ಕಲಬುರಗಿ: ಕಾಂಗ್ರೆಸ್ ಪರ ಪ್ರಚಾರ ಮಾಡಿದ್ದಕ್ಕೆ ವ್ಯಕ್ತಿಯ ಬರ್ಬರ ಹತ್ಯೆ!

By Ravi Janekal  |  First Published May 10, 2024, 4:10 PM IST

ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪರ ಪ್ರಚಾರ ಮಾಡಿದ್ದಕ್ಕೆ ವ್ಯಕ್ತಿಯೋರ್ವನನ್ನು ಬರ್ಬರವಾಗಿ ಹತ್ಯೆ ಮಾಡಿದ ಘಟನೆ ಕಲಬುರಗಿ ಜಿಲ್ಲೆಯ ಅಫಜಲಪುರ ತಾಲೂಕಿನ ಸಂಗಾಪುರ ಗ್ರಾಮದಲ್ಲಿ ನಡೆದಿದೆ. ಜಾವೀದ್ ಚಿನ್ನಮಳ್ಳಿ(27),ಕೊಲೆಯಾದ ವ್ಯಕ್ತಿ


ಕಲಬುರಗಿ (ಮೇ.10): ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪರ ಪ್ರಚಾರ ಮಾಡಿದ್ದಕ್ಕೆ ವ್ಯಕ್ತಿಯೋರ್ವನನ್ನು ಬರ್ಬರವಾಗಿ ಹತ್ಯೆ ಮಾಡಿದ ಘಟನೆ ಕಲಬುರಗಿ ಜಿಲ್ಲೆಯ ಅಫಜಲಪುರ ತಾಲೂಕಿನ ಸಂಗಾಪುರ ಗ್ರಾಮದಲ್ಲಿ ನಡೆದಿದೆ.

ಜಾವೀದ್ ಚಿನ್ನಮಳ್ಳಿ(27),ಕೊಲೆಯಾದ ವ್ಯಕ್ತಿ. ಮೇ.7ರಂದು ನಡೆದಿದ್ದ ಎರಡನೇ ಹಂತದ ಲೋಕಸಭಾ ಚುನಾವಣೆ ದಿನ ಕಾಂಗ್ರೆಸ್ ಪರ ಪ್ರಚಾರ ಮಾಡಿ ಮತಯಾಚನೆ ಮಾಡಿದ್ದಕ್ಕೆ ರಾಜಕೀಯ ದ್ವೇಷದಿಂದ ದುಷ್ಕರ್ಮಿಗಳು ಕೊಲೆ ಮಾಡಿರುವ ಆರೋಪ ಕೇಳಿಬಂದಿದೆ. 

Tap to resize

Latest Videos

undefined

ನಮ್ಮ ತಂಟೆಗೆ ಬಂದವರ ಮೂಗು ತುಂಡರಿಸೋಣ: ಆಂದೋಲಾ ಶ್ರೀ

ಚುನಾವಣೆ ಮುಗಿದ ಬಳಿಕ ಅಮವಾಸ್ಯೆ ದಿನ ಸಂಗಾಪುರ ಗ್ರಾಮದ ಹೊರವಲಯದಲ್ಲಿ ಪಾರ್ಟಿ ಮಾಡಲು ಜಾವೀದ್ ಚಿನ್ನಮಳ್ಳಿಯನ್ನ ಕರೆದುಕೊಂಡು ಹೋಗಿರುವ ದುಷ್ಕರ್ಮಿಗಳು. ಜಮೀನಿನಲ್ಲಿ ಗುಂಡು ತುಂಡು ಪಾರ್ಟಿ ಮಾಡಿದ್ದಾರೆ. ಬಳಿಕ ಜಾವೀದ್ ಕೊಲೆಗೈದು ಬಾವಿಯಲ್ಲಿ ಬಿಸಾಡಿರುವ ದುಷ್ಕರ್ಮಿಗಳು. ಘಟನೆ ಮಾಹಿತಿ ತಿಳಿದು ಸ್ಥಳಕ್ಕೆ ಗಾಣಗಾಪುರ ಪೊಲೀಸರು ಭೇಟಿ ನೀಡಿದ್ದು, ಪರಿಶೀಲನೆ ನಡೆಸಿದ್ದಾರೆ.

click me!