ಮತ್ತೊಂದು ಶ್ರದ್ಧಾ ಕೇಸ್, ನರ್ಸ್ ಹತ್ಯೆಗೈದು ಬೆಡ್ ಸ್ಟೋರೇಜ್ ಬಾಕ್ಸ್‌ನಲ್ಲಿಟ್ಟ ಲೀವ್ ಇನ್ ಪಾರ್ಟ್ನರ್

By Suvarna News  |  First Published Feb 15, 2023, 5:10 PM IST

ಮುಂಬೈನಲ್ಲಿ ನರ್ಸ್ ಆಗಿ ಸೇವೆ ಸಲ್ಲಿಸುತ್ತಿದ್ದ ಕರ್ನಾಟಕ ಮೂಲದ ಮೇಘಾ ತನ್ನ ಲೀವ್ ಇನ್ ಪಾರ್ಟ್ನರ್‌ನಿಂದಲೇ ಹತ್ಯೆಯಾಗಿದ್ದಾಳೆ. ಬಾಡಿಗೆ ಮನೆಯಲ್ಲಿ ನರ್ಸ್ ಹತ್ಯೆಗೈದ ಸಂಗಾತಿ ಬಳಿಕ  ನಾಟಕವಾಡಿದ್ದಾನೆ. 
 


ಮುಂಬೈ(ಫೆ.15): ಲೀವ್ ಇನ್ ರಿಲೇಶನ್‌ಶಿಪ್ ಇದೀಗ ಬೆಚ್ಚಿ ಬೀಳಿಸುವ ಪದವಾಗಿ ಮಾರ್ಪಟ್ಟಿದೆ. ಕಾರಣ ಕ್ಷುಲ್ಲಕ ಕಾರಣಕ್ಕೆ ಲೀವ್ ಇನ್ ರಿಲೇಶನ್‌ಶಿಪ್‌ನಲ್ಲಿ ಭೀಕರ ಕೊಲೆಯಾಗುತ್ತಿದೆ. ದೆಹಲಿಯ ಆಫ್ತಾಬ್ ಪ್ರಕರಣದ ಬಳಿಕ ಇದೇ ರೀತಿ ಹಲವು ಘಟನೆಗಳು ಸಂಭವಿಸಿದೆ. ಇದೀಗ ಮುಂಬೈನಲ್ಲಿ ಭೀಕರ ಹತ್ಯೆ ನಡೆದಿದೆ. ಕರ್ನಾಟಕ ಮೂಲದ ನರ್ಸ್ ಮೇಘಾ ತೊರ್ವಿ ತನ್ನ ಲೀವ್ ಇನ್ ಪಾರ್ಟ್ನರ್‌ನಿಂದ ಕೊಲೆಯಾಗಿದ್ದಾಳೆ. ಮುಂಬೈನ ಬಾಡಿಗೆ ಮನೆಯಲ್ಲಿ ಮೇಘಾಳನ್ನು ಹತ್ಯೆ ಮಾಡಿದ ಸಂಗಾತಿ ಹಾರ್ದಿಕ್ ಶಾ ಮೃತದೇಹವನ್ನು ಮಂಚದಡಿ ಇಟ್ಟಿದ್ದಾನೆ. ಬಳಿಕ ಮೃತದೇಹದ ಮೇಲೆ ಬೆಡ್ ಹಾಸಿ ಯಾರಿಗೂ ತಿಳಿಯದಂತೆ ಮಾಡಿದ್ದಾನೆ. ಆದರೆ ಈತನ ನಾಟಕ ಬಯಲಾಗಿದೆ. ಪೊಲೀಸರು ಹಾರ್ದಿಕ್ ಶಾನನ್ನು ಬಂಧಿಸಿದ್ದಾರೆ.

40 ವರ್ಷದ ಮೇಘಾ ತೊರ್ವಿ ಹಾಗೂ  35 ವರ್ಷದ ಹಾರ್ದಿಕ್ ಶಾ ಕಳೆದ ಹಲವು ವರ್ಷಗಳಿಂದ ಲೀವ್ ಇನ್ ರಿಲೇಶನ್‌ಶಿಪ್‌ನಲ್ಲಿದ್ದಾರೆ(live in relationship). ಇಬ್ಬರು ಮುಂಬೈನ(Mumbai Crime) ಫ್ಲ್ಯಾಟ್ ಒಂದರಲ್ಲಿ ಜೀವನ ಸಾಗಿಸುತ್ತಿದ್ದಾರೆ. ಇತ್ತೀಚೆಗಷ್ಟೇ ಮುಂಬೈ ನಾಲಾಸುಪಾರದಲ್ಲಿನ ಹೊಸ  ಬಾಡಿಗೆ ಮನೆಗೆ ಆಗಮಿಸಿದ್ದಾರೆ. ತಾವಿಬ್ಬರು ಗಂಡ ಹೆಂಡತಿ ಎಂದು ಪರಿಚಯ ಮಾಡಿಕೊಂಡು ಮನೆ ಪಡೆದಿದ್ದಾರೆ. ಆದರೆ ಕಳೆದ ಕೆಲ ದಿನಗಳಿಂದ ಮದುವೆ ಕುರಿತು ಮಾತುಕತೆ ನಡೆದಿದೆ. ಹಾರ್ದಿಕ್ ಶಾ ತನ್ನ ವೇತನ ಹಾಗೂ ಹಣಕ್ಕಾಗಿ ತನ್ನ ಜೊತೆ ಇದ್ದಾನೆ ಅನ್ನೋ ಅನುಮಾನ ಕಾಡತೊಡಗಿದೆ. ಇದಕ್ಕಾಗಿ ಲೀವ್ ಇನ್ ರಿಲೇಶನ್‌ಶಿಪ್‌ಗೆ ಮದುವೆ ಅರ್ಥನೀಡಲು ಮೇಘಾ ತೊರ್ವಿ(Nurse Megha Murder) ಮುಂದಾಗಿದ್ದಾಳೆ.ಇದು ಹಾರ್ದಿಕ್ ಶಾನನ್ನು ರೊಚ್ಚಿಗೆಬ್ಬಿಸಿದೆ. 

Tap to resize

Latest Videos

ಶ್ರದ್ಧಾ ವಾಕರ್‌ ಹತ್ಯೆಯ ಅಸಲಿ ಸತ್ಯ ಬಹಿರಂಗ..! ದೆಹಲಿ ಪೊಲೀಸರು ಚಾರ್ಜ್‌ಶೀಟ್‌ನಲ್ಲಿ ಹೇಳಿದ್ದೇನು..?

ಹಾರ್ದಿಕ್ ಶಾಗೆ(Hardik Shah) ಯಾವುದೇ ಕೆಲಸ ಇರಲಿಲ್ಲ. ಇತ್ತ ಕೆಲಸಕ್ಕೆ ಹೋಗಲು ಇಷ್ಟವಿರಲಿಲ್ಲ. ಮೇಘಾ ತರುತ್ತಿದ್ದ ಹಣದಲ್ಲಿ ಜಾತ್ರೆ ಮಾಡುತ್ತಿದ್ದ. ಇದು ಮೇಘಾಳ ಪಿತ್ತ ನೆತ್ತಿಗೇರಿಸುತ್ತಿತ್ತು. ಹೀಗಾಗಿ ಇವರಿಬ್ಬರಲ್ಲಿ ಜಗಳ ಶುರುವಾಗಿದೆ. ಪರಿಣಾಮ ಮೇಘಾಳನ್ನು ಕೊಲೈಗೈದ ಹಾರ್ದಿಕ್ ಶಾ, ಬಳಿಕ ಪರಾರಿಯಾಗಲು ಯತ್ನಿಸಿದ್ದಾನೆ. ಕರ್ನಾಟಕದಲ್ಲಿರುವ(Karnataka) ಮೇಘಾಳ ಸಂಬಂಧಿಕರಿಗೆ ಕೆಲ ದಿನಗಳಿಂದ ಕರೆಗೆ ಸಿಗದ ಕಾರಣ ಸಂಗಾತಿ ಹಾರ್ದಿಕ್ ಶಾಗೆ ಕರೆ ಮಾಡಿದ್ದಾರೆ. ಈ ವೇಳೆ ತಾನು ಮೇಘಾಳನ್ನು ಹತ್ಯೆ ಮಾಡಿದ್ದೇನೆ. ತಾನು ಬದುಕು ಅಂತ್ಯಗೊಳಿಸುವುದಾಗಿ ಬೆದರಿಕೆ ಹಾಕಿದ್ದಾನೆ.

ಗಾಬರಿಗೊಂಡ ಮೇಘಾ ಸಂಬಂಧಿಕರು ಮುಂಬೈನ ಮನೆ ಮಾಲೀಕರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಆಗಮಿಸಿದ ಮಾಲೀಕ, ಮನೆಗೆ ತೆರಳಿದಾಗ ಬೀಗ ಹಾಕಲಾಗಿತ್ತು. ಮನೆಯೊಳಗಿಂದ ಕೆಟ್ಟ ವಾಸನೆ ಬರುತ್ತಿತ್ತು. ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಇತ್ತ ಪೊಲೀಸರು(Mumbai police) ಬಾಗಿಲು ಒಡೆದು ಒಳ ಪ್ರವೇಶಿಸಿ ಪರಿಶೀಲನೆ ನಡೆಸಿದ್ದಾರೆ. ಬೆಡ್ ಅಡಿಯಲ್ಲಿ ಶವ ಗೌಪ್ಯವಾಗಿಟ್ಟಿರುವುದು ಪತ್ತೆಯಾಗಿದೆ. ನರ್ಸ್ ಮೇಘಾಳ ಕುತ್ತಿಗೆ ದೇಹದ ಇತರ ಭಾಗದಲ್ಲಿ ಗಾಯದ ಗುರುತು ಪತ್ತೆಯಾಗಿದೆ.

ಬೆಂಗಳೂರಿನಲ್ಲಿ ಒಂಟಿ ಮಹಿಳೆ ಬರ್ಬರ ಹತ್ಯೆ, ಗಂಡನೇ ಕೊಲೆ ಮಾಡಿರೋ ಶಂಕೆ!

ಇತ್ತ ಹತ್ಯೆ ಮಾಡಿದ ಹಾರ್ದಿಕ್ ಶಾ, ರೈಲಿನ ಮೂಲಕ ಮುಂಬೈ ಬಿಟ್ಟು ಬೇರೆಡೆ ತೆರಳು ಸಜ್ಜಾಗಿದ್ದ. ಆತನ ಫೋನ್ ಸ್ವಿಚ್ ಆಫ್ ಮಾಡಲಾಗಿತ್ತು. ಆದರೆ ಟವರ್ ಲೊಕೇಶನ್ ಮೂಲಕ ಪೊಲೀಸರು ಎಲ್ಲಾ ಠಾಣೆಗಳಿಗೆ ಅಲರ್ಟ್ ನೀಡಿದ್ದಾರೆ. ಪಶ್ಚಿಮ ರೈಲಿನ ಮೂಲಕ ಸಾಗುತ್ತಿದ್ದ ಹಾರ್ದಿಕ್ ಶಾನನ್ನು ಪೊಲೀಸರು ನಗಾಡ ರೈಲು ನಿಲ್ದಾಣದಲ್ಲಿ ಬಂಧಿಸಿದ್ದಾರೆ. 
 

click me!