Asianet Suvarna News Asianet Suvarna News

ಹುಬ್ಬಳ್ಳಿಯ ಯುವತಿ ಅಂಜಲಿ ಹತ್ಯೆಗೈದ ಗಿರೀಶನಿಗೆ ಕೊಲೆಗಾರ ಸ್ನೇಹಿತ ಶೇಷ್ಯಾನೇ ರೋಲ್ ಮಾಡೆಲ್!

ಹುಬ್ಬಳ್ಳಿಯಲ್ಲಿ ಬೆಳ್ಳಂಬೆಳಗ್ಗೆ ವೀರಾಪೂರ ಓಣಿಯಲ್ಲಿ ಬಡ ಕುಟುಂಬದ ಯುವತಿ ಅಂಜಲಿಯನ್ನು ಮನೆಯೊಳಗೆ ನುಗ್ಗಿ ಭೀಕರವಾಗಿ ಚಾಕು ಚುಚ್ಚಿ ಕೊಲೆ ಮಾಡಿದ ಆರೋಪಿ ಗಿರೀಶನಿಗೆ ಆತನ ಸ್ನೇಹಿತ ಶೇಷ್ಯಾ ಪ್ರೇರಣೆಯಾಗಿದ್ದ ಎಂಬುದು ತಿಳಿದುಬಂದಿದೆ.

Hubli anjali ambigera murder case accused was taken role model his criminal friend sat
Author
First Published May 15, 2024, 7:57 PM IST

ಹುಬ್ಬಳ್ಳಿ (ಮೇ 15): ಹುಬ್ಬಳ್ಳಿಯಲ್ಲಿ ಬೆಳ್ಳಂಬೆಳಗ್ಗೆ ವೀರಾಪೂರ ಓಣಿಯಲ್ಲಿ ಬಡ ಕುಟುಂಬದ ಯುವತಿ ಅಂಜಲಿಯನ್ನು ಮನೆಯೊಳಗೆ ನುಗ್ಗಿ ಭೀಕರವಾಗಿ ಚಾಕು ಚುಚ್ಚಿ ಕೊಲೆ ಮಾಡಿರುವ ಘಟನೆ ನಡೆದಿದೆ. ಆದರೆ, ಕೊಲೆ ಆರೋಪಿ ಗಿರೀಶನಿಗೆ ಕೊಲೆ ಮಾಡಲು ಆತನ ಸ್ನೇಹಿತ ಶೇಷ್ಯಾನೇ ಪ್ರೇರಣೆಯಾಗಿದ್ದ ಎಂಬುದು ತಿಳಿದುಬಂದಿದೆ.

ಹುಬ್ಬಳ್ಳಿಯಲ್ಲಿ ಪಾಗಲ್‌ ಪ್ರೇಮಿ ಫಯಾಜ್‌ಳಿಂದ ವಿದ್ಯಾರ್ಥಿನಿ ನೇಹಾ ಹಿರೇಮಠ ಕೊಲೆಯಾದ ಘಟನೆ ಮಾಸುವ ಮುನ್ನವೇ ಬುಧವಾರ ಬೆಳ್ಳಂಬೆಳಗ್ಗೆ ಬಡ ಕುಟುಂಬದ ಯುವತಿ ಅಂಜಲಿ ಅಂಬಿಗೇರ (20) ಮನೆಯಲ್ಲಿ ಮಲಗಿದ್ದಾಗಲೇ ಕೊಲೆಯಾಗಿದ್ದಾಳೆ. ಅಂಜಲಿಯನ್ನು ಪ್ರೀತಿಸುವಂತೆ ಪೀಡಿಸುತ್ತಿದ್ದ ಹಾಗೂ ತಾನು ಕರೆದಲ್ಲಿಗೆ ಬರಬೇಕೆಂದು ಬೆದರಿಕೆ ಹಾಕಿದ್ದ ಆರೋಪಿ ಗಿರೀಶ್ ಸಾವಂತ ಮನೆಯೊಳಗೆ ನುಗ್ಗಿ ಚಾಕು ಚುಚ್ಚಿದ್ದಾನೆ. ಈ ಘಟನೆಗೂ ಮುನ್ನವೇ ನನ್ನನ್ನು ಪ್ರೀತಿ ಮಾಡದಿದ್ದರೆ ನೇಹಾಳನ್ನು ಫಯಾಜ್ ಕೊಲೆ ಮಾಡಿದ ಮಾದರಿಯಲ್ಲಿಯೇ ನಿನ್ನನ್ನೂ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದನು. ಆದರೆ, ಈಗ ತಾನು ಹೇಳಿದಂತೆಯೇ ಚಾಕು ಚುಚ್ಚಿ ಕೊಲೆ ಮಾಡಿದ್ದಾನೆ.

ಹುಬ್ಬಳ್ಳಿ ನೇಹಾ ಮರ್ಡರ್ ಮಾದರಿಯಲ್ಲೇ, ಅಂಜಲಿಗೂ ಚಾಕು ಚುಚ್ಚಿ ಕೊಲೆಗೈದ ಪಾಗಲ್ ಪ್ರೇಮಿ!

ಅಂಜಲಿ ಕೊಲೆಗೆ ಪ್ರೇರಣೆಯಾಗಿದ್ದ ಸ್ನೇಹಿತ: ಅಂಜಲಿಯನ್ನು ಕೊಲೆ ಮಾಡುವ ಮುನ್ನ ಆರೋಪಿ ಗಿರೀಶ್ ತನ್ನ ಸ್ನೇಹಿತ ಶೇಷ್ಯಾನ ಕೊಲೆ ಮಾಡಿ ಜೈಲು ಸೇರಿದ್ದನ್ನೇ ಪ್ರೇರಣೆಯಾಗಿ ಪಡೆದುಕೊಂಡಿದ್ದನು. ಮೊದಲೇ ಬೈಕ್ ಕಳ್ಳತನ ಹಾಗೂ ಇತರೆ ಕ್ರಿಮಿನಲ್ ಪ್ರಕರಣದ ಹಿನ್ನೆಲೆಯನ್ನು ಹೊಂದಿದ್ದ ಗಿರೀಶ್ ಸಾವಂತ ಬಡ ಕುಟುಂಬದ ಹುಡುಗಿ ಅಂಜಲಿಗೆ ಪ್ರೀತಿಯ ನೆಪದಲ್ಲಿ ಕಿರುಕುಳ ನೀಡಿದ್ದಾನೆ. ಆಗ ಪ್ರೀತಿ ನಿರಾಕರಿಸಿದ ಅಂಜಲಿಗೆ ನೇಹಾಳನ್ನು ಕೊಲೆ ಮಾಡಿದ ರೀತಿ ಕೊಲೆ ಮಾಡುವುದಾಗಿ ತಿಳಿಸಿದ್ದಾನೆ. ನಂತರ, ಗಿರೀಶನ ಸ್ನೇಹಿತ ಶೆಶ್ಯಾ ಎನ್ನುವವನು ಹುಬ್ಬಳ್ಳಿ ಸಮೀಪದ ಬಿಡನಾಳ ಎಂಬಲ್ಲಿ ಸದ್ದಾಂ ಎನ್ನುವ ಯುವಕನನ್ನು ಕೊಲೆ ಮಾಡಿ ಜೈಲು ಸೇರಿದ್ದನು. ಇನ್ನು ಕೊಲೆ ಮಾಡಿ ಹೋದರೆ ಜೈಲಿನಲ್ಲಿಯೂ ಸ್ನೇಹಿತರಾಗಿ ಇರಬಹುದು ಎಂಬ ದೃಷ್ಟಿಯಿಂದ ಪ್ರೇರಣೆ ಪಡೆದಿದ್ದಾನೆ. ಇನ್ನು ಪ್ರೀತಿಗೆ ಒಪ್ಪದ ಮುಗ್ಧ ಯುವತಿ ಅಂಜಲಿಯನ್ನು ಭೀಕರವಾಗಿ ಕೊಲೆ ಮಾಡಿ ಪರಾರಿ ಆಗಿದ್ದಾನೆ.

Hubli: ಮಗಳು ನೇಹಾ ಕಳ್ಕೊಂಡ ನೋವಿನಲ್ಲಿಯೇ, ಅಂಜಲಿ ಕುಟುಂಬಕ್ಕೆ 1 ಲಕ್ಷ ರೂ. ನೆರವು ಕೊಟ್ಟ ನಿರಂಜನ ಹಿರೇಮಠ

ಅಂಜಲಿಯ ಹಂತಕನ ಪತ್ತೆಗೆ 2 ತಂಡಗಳ ರಚನೆ:
ಯುವತಿ ಅಂಜಲಿಯ ಕೊಲೆಯ ಬಗ್ಗೆ ಮಾಹಿತಿ ನೀಡಿದ ಹುಬ್ಬಳ್ಳಿಯಲ್ಲಿ ಪೊಲೀಸ್ ಕಮೀಷನರ್ ರೇಣುಕಾ ಸುಕುಮಾರ್ ಅವರು, ಇವತ್ತು ಬೆಳಗ್ಗೆ ಬೆಂಡಿಗೇರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಅಂಜಲಿ‌ ಅಂತ ಯುವತಿಯ ಹತ್ಯೆಯಾಗಿದೆ. ಗಿರೀಶ್ ಎಂಬಾತ ಮನೆಗೆ ಹೋಗಿ ಬಾಗಿಲು ಬಡಿದು ಒಳಗೆ ಹೋಗಿ ಚಾಕು ಹಾಕಿದ್ದಾನೆ. ಅಂಜಲಿಗೆ  4 ಬಾರಿ ದೇಹದ ಆಯಕಟ್ಟಿನ ಸ್ಥಳದಲ್ಲಿ ಚಾಕು ಇರಿದಿದ್ದಾನೆ. ಆರೋಪಿಯ ಪತ್ತೆಗಾಗಿ ಎರಡು ತಂಡಗಳನ್ನ ಇದಕ್ಕೆ ನೇಮಿಸಲಾಗಿದೆ. ಈ ಮೊದಲು ಪೊಲಿಸ್ ಠಾಣೆಗೆ ಅಂಜಲಿ ಕುಟುಂಬದವರು  ಬಂದಿದ್ದರ ಕುರಿತು ತನಿಖೆ ನಡೆಸುತ್ತಿದ್ದೇವೆ. ಈ ಕುರಿತಾಗಿ ಡಿಸಿಪಿ ಕ್ರೈಮ್ ಅವರಿಗೆ ಹೇಳಿದ್ದೇವೆ. ಆರೋಪಿಯ ಬಗ್ಗೆ ಎಲ್ಲಾ ಮಾಹಿತಿ ಕಲೆ ಹಾಕಿದ್ದೇವೆ. ಈಗಾಗಲೇ ತನಿಖೆ ನಡೆಯುತ್ತಿದೆ ಮುಂದಿನ ಮಾಹಿತಿಯನ್ನ ನಂತರ ತಿಳಿಸುತ್ತೇವೆ ಎಂದು ಹೇಳಿದರು.

Follow Us:
Download App:
  • android
  • ios