ಮುಂಬೈನಲ್ಲಿ ಯುವತಿಯ ಕೊಲೆ: ಕಲಬುರಗಿ ಮೂಲದ ಆರೋಪಿ ಹೆಡೆಮುರಿ ಕಟ್ಟಿದ ಪೊಲೀಸರು..!

By Girish Goudar  |  First Published Aug 1, 2024, 11:50 AM IST

ಯುವತಿಯ ಶವ ಪತ್ತೆಯಾದ ನಾಲ್ಕು ದಿನಗಳ ನಂತರ ಆರೋಪಿಯನ್ನ ಕರ್ನಾಟಕದ ಕಲಬುರಗಿ ಜಿಲ್ಲೆಯಲ್ಲಿ ಬಂಧಿಸಲಾಗಿದ್ದು ನವಿ ಮುಂಬೈಗೆ ಕರೆತರಲಾಗುತ್ತಿದೆ ಎಂದು ಹೆಚ್ಚುವರಿ ಪೊಲೀಸ್ ಆಯುಕ್ತ ದೀಪಕ್ ಸಾಕೋರೆ ತಿಳಿಸಿದ್ದಾರೆ. ಯಶಶ್ರಿ ಶಿಂಧೆ ಕೊಲೆಯಾದ ಯುವತಿಯಾಗಿದ್ದಾಳೆ. 

ನವಿಮುಂಬೈ(ಆ.01):  ಉರಾನ್‌ನ ಕೊಟ್ನಾಕಾದಲ್ಲಿ ಪೆಟ್ರೋಲ್ ಪಂಪ್‌ನ ಹಿಂದಿನ ಪೊದೆಗಳಲ್ಲಿ 20 ವರ್ಷದ ಯುವತಿಯ ಶವ ಪತ್ತೆಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನ ಪೊಲೀಸರು ಬಂಧಿಸಿದ್ದಾರೆ. ಕರ್ನಾಟಕದ ಕಲಬುರಗಿ ಜಿಲ್ಲೆಯ ದೌದ್ ಶೇಖ್ ಬಂಧಿತ ಆರೋಪಿ. 

ಯುವತಿಯ ಶವ ಪತ್ತೆಯಾದ ನಾಲ್ಕು ದಿನಗಳ ನಂತರ ಆರೋಪಿಯನ್ನ ಕರ್ನಾಟಕದ ಕಲಬುರಗಿ ಜಿಲ್ಲೆಯಲ್ಲಿ ಬಂಧಿಸಲಾಗಿದ್ದು ನವಿ ಮುಂಬೈಗೆ ಕರೆತರಲಾಗುತ್ತಿದೆ ಎಂದು ಹೆಚ್ಚುವರಿ ಪೊಲೀಸ್ ಆಯುಕ್ತ ದೀಪಕ್ ಸಾಕೋರೆ ತಿಳಿಸಿದ್ದಾರೆ. ಯಶಶ್ರಿ ಶಿಂಧೆ ಕೊಲೆಯಾದ ಯುವತಿಯಾಗಿದ್ದಾಳೆ. 

Tap to resize

Latest Videos

undefined

ಕಲಬುರಗಿ: ಲಕ್ಷ ಲಕ್ಷ ಇದ್ರೂ ರಸ್ತೆ ಬದಿ ಮಲಗುತ್ತಿದ್ದ ಬಡ್ಡಿ ಬಸಮ್ಮನ ಕೊಂದಿದ್ಯಾರು?

ಜುಲೈ 25 ರಂದು ಯಶಶ್ರಿ ಶಿಂಧೆ ನಾಪತ್ತೆಯಾದ ದಿನದಂದು ಉರಾನ್ ಸ್ಟೇಷನ್ ರಸ್ತೆಯ ಸಿಸಿಟಿವಿ ಕ್ಯಾಮೆರಾಗಳಲ್ಲಿ ಶೇಖ್ ಅವರು ಹಿಂದೆ ನಡೆದುಕೊಂಡು ಹೋಗುತ್ತಿದ್ದ ಶೇಖ್‌ ನಾವು ಪ್ರಮುಖ ಶಂಕಿತ ಎಂದು ಪರಿಗಣಿಸಿದ್ದೇವೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಯುವತಿಯನ್ನ ಕೊಲೆ ಮಾಡಿರುವುದಾಗಿ ಆರೋಪಿ ಒಪ್ಪಿಕೊಂಡಿದ್ದಾನೆ. 

2019 ರಲ್ಲಿ ಉರಾನ್‌ನಲ್ಲಿ ವಾಸಿಸುತ್ತಿದ್ದಾಗ ಯಶಸ್ರಿಯನ್ನು ನಿರಾಕರಿಸಿದ್ದ, ಯಶಸ್ರಿಯನ್ನು ತನ್ನ ಊರಿನವನಾದ ತನ್ನ ಸ್ನೇಹಿತ ಮೊಹ್ಸಿನ್ ಜೊತೆ ಸಂಬಂಧ ಹೊಂದಿದ್ದಾಳೆ ಎಂದು ಶಂಕಿಸಿ ಕೊಲೆ ಮಾಡಿರುವುದಾಗಿ ಶೇಖ್ ಒಪ್ಪಿಕೊಂಡಿದ್ದಾನೆ ಎಂದು ಅಪರಾಧ ವಿಭಾಗದ ಅಧಿಕಾರಿ ತಿಳಿಸಿದ್ದಾರೆ.

click me!