ಆಂಧ್ರದಲ್ಲಿ 'ಮರ್ಯಾದೆಗೇಡು ಹತ್ಯೆ', ಮಗಳ ರುಂಡ-ಮುಂಡ ಬೇರ್ಪಡಿಸಿದ ತಂದೆ!

By Santosh NaikFirst Published Feb 25, 2023, 2:46 PM IST
Highlights

ಬೇರೆ ಜಾತಿಯ ಹುಡುಗನನ್ನು ಪ್ರೀತಿಸುತ್ತಿದ್ದ ಸ್ವಂತ ಮಗಳನ್ನು ತಂದೆಯೊಬ್ಬ ಕೊಲೆ ಮಾಡಿದ ಘಟನೆ ಆಂಧ್ರಪ್ರದೇಶ ನಂದ್ಯಾಲ್‌ನಲ್ಲಿ ನಡೆದಿದೆ. ಮಗಳ ರುಂಡ-ಮುಂಡವನ್ನು ಬೇರ್ಪಡಿಸಿ ಕಾಡಿನಲ್ಲಿ ಎಸೆದು ಬಂದ ಮರ್ಯಾದಾ ಹತ್ಯೆ ಪ್ರಕರಣ ಇದಾಗಿದೆ.
 

ನವದೆಹಲಿ (ಫೆ.25):  ಆಂಧ್ರಪ್ರದೇಶದ ನಂದ್ಯಾಲ ಜಿಲ್ಲೆಯಲ್ಲಿ ಮರ್ಯಾದಾ ಹತ್ಯೆಯ ಪ್ರಕರಣ ಸಂಚಲನ ಮೂಡಿಸಿದೆ. ಬೇರೆ ಜಾತಿಯ ಹುಡುಗನನ್ನು ಪ್ರೀತಿ ಮದುವೆಯಾಗಿದ್ದ ಮಗಳನ್ನು ತಂದೆ ಸಿಟ್ಟಿನಲ್ಲಿ ಕೊಂದಿದ್ದಾನೆ. ಆಕೆಯ ರುಂಡ-ಮುಂಡವನ್ನು ಬೇರ್ಪಡಿಸಿ ಭೀಕರವಾಗಿ ಕೊಂದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಆಂಧ್ರಪ್ರದೇಶದ ನಂದ್ಯಾಲ ಜಿಲ್ಲೆಯ ಪಾಣ್ಯಂ ಮಂಡಲದಲ್ಲಿ ಈ ಘಟನೆ ನಡೆದಿದೆ. ಆದರೆ, ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ಪಾಣ್ಯಂ ಪೊಲೀಸರು ಈ ಘಟನೆಯ ವಿವರಗಳನ್ನು ತಿಳಿಸಿದ್ದಾರೆ. ಪಾಣ್ಯಂ ಮಂಡಲ ಆಲಮೂರಿನ ದೇವೇಂದ್ರ ರೆಡ್ಡಿ ಎಂಬುವವರಿಗೆ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಹಿರಿಯ ಮಗಳ ಹೆಸರು ಪ್ರಸನ್ನ (21). ಎರಡು ವರ್ಷಗಳ ಹಿಂದೆ ಸಾಫ್ಟ್‌ವೇರ್ ಇಂಜಿನಿಯರ್ ಜೊತೆ ವಿವಾಹವಾಗಿತ್ತು. ತಂದೆಯ ಇಷ್ಟದಂತೆ ನಡೆದ ಮದುವೆಯ ಬಳಿಕ ಪ್ರಸನ್ನ ಹೈದರಾಬಾದ್‌ನಲ್ಲಿ ವಾಸ ಮಾಡಲು ಆರಂಭಿಸಿದ್ದರು. ಮದುವೆಯಾಗಿ ಎರಡು ವರ್ಷದ ಬಳಿಕ ಹೈದರಾಬಾದಿನಿಂದ ಹಳ್ಳಿಗೆ ಬಂದು ತನ್ನ ಮನೆಯಲ್ಲಿ ವಾಸವಾಗಿದ್ದಳು. ಈ ವೇಳೆ ಮದುವೆಗೂ ಮುನ್ನ ಪ್ರೇಮ ಸಂಬಂಧ ಹೊಂದಿದ್ದವನ ಜೊತೆ ಸ್ನೇಹ ಸಂಬಂಧ ಬೆಳೆಸಿದ್ದಲ್ಲದೆ, ಹೈದರಾಬಾದ್‌ಗೆ ಹೋಗೋಕು ಮನಸ್ಸು ಮಾಡಿರಲಿಲ್ಲ. ಇದು ತಂದೆಗೆ ಇಷ್ಟವಾಗಿರಲಿಲ್ಲ. ಇದರಿಂದ ತನ್ನ ಪ್ರತಿಷ್ಠೆ ಹಾಳಾಗುತ್ತದೆ ಎಂದು ಕೋಪಗೊಂಡಿದ್ದರು. ಅದೇ ಕಾರಣಕ್ಕೆ ಇದೇ ತಿಂಗಳ 10 ರಂದು ದೇವೇಂದ್ರ ರೆಡ್ಡಿ ಮನೆಯಲ್ಲಿಯೇ ಮಗಳನ್ನು ಕತ್ತು ಹಿಸುಕಿ ಕೊಲೆ ಮಾಡಿದ್ದ.

ಬಳಿಕ ದೇವೇಂದ್ರ ರೆಡ್ಡಿ ಕೆಲವರ ಜತೆ ಸೇರಿ ಕಾರಿನಲ್ಲಿ ಮಗಳ ಶವವನ್ನು ನಂದ್ಯಾಲ-ಗಿದ್ದಲೂರು ಮಾರ್ಗದ ಅರಣ್ಯ ಪ್ರದೇಶಕ್ಕೆ ಕೊಂಡೊಯ್ದಿದ್ದಾರೆ. ಅಲ್ಲಿ ಮಗಳ ದೇಹದ ರುಂಡ ಹಾಗೂ ಮುಂಡವನ್ನು ಬೇರೆ ಮಾಡಿದ್ದಾರೆ. ರುಂಡವನ್ನು ಕಾಡಿನ ಒಂದು ಕಡೆ ಎಸೆದಿದ್ದರೆ, ಇನ್ನೊಂದು ಕಡೆ ಉಳಿದ ಭಾಗವನ್ನು ಎಸೆದು ಮನೆಗೆ ಬಂದಿದ್ದರು.

ಸೆಮಿಸ್ಟರ್‌ನಲ್ಲಿ ಫೇಲ್‌ ಮಾಡಿದ್ದಕ್ಕೆ ಪ್ರಿನ್ಸಿಪಾಲ್‌ ಮೇಲೆ ಪೆಟ್ರೋಲ್‌ ಸುರಿದ ಬೆಂಕಿ ಹಚ್ಚಿದ ವಿದ್ಯಾರ್ಥಿ!

ಅದಾದ ಬಳಿಕ ಏನೂ ಗೊತ್ತಿಲ್ಲದವನಂತೆ ಮನೆಗೆ ಮರಳಿದ್ದ. ಈ ವೇಳೆ ದೇವೇಂದ್ರ ರೆಡ್ಡಿ ಅವರ ತಂದೆ ಶಿವಾರೆಡ್ಡಿ ಮೊಮ್ಮಗಳು ಪ್ರಸನ್ನ ಎಲ್ಲಿದ್ದಾರೆ ಎಂದು ಪ್ರಶ್ನಿಸಲು ಪ್ರಾರಂಭಿಸಿದರು. ಕೊನೆಗೆ ದೇವೇಂದ್ರ ರೆಡ್ಡಿ ಕೊಲೆಯ ಬಗ್ಗೆ ತಪ್ಪೊಪ್ಪಿಕೊಂಡಿದ್ದಾನೆ. ಗುರುವಾರ ದೂರು ದಾಖಲಿಸಿಕೊಂಡ ಪೊಲೀಸರು ದೇವೇಂದ್ರ ರೆಡ್ಡಿಯನ್ನು ಬಂಧಿಸಿದ್ದಾರೆ.

ಒಂದೇ ಕುಟುಂಬದ ನಾಲ್ವರ ಹತ್ಯೆ ಪ್ರಕರಣ; ಇಬ್ಬರು ಆರೋಪಿಗಳು ಪೊಲೀಸರ ವಶಕ್ಕೆ

ಮಗಳ ದೇಹದ ಭಾಗವನ್ನು ನಲ್ಲಮಾಲಾ ಅರಣ್ಯದ ಬೊಗೊಡಾ ಸುರಂಗದ ಬಳಿ ಎಸೆದಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಮರಣೋತ್ತರ ಪರೀಕ್ಷೆಗಾಗಿ ಶವವನ್ನು ನಂದ್ಯಾಲಾ ಸರ್ಕಾರಿ ಆಸ್ಪತ್ರೆಗೆ ಕಳಿಸಲಾಗಿದೆ.
 

click me!