ದುರಾಸೆ, ದುಷ್ಟತನಕ್ಕೆ ಜೀವವೊಂದು ಬಲಿಯಾಗಿದೆ. ದೂರದ ಮೀರಜ್ ಮೂಲಕದ ಲಾರಿ ಡ್ರೈವರ್ ಹೆಣವಾಗಿದ್ದ. ಹಾವೇರಿ ಜಿಲ್ಲೆಯಲ್ಲಿ ತೀವ್ರ ಸಂಚಲನ ಸೃಷ್ಟಿಯಾಗಿದ್ದ ಕೇಸ್ ಪೊಲೀಸರು ಭೇದಿಸಿದ್ದು, ಗದಗ ಜಿಲ್ಲೆಯ ಐವರನ್ನು ಬಂಧಿಸಿದ್ದಾರೆ.
ವರದಿ: ಪವನ್ ಕುಮಾರ್, ಏಷ್ಯಾನೆಟ್ ಸುವರ್ಣ ನ್ಯೂಸ್
ಹಾವೇರಿ (ಜೂ.19): ದುರಾಸೆ, ದುಷ್ಟತನಕ್ಕೆ ಜೀವವೊಂದು ಬಲಿಯಾಗಿದೆ. ದೂರದ ಮೀರಜ್ ಮೂಲಕದ ಲಾರಿ ಡ್ರೈವರ್ ಹೆಣವಾಗಿ ಮಲಗಿದ್ದ. ಬಲವಾದ ಹೊಡೆತಗಳಿಗೆ ಬಲಿಯಾಗಿದ್ದ. ಆ ದುಷ್ಟರು ಲಾರಿ ಡ್ರೈವರ್ ಹತ್ಯೆ ಮಾಡಿ ಲಾರಿನೂ ಕದ್ದು ಪರಾರಿಯಾಗಿದ್ದರು. ಆದರೆ ಈಗ ಪೊಲೀಸರ ಅಥಿತಿಯಾಗಿದ್ದಾರೆ.
undefined
ಆ ಘಟನೆ ಹಾವೇರಿ ಜಿಲ್ಲೆಯಲ್ಲಿ ತೀವ್ರ ಸಂಚಲನ ಸೃಷ್ಟಿ ಮಾಡಿತ್ತು. ಹೈ ವೇ ನಲ್ಲಿ ಒಬ್ರೇ ಗಾಡಿಲಿ ಹೋಗೋದು ಎಷ್ಟು ಸೇಫ್ ಎಂಬ ಪ್ರಶ್ನೆ ಜನರಲ್ಲಿ ಮೂಡುವಂತೆ ಮಾಡಿತ್ತು. ತೀವ್ರ ಸಂಚಲನ ಮೂಡಿಸಿದ್ದ ಮೀರಜ್ ಮೂಲದ ಲಾರಿ ಚಾಲಕನ ಹತ್ಯೆಕೋರರನ್ನ ಪೊಲೀಸರು ಬಂಧಿಸಿದ್ದಾರೆ. ಕೊಲೆ ಹಾಗೂ ದರೋಡೆ ಪ್ರಕರಣವನ್ನು 48 ಗಂಟೆಯೊಳಗೆ ಭೇದಿಸಿದ ಹಾವೇರಿ ಶಹರ ಠಾಣೆಯ ಪೊಲೀಸರು, ಐವರು ಆರೋಪಿಗಳನ್ನು ಬಂಧಿಸಿದ್ದಾರೆ.
ಗದಗ ಜಿಲ್ಲೆಯ ಅಡವಿ ಸೋಮಾಪುರದ ಹನುಮಂತ (ಬಸವರಾಜು/ ನಜೀರ್) ಸಿದ್ದಪ್ಪ ಕಾಳಗಿ, ಹಿರೇಕೆರೂರು ತಾಲ್ಲೂಕಿನ ಮಡ್ಲೂರು ಗ್ರಾಮದ ಶಿವರಾಜು ಸಾತೇನಹಳ್ಳಿ, ಬಸರಿಹಳ್ಳಿ ಗ್ರಾಮದ ಶಿವಕುಮಾರ ದೊಡ್ಡಗೌಡ್ರ, ಹೊಲಬಿಕೊಂಡು ಗ್ರಾಮದ ಚಂದ್ರು ಹುಡೇದ್, ರಟ್ಟೀಹಳ್ಳಿ ತಾಲ್ಲೂಕಿನ ಲಿಂಗದೇವರಕೊಪ್ಪದ ಸಂಜೀವ ಬಣಕಾರ ಬಂಧಿತ ಆರೋಪಿಗಳು. ಆರೋಪಿಗಳಿಂದ ಕಳ್ಳತನವಾಗಿದ್ದ 1.33 ಕೋಟಿ ರೂ ಮೌಲ್ಯದ 120 ಪ್ರೆಷರ್ ವಾಲ್ ಮತ್ತು ಲಾರಿಯನ್ನು (ರಾ ಸ್ಟೀಲ್ ಕಾಸ್ಟಿಂಗ್) ವಶಕ್ಕೆ ಪಡೆದಿದ್ದಾರೆ. ಕೃತ್ಯಕ್ಕೆ ಬಳಸಿದ್ದ ಜೆ.ಸಿ.ಬಿ, ಟಿಪ್ಪರ್, ಬೈಕ್, ಗೂಡ್ಸ್ ಲಾರಿ, ನಾಲ್ಕು ಮೊಬೈಲ್‌ಗಳನ್ನು ಪೊಲೀಸರು ಜಪ್ತಿ ಮಾಡಿದ್ದಾರೆ .ಪವನ್ ಎಂಬ ಆರೋಪಿ ತಲೆಮರೆಸಿಕೊಂಡಿದ್ದು, ಈತನ ಪತ್ತೆಗೆ ಪೊಲೀಸರು ಶೋಧ ಕಾರ್ಯ ಕೈಗೊಂಡಿದ್ದಾರೆ.
Mangaluru: ಒಂದೇ ಕಾಲೇಜಿನ ಇಬ್ಬರು ಎಂಜಿನಿಯರಿಂಗ್ ವಿದ್ಯಾರ್ಥಿಗಳು ಆತ್ಮಹತ್ಯೆ
ಮಹಾರಾಷ್ಟ್ರ ರಾಜ್ಯದ ಸಾಂಗ್ಲಿ ಜಿಲ್ಲೆಯ ಮೀರಜ್‌ನ ಲಾರಿ ಚಾಲಕ ಗೋವಿಂದ ಖಂಡೇಕರ್ (40) ಮೃತ ದುರ್ದೈವಿ. ಜೂನ್ 13ರಂದು ಗೋವಿಂದ ಖಂಡೇಕರ್ ಲಾರಿಯಲ್ಲಿ ಗ್ಯಾಸ್, ಪೆಟ್ರೋಲ್ ಮತ್ತು ಡೀಸೆಲ್ ಪೈಪ್ ಲೈನುಗಳಿಗೆ ಬಳಸುವ ಪ್ರೆಷರ್ ವಾಲ್‌ಗಳನ್ನು ತುಂಬಿಕೊಂಡು, ಮಹಾರಾಷ್ಟ್ರದ ಕುಪವಾಡಿಯಿಂದ ಹೊರಟಿದ್ದ.
ಜೂನ್ 15ರಂದು ಹಾವೇರಿ ಹೊರವಲಯದ ರಾಷ್ಟ್ರೀಯ ಹೆದ್ದಾರಿಯಲ್ಲಿ ಆರೋಪಿಗಳು ಲಾರಿ ಚಾಲಕನ ಮೇಲೆ ಗಂಭೀರ ಹಲ್ಲೆ ನಡೆಸಿ, ರಸ್ತೆ ಬದಿ ಎಸೆದಿದ್ದರು. ನಂತರ ಹಲ್ಲೆಗೊಳಗಾದ ಗೋವಿಂದನನ್ನು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆಗೆ ಸ್ಪಂದಿಸದೇ ಆತ ಮೃತಪಟ್ಟಿದ್ದ.
ಲಾರಿಯನ್ನು ತೆಗೆದುಕೊಂಡು ಹೋದ ಆರೋಪಿಗಳು ಮತ್ತೊಂದು ಲಾರಿಗೆ ಪ್ರೆಷರ್ ವಾಲ್‌ಗಳನ್ನು ತುಂಬಿಕೊಂಡು ಮಾರಾಟಕ್ಕೆ ಸಂಚು ರೂಪಿಸಿದ್ದರು. ಆರೋಪಿಗಳ ಬೆನ್ನು ಹತ್ತಿದ ಪೊಲೀಸರು ಹಿರೇಕೆರೂರು ಬಳಿ ಐವರು ಆರೋಪಿಗಳನ್ನು ಬಂಧಿಸಿ, ವಾಹನ ಮತ್ತು ಸಾಮಗ್ರಿಗಳನ್ನು ಜಪ್ತಿ ಮಾಡಿದ್ದಾರೆ.
ವೈದ್ಯರ ನಿರ್ಲಕ್ಷ್ಯ, ಪ್ರವಾಸಕ್ಕೆಂದು ಬಂದ ಮಹಿಳೆ ಇಂಜೆಕ್ಷನ್ ಪಡೆದು ಸಾವು!
ಸ್ನೇಹ ಅಂತ ಒಳಗೊಳಗೆ ಸ್ಕೆಚ್ ಹಾಕಿದ ಎ–1 ಆರೋಪಿ ಹನುಮಂತ ಕಾಳಗಿ ಮತ್ತು ಲಾರಿ ಚಾಲಕ ಗೋವಿಂದ ಖಂಡೇಕರ್‌ಗೆ ನಾಲ್ಕು ವರ್ಷಗಳ ಹಿಂದೆ ಹಾವೇರಿ ಬಳಿಯ ಡಾಬಾವೊಂದರಲ್ಲಿ ಪರಿಚಯವಾಗಿತ್ತು. ಗೋವಿಂದ ಖಂಡೇಕರ್ ಪ್ರೆಷರ್ ವಾಲ್ ತರುವ ಲಾರಿಯಲ್ಲೇ ಆರೋಪಿ ಹನುಮಂತನೂ ಮೀರಜ್‌ನಿಂದ ಬಂದಿದ್ದಾನೆ. ಹಾವೇರಿ ಬಳಿ, ಇತರ ಆರೋಪಿಗಳ ಜತೆ ಸೇರಿ ಸಂಚು ರೂಪಿಸಿ ಹತ್ಯೆಗೈದಿದ್ದಾರೆ.
ಆರೋಪಿ ಹನುಮಂತನಿಗೆ ಅಪರಾಧ ಹಿನ್ನೆಲೆ ಉಳ್ಳವನಾಗಿದ್ದಾನೆ. ಇತರ ಆರೋಪಿಗಳಿಗೆ ಅಪರಾಧ ಹಿನ್ನೆಲೆ ಇದೆಯೇ ಎಂಬುದು ಹೆಚ್ಚಿನ ತನಿಖೆಯಿಂದ ಗೊತ್ತಾಗಲಿದೆ. ಸ್ಟೀಲ್ ಸಾಮಗ್ರಿ ಕಳವು ಮಾಡುವ ಉದ್ದೇಶದಿಂದಲೇ ಹತ್ಯೆ ನಡೆದಿದೆ ಎಂಬುದು ಮೇಲ್ನೋಟಕ್ಕೆ ಕಂಡು ಬಂದಿದೆ’ ಎಂದು ಎಸ್ಪಿ ಶಿವಕುಮಾರ ಗುಣಾರೆ ತಿಳಿಸಿದ್ರು
ಆರೋಪಿ ಹನುಮಂತನನ್ನ ನಂಬಿದ್ದಕ್ಕೆ ಗೋವಿಂದ ಖಂಡೇಖರ್ ಸ್ಥಿತಿ ಕೊನೆಗೆ ಹೆಣವಾಗಿದ್ದಾನೆ. ಅದ್ಯಾವ ಆಸೆಗೆ ಲಾರಿ ಚಾಲಕನನ್ನು ಪಾಪಿಗಳು ಹತ್ಯೆ ಮಾಡಿದರೋ ಗೊತ್ತಾಗಬೇಕಿದೆ.