ತಂಗಿಯನ್ನೇ ಕೊಲೆಗೈದ ಅಣ್ಣ ಅರೆಸ್ಟ್/ ಬೈಯ್ಯಪ್ಪನಹಳ್ಳಿ ಪೊಲೀಸರಿಂದ ಆರೋಪಿ ರವಿಕಿರಣ್ ಬಂಧನ/ ಪ್ರೀತಿ ವಿಚಾರಕ್ಕಾಗಿ ಗಲಾಟೆ ಕೊಲೆಯಲ್ಲಿ ಅಂತ್ಯ/ ಮಂಗಳ ಕೊಲೆಯಾದವಳು/ ಫ್ಯಾಕ್ಟರಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಮಂಗಳ / ಏಳೆಂಟು ತಿಂಗಳ ಹಿಂದೆ ರವಿಕಿರಣ್ ಕೆಲಸ ಬಿಡಿಸಿದ್ದ
ಬೆಂಗಳೂರು( ಏ. 07) ತಂಗಿಯನ್ನೇ ಕೊಲೆಗೈದ ಅಣ್ಣ ಅರೆಸ್ಟ್ ಆಗಿದ್ದಾನೆ ಬೈಯ್ಯಪ್ಪನಹಳ್ಳಿ ಪೊಲೀಸರಿಂದ ಆರೋಪಿ ರವಿಕಿರಣ್ ಬಂಧನವಾಗಿದೆ. ಪ್ರೀತಿ ವಿಚಾರಕ್ಕಾಗಿ ನಡೆದ ಗಲಾಟೆ ಕೊಲೆಯಲ್ಲಿ ಅಂತ್ಯವಾಗಿತ್ತು.
ಮಂಗಳ ಅಣ್ಣನಿಂದಲೇ ಹತ್ಯೆಯಾಗಿದ್ದಳು ಫ್ಯಾಕ್ಟರಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಮಂಗಳಾರ ಕೆಲಸವನ್ನು ಏಳೆಂಟು ತಿಂಗಳ ಹಿಂದೆ ರವಿಕಿರಣ್ಬಿ ಡಿಸಿದ್ದ. ತಂಗಿ ಶೀಲ ಶಂಕಿಸಿ ಮನೆಯಲ್ಲಿ ಇರುವಂತೆ ತಾಕೀತು ಮಾಡಿದ್ದ. ಏ.4 ರಂದು ರಾತ್ರಿ ಅಣ್ಣ-ತಂಗಿ ನಡುವೆ ಗಲಾಟೆ ನಡೆದಿದೆ. ಗಲಾಟೆಯಲ್ಲಿ ತಂಗಿ ಕುತ್ತಿಗೆ ಬಿಗಿದು ಕೊಲೆ ಮಾಡಿದ್ದ.
ಕೊರೋನಾ ಕಾಲದ ಸಾಲ; ಒಂಟಿ ಮಹಿಳೆಯ ಹತ್ಯೆ ಮಾಡಿದವ ಸಿಕ್ಕಿಬಿದ್ದ
ಮೃತ ದೇಹವನ್ನು ಚೀಲದಲ್ಲಿ ತುಂಬಿ ರೈಲ್ವೇ ಟ್ರ್ಯಾಕ್ ಮೇಲೆ ಎಸೆದಿದ್ದ. ಮೃತದೇಹ ಕಂಡು ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದರು ಮಾಹಿತಿ ಆಧರಿಸಿ ಸ್ಥಳಕ್ಕೆ ಬಂದ ಬೈಯ್ಯಪ್ಪನ ಪೊಲೀಸರು ಪರಿಶೀಲನೆ ವೇಳೆ ಕೊಲೆ ಮಾಡಿ ಶವವನ್ನು ಎಸೆದು ತಂದಿದ್ದರು ಎಂಬ ಶಂಕೆ ವ್ಯಕ್ತಪಡಿಸಿದ್ದರು. ರವಿಕಿರಣ್ ವಿಚಾರಣೆ ನಡೆಸಿದಾಗ ಕೊಲೆ ರಹಸ್ಯ ಬಹಿರಂಗವಾಗಿದೆ.