ಮಂಡ್ಯದಲ್ಲಿ ನಿಲ್ಲದ ಹೆಣ್ಣು ಭ್ರೂಣ ಹತ್ಯೆ ದಂಧೆ: ತೋಟದ ಮನೆ ಮೇಲೆ ದಾಳಿ, ಮೂವರ ಬಂಧನ..!

By Girish Goudar  |  First Published Aug 16, 2024, 9:33 AM IST

ಮಂಡ್ಯ ಜಿಲ್ಲೆ ನಾಗಮಂಗಲ ತಾಲ್ಲೂಕಿನ ಮಾವಿನಕೆರೆ ಗ್ರಾಮದ ತೋಟದ ಮನೆಯಲ್ಲಿ ನಡೆಯುತ್ತಿದ್ದ ಹೆಣ್ಣು ಭ್ರೂಣ ಪತ್ತೆ, ಹತ್ಯೆ ದಂಧೆಯ ಮೇಲೆ ಆರೋಗ್ಯ ಇಲಾಖೆಯ ಅಧಿಕಾರಿಗಳು ರೇಡ್ ಮಾಡಿದ್ದಾರೆ. ಭ್ರೂಣ ಲಿಂಗ ಪತ್ತೆ ಮಾಡುತಿದ್ದಾಗಲೇ ದಾಳಿ ಮಾಡಿದ ಅಧಿಕಾರಿಗಳು 
 


ಮಂಡ್ಯ(ಆ.16):  ಮಂಡ್ಯದಲ್ಲಿ ಹೆಣ್ಣು ಭ್ರೂಣ ಹತ್ಯೆ ದಂಧೆ ನಿಲ್ಲುವ ಯಾವುದೇ ಲಕ್ಷಣಗಳು ಕಾಣಿಸುತ್ತಿಲ್ಲ. ಹೌದು, ಸಕ್ಕರೆ ನಾಡಲ್ಲಿ ಕರಾಳ ದಂಧೆ ಬೇರೂರಿದೆ. ಆಲೆಮನೆ, ಹೆಲ್ತ್ ಕ್ವಾರ್ಟಸ್ ಬಳಿಕ ಇದೀಗ ತೋಟದ ಮನೆಯಲ್ಲೂ ಹೆಣ್ಣು ಭ್ರೂಣ ಹತ್ಯೆ ಕೃತ್ಯ ಬೆಳಕಿಗೆ ಬಂದಿದೆ. 

ಮಂಡ್ಯ ಜಿಲ್ಲೆ ನಾಗಮಂಗಲ ತಾಲ್ಲೂಕಿನ ಮಾವಿನಕೆರೆ ಗ್ರಾಮದ ತೋಟದ ಮನೆಯಲ್ಲಿ ನಡೆಯುತ್ತಿದ್ದ ಹೆಣ್ಣು ಭ್ರೂಣ ಪತ್ತೆ, ಹತ್ಯೆ ದಂಧೆಯ ಮೇಲೆ ಆರೋಗ್ಯ ಇಲಾಖೆಯ ಅಧಿಕಾರಿಗಳು ರೇಡ್ ಮಾಡಿದ್ದಾರೆ. ಭ್ರೂಣ ಲಿಂಗ ಪತ್ತೆ ಮಾಡುತಿದ್ದಾಗಲೇ ಅಧಿಕಾರಿಗಳು ದಾಳಿ ಮಾಡಿದ್ದಾರೆ. 

Tap to resize

Latest Videos

ಸ್ಕ್ಯಾನಿಂಗ್ ಸುಳಿವು ನಿಗೂಢ: ಮಂಡ್ಯದಲ್ಲಿ ಹೆಣ್ಣು ಭ್ರೂಣ ಹತ್ಯೆ ನಿರಂತರ

ನಿನ್ನೆ ತಡ‌ ರಾತ್ರಿ ಡಿಹೆಚ್ಓ ಡಾ.ಮೋಹನ್ ‌ನೇತೃತ್ವದಲ್ಲಿ ಆರೋಗ್ಯ ಇಲಾಖೆಯ ಅಧಿಕಾರಿಗಳು ದಾಳಿ ಮಾಡಿದ್ದಾರೆ. ದಾಳಿ ವೇಳೆ ಅಬಾರ್ಷನ್ ಕಿಟ್, ಸ್ಕ್ಯಾನಿಂಗ್ ಮಷಿನ್ ಪತ್ತೆಯಾಗಿವೆ. ದಾಳಿ ವೇಳೆ ಹಾಸನ ಮೂಲದ ಗರ್ಭಿಣಿ ಮಹಿಳೆ ಸ್ಥಳದಲ್ಲಿ‌ದ್ದರು. ಭ್ರೂಣ ಲಿಂಗ ಪತ್ತೆಗಾಗಿ ಈ ಗ್ಯಾಂಗ್ ಗರ್ಭಿಣಿ ಮಹಿಳೆಯನ್ನ ಕರೆತಂದಿದ್ದರು. 

ದಾಳಿ ವೇಳೆ ಪೊಲೀಸರು ಅಬಾರ್ಷನ್ ಕಿಟ್, ಸ್ಕ್ಯಾನಿಂಗ್ ಮಷಿನ್ ಸೀಜ್ ಮಾಡಿದ್ದಾರೆ. ಸ್ಕ್ಯಾನಿಂಗ್ ಮಾಡುತ್ತಿದ್ದ ಪ್ರಮುಖ ಆರೋಪಿ ಅಭಿಲೇಕ್ ಎಸ್ಕೇಪ್ ಆಗಿದ್ದಾನೆ. ಈ ಪ್ರಕರಣದಲ್ಲಿ ಮೂವರನ್ನ ಬಂಧಿಸಲಾಗಿದೆ.  ಮನೆಯ ಮಾಲೀಕ ಧನಂಜಯ್, ಆರೋಗ್ಯ ಇಲಾಖೆಯ ಗ್ರೂ ಡಿ ನೌಕರೆ, ಗರ್ಭಿಣಿಯ ಪತಿಯನ್ನ ಪೊಲೀಸರು ಬಂಧಿಸಿದ್ದಾರೆ. ಈ ಹಿಂದೆ ಆಲೆಮನೆ ಹಾಗೂ ಹೆಲ್ತ್ ಕ್ವಾಟ್ರಸ್ ನಲ್ಲಿ ಹೆಣ್ಣು ಭ್ರೂಣ ಪತ್ತೆ, ಹತ್ಯೆ ದಂಧೆ ನಡೆಯುತ್ತಿತ್ತು. 
 

click me!