'ಏನ್ರಿ ಮೀಡಿಯಾ..' ಅಂದವನು ನ್ಯೂಸ್‌ ನೋಡಲು ಟಿವಿ ಕೊಡಿ ಅಂದ; ಕಿಲ್ಲಿಂಗ್‌ ಸ್ಟಾರ್‌ ದರ್ಶನ್‌ ಹೊಸ ಬೇಡಿಕೆ!

By Suvarna News  |  First Published Sep 3, 2024, 3:18 PM IST

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ವಿಚಾರಣಾಧೀನ ಕೈದಿಯಾಗಿರುವ ನಟ ದರ್ಶನ್, ಬಳ್ಳಾರಿ ಕೇಂದ್ರ ಕಾರಾಗೃಹದಲ್ಲಿ ಟಿವಿ ಬೇಕೆಂದು ಬೇಡಿಕೆ ಇಟ್ಟಿದ್ದಾರೆ. ಚಾರ್ಜ್‌ಶೀಟ್ ಸಲ್ಲಿಕೆ ಬಗ್ಗೆ ಮಾಹಿತಿ ಪಡೆಯಲು ದರ್ಶನ್ ಮುಂದಾಗಿದ್ದಾರೆನ್ನಲಾಗಿದೆ.


ಬಳ್ಳಾರಿ (ಸೆ.3): ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ವಿಚಾರಣಾಧೀನ ಕೈದಿಯಾಗಿರುವ ನಟ ದರ್ಶನ್ ಈಗ ಜೈಲಿನಲ್ಲಿ ಹೊಸ ಬೇಡಿಕೆಯೊಂದನ್ನು ಇಟ್ಟಿದ್ದಾನೆ. ಸದ್ಯ ಬಳ್ಳಾರಿ ಕೇಂದ್ರ ಕಾರಾಗೃಹದಲ್ಲಿರುವ ದರ್ಶನ್‌ ಈಗ ಟಿವಿ ಬೇಕೆಂದು ಡಿಮ್ಯಾಂಡ್‌ ಮಾಡಿದ್ದಾನೆ. ಇಷ್ಟು ದಿನ ಟಿವಿ ಸವಾಸವೇ ಬೇಡ ಎಂದು ಕೈ ಮುಗಿಯುತ್ತಿದ್ದ ದರ್ಶನ್ ಗೆ ಈಗ ಟಿವಿ ಬೇಕಂತೆ. ಚಾರ್ಜ್‌ಶೀಟ್ ಸಲ್ಲಿಕೆ ವಿಚಾರದ ಬಗ್ಗೆ   ದರ್ಶನ್ ಜೈಲು ಸಿಬ್ಬಂದಿ ಬಳಿ ಪದೇ ಪದೇ ಕೇಳಿದ್ದ. ಈಗ  ಮೇಲಾಧಿಕಾರಿಗಳಿಗೆ ಟಿವಿ ಬೇಕೆಂದು ಮನವಿ ಸಲ್ಲಿಸಿದ್ದಾನೆ. ಈ ಬಗ್ಗೆ ಸುವರ್ಣ ನ್ಯೂಸ್ ಗೆ ಜೈಲು ಸಿಬ್ಬಂದಿ ಮಾಹಿತಿ ನೀಡಿದ್ದಾರೆ.

ಹೈ ಸೆಕ್ಯೂರಿಟಿ ಸೆಲ್ ನಲ್ಲಿ ಊಟ ವಿತರಣೆ ವೇಳೆ ಸಿಬ್ಬಂದಿ ಬಳಿ  ದರ್ಶನ್ ಟಿವಿ ಬಗ್ಗೆ ಕೇಳಿದ್ದಾನೆ. ಜೈಲು ನಿಯಮದ ಪ್ರಕಾರ ಟಿವಿ ಕೊಡಬಹುದು ಹೀಗಾಗಿ ಟಿವಿ ಬೇಕು ಎಂದು ಮೇಲಾಧಿಕಾರಿಗಳಿಗೆ ದರ್ಶನ್ ಮನವಿ ಮಾಡಿದ್ದಾನೆ.

Tap to resize

Latest Videos

ದರ್ಶನ್ ಸಿನಿ ಜೀವನ 2027ಕ್ಕೆ ಅಂತ್ಯ ಎಂದ ಜೋತಿಷ್ಯ ಶಾಸ್ತ್ರ! ಸಿನೆಮಾ ಬಿಟ್ಟು ದಾಸನ ಹೊಸ ಜರ್ನಿ ಆರಂಭ!

ಸದ್ಯ ದರ್ಶನ್ ಸೆಲ್ ನಲ್ಲಿ ಟಿವಿ ಇಲ್ಲ,  ಈಗ ದರ್ಶನ್ ಸೆಲ್ ಗೆ ಟಿವಿ ಕೊಡುವ ಬಗ್ಗೆ  ಅಧಿಕಾರಿಗಳು ಯೋಚಿಸುತ್ತಿದ್ದಾರೆ. ಮೊದಲು ಟಿವಿ ವಿಚಾರ ತೆಗೆಯುತ್ತಿದಂತೆ ಸವಾಸ ಬೇಡ ಎನ್ನೋತ್ತಾ ಕೈ ಮುಗಿದು ಸೈಲೆಂಟ್ ಆಗಿದ್ದ ದರ್ಶನ್ ಈಗ ಟಿವಿ ಬೇಕು ಎಂದು ಬೇಡಿಕೆ ಇಟ್ಟಿರುವುದಕ್ಕೆ ಕಾರಣವಿದೆ. ಜಾರ್ಜ್ ಶೀಟ್ ಸಲ್ಲಿಕೆ ಬಗ್ಗೆ ಮಾಹಿತಿ ಸಿಗದ ಹಿನ್ನೆಲೆಯಲ್ಲಿ ಟಿವಿ ಕೇಳಿರುವ ದರ್ಶನ್. ಈ ಮೂಲಕ ಮಾಧ್ಯಮಗಳ ಮೂಲಕ ಚಾರ್ಜ್ ಶೀಟ್‌ ಬಗ್ಗೆ ತಿಳಿದುಕೊಳ್ಳಲು ದರ್ಶನ್‌ ಮುಂದಾಗಿದ್ದಾನೆ ಎನ್ನಲಾಗಿದೆ.

ಇನ್ನು ಶೌಚಾಲಯದ ಸಮಸ್ಯೆಯಾಗುತ್ತಿದೆ ಎಂದು ಸರ್ಜಿಕಲ್‌ ಚಯರ್‌ ಗೆ ಬೇಡಿಕೆ ಇಡಲಾಗಿತ್ತು. ಈ ಬೇಡಿಕೆಯನ್ನು ಒಪ್ಪಿದ ಜೈಲಾಧಿಕಾರಿಗಳು ದರ್ಶನ್‌ ಗೆ ಅದನ್ನು ಒದಗಿಸಿದ್ದಾರೆ. ಈಗ ಟಿವಿಗೆ ಬೇಡಿಕೆ ಇಟ್ಟಿರುವುದನ್ನು ನೆರವೇರಿಸುತ್ತಾರಾ? ಇಲ್ಲವೂ ಕಾದು ನೊಡಬೇಕಿದೆ.

4000 ಪುಟಗಳ ಆರೋಪಪಟ್ಟಿ ಸಲ್ಲಿಕೆಗೆ ಸಿದ್ಧತೆ:
ಕೊಲೆ ಪ್ರಕರಣ ಸಂಬಂಧ ಈ ವಾರದೊಳಗೆ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಕೆಯಾಗುವ ಸಾಧ್ಯತೆಯಿದೆ. ತನಿಖಾ ತಂಡವು ಪ್ರಕರಣದ ತನಿಖೆ ಸಂಬಂಧ ಈಗಾಗಲೇ ಆರೋಪಿಗಳ ಸುದೀರ್ಘ ವಿಚಾರಣೆ ನಡೆಸಿ ಹೇಳಿಕೆಗಳನ್ನು ದಾಖಲಿಸಿದೆ. ಅಂತೆಯೇ ಸಾಕ್ಷ್ಯದಾರರ ಹೇಳಿಕೆಗಳನ್ನು ದಾಖಲಿಸಿದೆ. ಇದರಲ್ಲಿ ಸಿಆರ್‌ಪಿಸಿ ಕಲಂ 164 ಅಡಿಯಲ್ಲಿ ನ್ಯಾಯಾಧೀಶರ ಎದುರೇ ಕೆಲವರ ಹೇಳಿಕೆಗಳನ್ನು ದಾಖಲಿಸಿ ಆರೋಪಿಗಳ ಕಾನೂನು ಕುಣಿಕೆ ಬಿಗಿಗೊಳಿಸಿದೆ.

ರೇಣುಕಾಸ್ವಾಮಿ‌ ಕುಟುಂಬಕ್ಕೆ ನ್ಯಾಯ ಕೊಡಿಸಲು ಕೋರ್ಟ್‌ನಲ್ಲಿ ಹೋರಾಟ: ಗೃಹ ಸಚಿವ ಪರಮೇಶ್ವರ

ಅಂತೆಯೇ ಘಟನಾ ಸ್ಥಳ, ಆರೋಪಿಗಳ ಮನೆಗಳು ಸೇರಿದಂತೆ ವಿವಿಧೆಡೆ ಸಂಗ್ರಹಿಸಿದ್ದ ವಸ್ತುಗಳು ಹಾಗೂ ಎಲೆಕ್ಟ್ರಾನಿಕ್‌ ಉಪಕರಣಗಳನ್ನು ವಿಧಿವಿಜ್ಞಾನ ಪ್ರಯೋಗಾಲಯ(ಎಫ್‌ಎಸ್‌ಎಲ್‌)ಕ್ಕೆ ಕಳುಹಿಸಿತ್ತು. ಮಡಿವಾಳದ ಎಫ್‌ಎಸ್‌ಎಲ್‌ ಹಾಗೂ ಹೈದರಾಬಾದ್‌ನ ಸಿಎಫ್‌ಎಸ್‌ಎಲ್‌ನಿಂದ ವರದಿಗಳು ತನಿಖಾ ತಂಡದ ಕೈ ಸೇರಿವೆ. ಹೀಗಾಗಿ ಪ್ರಕರಣದ ತನಿಖೆ ಬಹುತೇಕ ಮುಗಿದಿದ್ದು, ತನಿಖಾಧಿಕಾರಿ ನೂರಕ್ಕೂ ಅಧಿಕ ಸಾಕ್ಷ್ಯಗಳು ಒಳಗೊಂಡಂತೆ ಸುಮಾರು 4 ಸಾವಿರಕ್ಕೂ ಅಧಿಕ ಪುಟಗಳ ದೋಷಾರೋಪ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಲು ಸಿದ್ಧತೆ ನಡೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಆರೋಪಿಗಳು ಜೂ.8ರಂದು ಚಿತ್ರದುರ್ಗದ ರೇಣುಕಾಸ್ವಾಮಿಯನ್ನು ಚಿತ್ರದುರ್ಗದಿಂದ ಬೆಂಗಳೂರಿಗೆ ಕರೆತಂದು ಪಟ್ಟಣಗೆರೆಯ ಶೆಡ್‌ವೊಂದರಲ್ಲಿ ಕೂಡಿ ಹಾಕಿ ಚಿತ್ರಹಿಂಸೆ ನೀಡಿ ಕೊಲೆ ಮಾಡಿದ್ದರು. ಬಳಿಕ ಮೃತದೇಹವನ್ನು ಸುಮನಹಳ್ಳಿ ಜಂಕ್ಷನ್‌ ಸಮೀಪದ ರಾಜಕಾಲುವೆ ಬಳಿ ಎಸೆದು ಪರಾರಿಯಾಗಿದ್ದರು. ಜೂ.9ರಂದು ಅಪರಿಚಿತ ವ್ಯಕ್ತಿಯ ಮೃತದೇಹ ಪತ್ತೆಯಾದ ಹಿನ್ನೆಲೆಯಲ್ಲಿ ಕಾಮಾಕ್ಷಿಪಾಳ್ಯ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿತ್ತು.

ಈ ನಡುವೆ ಐವರು ಆರೋಪಿಗಳು ಹಣಕಾಸು ವಿಚಾರವಾಗಿ ತಾವೇ ರೇಣುಕಾಸ್ವಾಮಿಯನ್ನು ಕೊಲೆ ಮಾಡಿದ್ದಾಗಿ ಕಾಮಾಕ್ಷಿಪಾಳ್ಯ ಠಾಣೆಗೆ ತೆರಳಿ ಶರಣಾಗಿದ್ದರು. ಈ ಬಗ್ಗೆ ಅನುಮಾನಗೊಂಡ ಪೊಲೀಸರು, ಆರೋಪಿಗಳನ್ನು ತಮ್ಮದೇ ಶೈಲಿಯಲ್ಲಿ ವಿಚಾರಣೆ ಮಾಡಿದಾಗ ರೇಣುಕಾಸ್ವಾಮಿ ಕೊಲೆ ರಹಸ್ಯ ಬಯಲಾಗಿತ್ತು. ಬಳಿಕ ನಟ ದರ್ಶನ್‌, ಪ್ರೇಯಸಿ ಪವಿತ್ರಾಗೌಡ ಸೇರಿದಂತೆ ಒಟ್ಟು 17 ಮಂದಿ ಆರೋಪಿಗಳನ್ನು ಬಂಧಿಸಲಾಗಿತ್ತು.

click me!