ಹುಬ್ಬಳ್ಳಿ: ನೌಕರಿ ಕೊಡಿಸುವ ನೆಪದಲ್ಲಿ ಮಹಿಳೆಯನ್ನು ಮಂಚಕ್ಕೆ ಕರೆದ ಕಾಮುಕನ ಹೆಡೆಮುರಿ ಕಟ್ಟಿದ ಖಾಕಿ ಪಡೆ..!

By Girish GoudarFirst Published Sep 3, 2024, 3:17 PM IST
Highlights

ಉದ್ಯೋಗದ ಆಮಿಷವೊಡ್ಡಿ ಮಂಚಕ್ಕೆ ಕರೆದ ನದೀಂನನ್ನು ಮಹಿಳೆ ಪೊಲೀಸರ ಬಲೆಗೆ ಕೆಡವಿದ್ದಾಳೆ. ಈ ಮೂಲಕ ಚಪಲ ಚೆನ್ನಿಗರಾಯನಿಗೆ ಮಹಿಳೆ ತಕ್ಕ ಶಾಸ್ತಿ ಮಾಡಿದ್ದಾಳೆ. ಈ ಸಂಬಂಧ ಕೇಶ್ವಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

ಹುಬ್ಬಳ್ಳಿ(ಸೆ.03):  ನೌಕರಿ ಕೊಡಿಸುವ ನೆಪದಲ್ಲಿ ಮಹಿಳೆಯನ್ನು ಮಂಚಕ್ಕೆ ಕರೆದ ರೈಲ್ವೆ ನೌಕರನನ್ನ ಪೊಲೀಸರು ಬಂಧಿಸಿದ ಘಟನೆ ಇಂದು(ಮಂಗಳವಾರ) ನಡೆದಿದೆ. ನದೀಂ ಬಂಧನಕ್ಕೊಳಗಾದ ರೈಲ್ವೆ ನೌಕರ. 

ಬಂಧಿತ ನದೀಂ ನೈರುತ್ಯ ರೈಲ್ವೆ ವಿಭಾಗ ಮುಖ್ಯ ಕಚೇರಿಯಲ್ಲಿ ಆರ್ಥಿಕ ವಿಭಾಗದಲ್ಲಿ ಕ್ಲರ್ಕ್ ಆಗಿದ್ದ. ರೈಲ್ವೆ ಇಲಾಖೆಯಲ್ಲಿ ಕೆಲಸ ‌ಕೊಡಸ್ತಿನಿ, ನಿನ್ನ ಲೈಫ್‌ ಬದಲಾಯಿಸ್ತಿನಿ ಅಂತ ಮಹಿಳೆಯರಿಗೆ ಹೇಳ್ತಿದ್ದನಂತೆ. ಕೆಲಸ ಆಗಬೇಕೆಂದ್ರೆ ಮಂಚಕ್ಕೆ ಬರಬೇಕೆಂದು ಕಾಮುಕ ಕಂಡೀಷನ್ ಹಾಕ್ತಿದ್ದನಂತೆ. 

Latest Videos

"ಜೀವನದಲ್ಲಿ ಎಲ್ಲವನ್ನೂ ಮಾಡಿ, ಮದುವೆ ಮಾತ್ರ ಅಗಬೇಡಿ...", ಪತ್ನಿಯ ಕಿರುಕುಳಕ್ಕೆ ಬೇಸತ್ತು ಪತಿ ಆತ್ಮಹತ್ಯೆ

ಉದ್ಯೋಗದ ಆಮಿಷವೊಡ್ಡಿ ಮಂಚಕ್ಕೆ ಕರೆದ ನದೀಂನನ್ನು ಮಹಿಳೆ ಪೊಲೀಸರ ಬಲೆಗೆ ಕೆಡವಿದ್ದಾಳೆ. ಈ ಮೂಲಕ ಚಪಲ ಚೆನ್ನಿಗರಾಯನಿಗೆ ಮಹಿಳೆ ತಕ್ಕ ಶಾಸ್ತಿ ಮಾಡಿದ್ದಾಳೆ.  ರೈಲ್ವೆ ಗೆಸ್ಟ್ ಹೌಸ್‌ನಲ್ಲಿ ಮಹಿಳೆಗಾಗಿ ಕಾದು ಕುಳಿತ್ತಿದ್ದ ಕಾಮುಕ ಇದೀಗ ಪೋಲೀಸರ ಅತಿಥಿ ಆಗಿದ್ದಾನೆ. ಬಂಧಿತ ನದೀಂ ಸಾಮಾಜಿಕ ಜಾಲತಾಣದಲ್ಲಿ ರೈಲ್ವೆ ಜಾಬ್ ನೋಟಿಫಿಕೇಷನ್ ಪೇಜ್ ಕ್ರಿಯೆಟ್ ಮಾಡಿಕೊಂಡಿದ್ದಾನೆ. ಈತ ಕೆಲಸ ಅವಶ್ಯಕತೆ ಇರುವ ಹುಡುಗಿಯರು, ಮದುವೆಯಾದ ಹೆಣ್ಣುಮಕ್ಕಳನ್ನು ಟಾರ್ಗೆಟ್ ಮಾಡಿ ಅಂತವರಿಗೆ ಫೇಕ್ ನೋಟಿಫಿಕೇಷನ್ ಕಳುಹಿಸುತ್ತಿದ್ದ. ಬಳಿಕ ಅವರ ಸ್ನೇಹ ಸಂಪಾದಿಸಿ, ನಿಮಗೆ ಕೆಲಸ ಕೊಡಸ್ತಿನಿ ಅಂತಿದ್ದ. ನಿಮ್ಮ ಕೆಲಸ ಆಗಬೇಕಂದ್ರೆ ನಮ್ಮ ಹಿರಿಯ ಅಧಿಕಾರಿಗಳ ಜೊತೆಗೆ ಒಂದು ದಿನ ಕಳಬೇಕು ಅಂತ ಕಂಡಿಷನ್ ಹಾಕುತ್ತಿದ್ದ. ಬಳಿಕ ಇವರು ನಮ್ಮ ಆಫಿಸರ್ ಅಂತ ಫೇಕ್ ಐಡಿ ಕೊಟ್ಟು ತಾನೆ ಹುಡುಗಿಯರ ಜೊತೆ ಚಾಟ್ ಮಾಡಿ ಅವರನ್ನು ಬುಟ್ಟಿಗೆ ಹಾಕಿಕೊಳ್ಳುತ್ತಿದ್ದನಂತೆ. 

ಹುಬ್ಬಳ್ಳಿ ಕೇಶ್ವಾಪುರ ಮೂಲದ ಗೃಹಿಣಿಯೊಬ್ಬರಿಗೆ ಗಾಳ ಹಾಕಿದ್ದ ಬಂಧಿತ ನದೀಂ. ಗೃಹಿಣಿ ಜೊತೆ ಚಾಟ್ ಮಾಡಿ ಮಂಚಕ್ಕೆ ಕರೆದಿದ್ದ.  ದೆಹಲಿಯಿಂದ ಹುಬ್ಬಳ್ಳಿಗೆ ಬಂದಿದ್ದೇನೆ, ರೈಲ್ವೆ ಗೆಸ್ಟ್ ಹೌಸ್ ನಲ್ಲಿ ಉಳಿದುಕೊಂಡಿದ್ದೇನೆ, ರೂಂಗೆ ಬಾ ಅಂತ ಫೋಟೋ‌ ಕಳುಹಿಸಿದ್ದ, ಇದರಿಂದ ಭಯಗೊಂಡ ಮಹಿಳೆ ಮೊದಲು ತನ್ನ ಗಂಡನಿಗೆ ವಿಷಯ ತಿಳಿಸಿದ್ದರು.  ತಕ್ಷಣ ದಂಪತಿ ಕೇಶ್ವಾಪುರ ಠಾಣೆಯಲ್ಲಿ ದೂರು ನೀಡಿದ್ದರು. ದೂರಿನ ಮೇರೆಗೆ ಪೊಲೀಸರು ಗೃಹಿಣಿಯನ್ನು ಗೆಸ್ಟ್ ಹೌಸ್‌ಗೆ ಕಳುಹಿಸಿದ್ದರು. ಕೊನೆಗೆ ಕಾಮುಕ ನದೀಂನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.  

ಘಟನೆಗೆ ಸಂಬಂಧಿಸಿದಂತೆ ಮಾಹಿತಿ ನೀಡಿದ ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ಅವರು,  ನದೀಂ ಎಂಬಾತನನ್ನು ಬಂಧಿಸಿದ್ದೇವೆ. ಹೆಚ್ಚಿನ ವಿಚಾರಣೆಗೆ ಪೊಲೀಸ್ ಕಷ್ಟಡಿಗೆ ತೆಗೆಕೊಳ್ಳಲು ಹೇಳಿದ್ದೇನೆ. ಎಷ್ಟು ಮಹಿಳೆಯರಿಗೆ ಈತ ವಂಚಿಸಿದ್ದಾನೆ ಎಂಬಿತ್ಯಾದಿ ಕುರಿತು ತನಿಖೆ ನಡೆಸಿದ್ದೇವೆ. ನದೀಂ ಓರ್ವ ಐಎಎಸ್ ಅಧಿಕಾರಿಯ ಹೆಸರಿನಲ್ಲಿ ರೂಮ್ ಬುಕ್ ಮಾಡಿದ್ದ ಅಂಶ ಬೆಳಕಿಗೆ ಬಂದಿದೆ ಎಂದು ತಿಳಿಸಿದ್ದಾರೆ.  
ಈ ಸಂಬಂಧ ಕೇಶ್ವಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

click me!