್ಟಣದಲ್ಲಿ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದ. ಆದರೆ ಪತ್ನಿ ವಿವಾಹೇತರ ಸಂಬಂಧ ಹೊಂದಿದ್ದಾಳೆ ಎಂದು ಅನುಮಾನ ಪಟ್ಟಿದ್ದ. ಇದಕ್ಕೆ ಅತ್ತೆಯ ಮನೆಯವರ ಬೆಂಬಲ ಪಡೆಯುತ್ತಿದ್ದಾಳೆ ಎಂದು ಶಂಕಿಸಿ ಕೊಲೆ ಮಾಡಿದ್ದಾನೆ.