* ಹಳೇ ಹುಬ್ಬಳ್ಳಿ ವ್ಯಾಪ್ತಿಯಲ್ಲಿ ನಡೆದ ಘಟನೆ
* ಚಾಕು, ತಲ್ವಾರ್‌ನಿಂದ ಹೊಡೆದ ದುಷ್ಕರ್ಮಿಗಳು
* ಈ ಸಂಬಂಧ ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲು
ಹುಬ್ಬಳ್ಳಿ(ಜು.05): ಗ್ರಾಮ ಪಂಚಾಯಿತಿ ಸದಸ್ಯನನ್ನ ಚಾಕು, ತಲ್ವಾರ್ ನಿಂದ ಹೊಡೆದ ದುಷ್ಕರ್ಮಿಗಳು ಬರ್ಬರವಾಗಿ ಹತ್ಯೆ ಮಾಡಿದ ಘಟನೆ ಹಳೇ ಹುಬ್ಬಳ್ಳಿ ವ್ಯಾಪ್ತಿಯಲ್ಲಿ ನಿನ್ನೆ(ಸೋಮವಾರ) ತಡರಾತ್ರಿ ನಡೆದಿದೆ. ರಾಯನಾಳ ಗ್ರಾಪಂ ಗಂಗಿವಾಳ ವಾರ್ಡ್ ಸದಸ್ಯ ದೀಪಕ ಶಿವಾಜಿ ಪಟಾದಾರಿ (32) ಎಂಬುವರೇ ಕೊಲೆಯಾದ ದುರ್ದೈವಿಯಾಗಿದ್ದಾರೆ.
ಸೋಮವಾರ ತಡರಾತ್ರಿ ದೀಪಕ ಶಿವಾಜಿ ಪಟಾದಾರಿಗೆ ಚಾಕು, ತಲ್ವಾರ್ ನಿಂದ ದುಷ್ಕರ್ಮಿಗಳು ಹೊಡೆದಿದ್ದರು. ಇದರಿಂದ ತೀವ್ರವಾಗಿ ಗಾಯಗೊಂಡಿದ್ದ ದೀಪಕ ಶಿವಾಜಿ ಪಟಾದಾರಿ ಅವರನ್ನ ಕಿಮ್ಸ್‌ಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ ಅಂತ ತಿಳಿದು ಬಂದಿದೆ.
'ತುಂಬಾ ಒಳ್ಳೆ ಕೆಲಸ ಮಾಡಿದ್ದಿ ಬ್ರದರ್': ಫೇಸ್‌ಬುಕ್‌ನಲ್ಲಿ ಕನ್ಹಯ್ಯಾ ಹತ್ಯೆ ವಿಡಿಯೋ ಹೊಗಳಿದ ವ್ಯಕ್ತಿ ಬಂಧನ!
ಕೊಲೆ ಮಾಡಿದ ಆರೋಪಿಗಳಣನ್ನ ಪ್ರವೀಣ್ ಮುದಲಿಂಗನವರ, ಯಲ್ಲಪ್ಪ ಮೇಟಿ, ಗ್ರಾಪಂ ಸದಸ್ಯ ರುದ್ರಪ್ಪ ಮೇಟಿ, ಮಲ್ಲಿಕಾರ್ಜುನ ಮೇಟಿ, ಶಿವು ಮೇಟಿ ಅಂತ ಗುರುತಿಸಲಾಗಿದೆ. ಒಂದೂವರೆ ವರ್ಷದ ಹಿಂದೆ ಮೇಟಿ ಕುಟುಂಬದ ಯುವತಿ ಜೊತೆ ಲವ್ ಮ್ಯಾರೇಜ್, ಈಚೆಗೆ ಗ್ರಾಪಂ ಅಧ್ಯಕ್ಷ, ಉಪಾಧ್ಯಕ್ಷರ ಮೇಲಿನ ಅವಿಶ್ವಾಸ ನಿರ್ಣಯದಲ್ಲಿ ಪಾಲ್ಗೊಂಡಿದ್ದ ಹಿನ್ನೆಲೆಯಲ್ಲಿ ದೀಪಕ ಶಿವಾಜಿ ಪಟಾದಾರಿಯನ್ನ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಈ ಸಂಬಂಧ ಮೃತನ ಸಹೋದರ ಸಂಜಯ ಪಟಾದಾರಿಯಿಂದ ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.