ಶರಣರ ನಾಡಲ್ಲಿ ಮರ್ಯಾದಾ ಹತ್ಯೆ: ಹುಡುಗಿ ತಂದೆಯಿಂದಲೇ ಕೆಳಜಾತಿ ಯುವಕನ ಹತ್ಯೆ

By Sathish Kumar KH  |  First Published Jun 25, 2023, 2:06 PM IST

ಅಕ್ಕಪಕ್ಕದ ಮನೆಯಲ್ಲಿದ್ದು ಪರಸ್ಪರ ಪ್ರೀತಿಗೆ ಜಾತಿಯ ನೆಪವೊಡ್ಡಿ ಅಡ್ಡಿಪಡಿಸಿದ ಯುವತಿ ಮನೆಯವರು, ಯುವಕನ ಮೇಲೆ ಭೀಕರ ಹಲ್ಲೆ ಮಾಡಿ ಕೊಲೆ ಮಾಡಿರುವ ಆರೋಪ ಕೇಳಿಬಂದಿದೆ.


ಕಲಬುರಗಿ (ಜೂ.25): ಇಬ್ಬರೂ ಒಂದೇ ಊರಿನವರಾಗಿದ್ದು, ಅಕ್ಕ-ಪಕ್ಕದಲ್ಲಿ ಮನೆಯನ್ನು ಹೊಂದಿದ್ದ ಯವಕ - ಯುವತಿ ಪರಸ್ಪರ ಪ್ರೀತಿಸುತ್ತಿದ್ದರು. ಆದರೆ, ಅಂತರ್ಜಾತಿ ಪ್ರೀತಿಗೆ ವಿರೋಧಿಸಿದ ಯುವತಿ ಕುಟುಂಬಸ್ಥರು ಯುವಕ ಹಾಗೂ ಅವರ ಮನೆಯವರನ್ನು ಥಳಿಸಿದ್ದರು. ಕೊನೆಗೆ, ಯುವಕನನ್ನು ಎಳೆದುಕೊಂಡು ನೇಣುಬಿಗಿದು ಕೊಲೆ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

ಜಗತ್ತಿಗೆ ಮೊದಲು ಸಮಾನತೆಯ ಸಂದೇಶವನ್ನು ಸಾರಿದ ಶರಣರ ನಾಡಲ್ಲಿ ಇಂದಿಗೂ ಅತರ್ಜಾತಿ ವಿವಾಹ ವಿರೋಧಿಸಿ ಮರ್ಯಾದಾ ಹತ್ಯೆಗಳು ನಡೆಯುತ್ತಿವೆ. ಇಬ್ಬರೂ ಒಂದೇ ಗ್ರಾಮದವರಾಗಿದ್ದು, ಅಕ್ಕ-ಪಕ್ಕದಲ್ಲಿ ಮನೆಯನ್ನು ಹೊಂದಿದ್ದ ಯವಕ - ಯುವತಿ ಪರಸ್ಪರ ಪ್ರೀತಿಸುತ್ತಿದ್ದರು. ಆದರೆ, ಈ ಪ್ರೀತಿಗೆ ಜಾತಿ ಅಡ್ಡ ಬಂದಿದ್ದು, ಯುವಕನಿಗೆ ಹುಡುಗಿ ಮನೆಯವರು ಹಲ್ಲೆ ಮಾಡಿದ್ದಾರೆ. ಕೊಲೆ ಬೆದರಿಕೆಯಿಂದ ಗ್ರಾಮವನ್ನೇ ಬಿಟ್ಟು ಬೆಂಗಳೂರಿಗೆ ಹೋಗಿ ಕೆಲಸ ಮಾಡಿಕೊಂಡಿದ್ದ ಯುವಕ, ಯುವತಿಯ ಸಂಪರ್ಕ ಬಿಟ್ಟಿರಲಿಲ್ಲ. ಹೀಗಾಗಿ, ಬೆಂಗಳೂರಿನಿಂದ ಹುಡುಗನನ್ನು ಊರಿಗೆ ಕರೆಸಿಕೊಂಡು ಮನಸೋ ಇಚ್ಛೆ ಹಲ್ಲೆ ಮಾಡಿ ಕೊಲೆ ಮಾಡಿದ್ದಾರೆ ಎಂಬ ಆರೋಪ ವ್ಯಕ್ತವಾಗಿದೆ.

Tap to resize

Latest Videos

undefined

ಮಳೆಗಾಗಿ ಸ್ಮಶಾನದಲ್ಲಿ ಹೂತಿದ್ದ ಶವದ ಬಾಯಿಗೆ ನೀರು ಬಿಟ್ಟ ಗ್ರಾಮಸ್ಥರು

ಕಲಬುರಗಿ ತಾಲ್ಲೂಕಿನ ಹೊನ್ನಕಿರಣಗಿ ಗ್ರಾಮದಲ್ಲಿ ಘಟನೆ ನಡೆದಿದೆ. ಗುರುಲಿಂಗಪ್ಪ ಮುಗಟಿ (26) ನೇಣು ಬಿಗಿದ ಸ್ಥಿತಿಯಲ್ಲಿ ಶವ ಪತ್ತೆಯಾಗಿದೆ. ಪಕ್ಕದ ಮನೆಯ ಯುವತಿಯನ್ನ ಗುರುಲಿಂಗಪ್ಪ ಪ್ರೀತಿಸುತ್ತಿದ್ದನು. ಅಂತರ್ಜಾತಿ ಪ್ರೀತಿಗೆ ಯುವತಿಯ ಮನೆಯವರ ವಿರೋಧ ವ್ಯಕ್ತವಾಗಿತ್ತು. ಗುರುಲಿಂಗಪ್ಪ ಪ್ರೀತಿಗೆ ಯುವತಿಯ ಮನೆಯವರ ವಿರೋಧ ವ್ಯಕ್ತವಾಗಿ ವಾರ್ನಿಂಗ್‌ ಕೂಡ ಮಾಡಿದ್ದರು. ಯುವತಿಯ ತಂದೆ ವಾರ್ನ್ ಬೆನ್ನಲ್ಲೆ ಯುವಕ ಗುರುಲಿಂಗಪ್ಪ ಊರು ಬಿಟ್ಟು ಬೆಂಗಳೂರು ಸೇರಿದ್ದನು. ಆದರೂ, ನಿರಂತರವಾಗಿ ಪ್ರೀತಿ ಮುಂದುವರೆಸಿದ್ದರು.

ಕದ್ದು, ಮುಚ್ಚಿ ಪ್ರೀತಿ ಮುಂದುವರೆಸಿದ್ದ ಜೋಡಿ:  ಹುಡುಗನಿಗೆ ಎಚ್ಚರಿಕೆ ನೀಡಿದ್ದರೂ ಕದ್ದು - ಮುಚ್ಚಿ ಪ್ರೀತಿ ಮಾಡುತ್ತಿದ್ದ ಹಿನ್ನೆಲೆಯಲ್ಲಿ ಯುವತಿಗೆ ಮನೆಯಲ್ಲಿ ಥಳಿಸಿದ್ದಾರೆ. ನಂತರ, ಯುವಕನನ್ನು ಕರೆಸುವಂತೆ ಸೂಚನೆ ನೀಡಿದ್ದಾರೆ. ಯುವತಿ ತಾನು ಪ್ರೀತಿ ಮಾಡುತ್ತಿದ್ದ ಯುವಕ ಗುರುಲಿಂಗಪ್ಪಗೆ ಕರೆ ಮಾಡಿ ಕಲಬುರಗಿಗೆ ಬರುವಂತೆ ಹೇಳಿದ್ದಾಳೆ. ಗುರುಲಿಂಗಪ್ಪ ಊರಿಗೆ ಬಂದಿರುವ ವಿಚಾರ ತಿಳಿದ ಯುವತಿ ಕುಟುಂಬ ಯುವಕ ಮತ್ತು ಸಹೋದರ ಮೇಲೆ ಹಲ್ಲೆ ಮಾಡಿದೆ. ಕಲ್ಲು, ಬಡಿಗೆ ಹಾಗೂ ಕಬ್ಬಿಣದ ರಾಡ್ ನಿಂದ ಹಲ್ಲೆ ಮಾಡಿದ್ದಾರೆ. ನಂತರ, ಯುವಕ ಗುರುಲಿಂಗಪ್ಪನನ್ನ ಮನೆಯಲ್ಲಿ ಕೂಡಿ ಹಾಕಿದ್ದರು. ಆದರೆ, ಗಲಾಟೆ ಬಳಿಕ ಯುವತಿ ಪೋಷಕರು ಕೂಡಿ ಹಾಕಿದ್ದ ಮನೆಯಲ್ಲಿ ಯುವಕನ ಶವ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ.

ಕೌಟುಂಬಿಕ ಕಲಹ ಹಿನ್ನೆಲೆ: ಪತ್ನಿಯನ್ನ ಅಟ್ಟಾಡಿಸಿ ಕತ್ತಿಯಿಂದ ಹಲ್ಲೆ ಮಾಡಿದ ಪಾಪಿ ಪತಿ..!

ಯುವತಿಯ ತಂದೆ ಬಂಧನ:  ಇನ್ನು ಈ ಘಟನೆ ಕುರಿತಂತೆ ಕಲಬುರಗಿ ನಗರದ ಫರಹತಾಬಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಆಗಿದೆ. ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಶವ ಪರಿಶೀಲನೆ ಮಾಡಿ ಆಸ್ಪತ್ರೆಗೆ ರವಾನಿಸಿದ್ದಾರೆ. ಇನ್ನು ಶವದ ಮೇಲೆ  ಗಾಯದ ಕಲೆಗಳು ಹೆಚ್ಚಾಗಿದ್ದವು. ಯುವಕನನ್ನು ಕೊಲೆ ಮಾಡಿ ನೇಣು ಹಾಕಲಾಗಿದೆ ಎಂಬ ಆರೋಪ ಕೇಳಿಬಂದಿದೆ. ಹಲ್ಲೆ ಮಾಡಿದ ಯುವತಿಯ ತಂದೆ ಬಸವರಾಜ್ ಬಂಧನ ಮಾಡಲಾಗಿದೆ.

click me!