ಪತ್ನಿಯ ಶೀಲ ಶಂಕಿಸಿ ಸನಿಕೆಯಿಂದ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ವಿಜಯಪುರ ಜಿಲ್ಲೆಯ ತಿಕೋಟ ತಾಲೂಕಿನ ಹುಬನೂರು ತಾಂಡಾ-2 ರಲ್ಲಿ ನಡೆದಿದೆ. ರೇಷ್ಮಾ ರಾಥೋಡ್(25) ಹತ್ಯೆಯಾದ ದುರ್ದೈವಿ. ಅಶೋಕ್ ರಾಠೋಡ್(33) ಕೊಲೆ ಮಾಡಿರುವ ಪತಿ
ವಿಜಯಪುರ (ಫೆ.18): ಪತ್ನಿಯ ಶೀಲ ಶಂಕಿಸಿ ಸನಿಕೆಯಿಂದ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ವಿಜಯಪುರ ಜಿಲ್ಲೆಯ ತಿಕೋಟ ತಾಲೂಕಿನ ಹುಬನೂರು ತಾಂಡಾ-2 ರಲ್ಲಿ ನಡೆದಿದೆ.
ರೇಷ್ಮಾ ರಾಥೋಡ್(25) ಹತ್ಯೆಯಾದ ದುರ್ದೈವಿ. ಅಶೋಕ್ ರಾಠೋಡ್(33) ಕೊಲೆ ಮಾಡಿರುವ ಪತಿ. ಕಳೆದ 11 ವರ್ಷಗಳ ಹಿಂದೆ ಮದುವೆಯಾಗಿತ್ತು. ದಂಪತಿಗಳಿಗೆ ಮೂವರು ಮಕ್ಕಳಿದ್ದರು. ಮದುವೆಯಾದ ಹೊಸದರಲ್ಲಿ ಚೆನ್ನಾಗಿಯೇ ಇದ್ದರು. ಕೆಲ ತಿಂಗಳಿನಿಂದ ಪತ್ನಿಯ ಮೇಲೆ ಅನೈತಿಕ ಸಂಬಂಧದ ಸಂಶಯ ಪಡುತ್ತಿದ್ದ ಪತಿ ಅಶೋಕ್. ಇದೇ ವಿಚಾರವಾಗಿ ಆಗಾಗ ಗಲಾಟೆ ದೈಹಿಕವಾಗಿ ಹಲ್ಲೆ ನಡೆಸುತ್ತಿದ್ದ.
ಚಿಕ್ಕಬಳ್ಳಾಪುರ: ಅಕ್ರಮ ಸಂಬಂಧ ಇಟ್ಟುಕೊಂಡಿದ್ದ ಮಹಿಳೆಯ ಕೊಲೆ ಮಾಡಿದ ಪ್ರಿಯಕರ
ಕುಡಿತದ ಚಟಕ್ಕೆ ಬಿದ್ದ ಪತಿ ಅಶೋಕ್. ಪತ್ನಿಯ ಶೀಲ ಶಂಕಿಸಿ ದಿನನಿತ್ಯ ಕುಡಿದು ಬಂದು ಗಲಾಟೆ ಮಾಡುತ್ತಿದ್ದ ಆಸಾಮಿ. ಕುಡಿದ ಮತ್ತಿನಲ್ಲಿ ಪತ್ನಿಗೆ ಮಾನಸಿಕ ದೈಹಿಕ ಹಿಂಸೆ ನೀಡುತ್ತಿದ್ದ ಆರೋಪಿ. ಗಂಡನ ಕಾಟ ತಾಳಲಾರದೆ ಹುಬನೂರಿನಲ್ಲಿದ್ದ ತನ್ನ ತವರು ಮನೆಗೆ ಹೋಗಿದ್ದ ರೇಷ್ಮಾ. ಆದರೆ ರೇಷ್ಮಾ ತವರುಮನೆಗೂ ಹೋಗಿರುವ ಪತಿ. ಅಲ್ಲಿಯೂ ಕುಡಿದು ಸನಿಕೆಯಿಂದ ಹೊಡೆದು ಪತ್ನಿಯನ್ನ ಬರ್ಬರವಾಗಿ ಹತ್ಯೆ ಮಾಡಿರುವ ಆರೋಪಿ. ಸದ್ಯ ಘಟನೆ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಹೆಂಡ್ತಿ ಜತೆ ಅಕ್ರಮ ಸಂಬಂಧ, ತಮ್ಮನ ಎದೆಗೆ ಚೂರಿ ಹಾಕಿ ಕೊಲೆಗೈದ ಅಣ್ಣ..!