ಬೀದರ್ ಜಿಲ್ಲೆಯಲ್ಲಿ ಹೃದಯವಿದ್ರಾವಕ ಘಟನೆ ನಡೆದಿದೆ. ಕಿಡಿಗೇಡಿಗಳು ಭ್ರೂಣ ಹತ್ಯೆ ಮಾಡಿ ಮಗುವಿಗೆ ಶವ ರಸ್ತೆ ಬದಿಯಲ್ಲಿ ಬಿಸಾಡಿ ಹೋಗಿದ್ದಾರೆ.
ಬೀದರ್ (ಜು.24): ಬೀದರ್ ಜಿಲ್ಲೆಯಲ್ಲಿ ಹೃದಯವಿದ್ರಾವಕ ಘಟನೆ ನಡೆದಿದೆ. ಕಿಡಿಗೇಡಿಗಳು ಭ್ರೂಣ ಹತ್ಯೆ ಮಾಡಿ ಮಗುವಿಗೆ ಶವ ರಸ್ತೆ ಬದಿಯಲ್ಲಿ ಬಿಸಾಡಿ ಹೋಗಿದ್ದಾರೆ. ಬೀದರ್ ಜಿಲ್ಲೆಯ ಹುಲಸೂರ ತಾಲೂಕಿನ ಗುತ್ತಿ ಗ್ರಾಮದ ಬಳಿ ಘಟನೆ ನಡೆದಿದ್ದು, ಹೊಟ್ಟೆಯಲ್ಲಿರುವ ಮಗುವನ್ನು ಭ್ರೂಣ ಹತ್ಯೆ ಮಾಡಿ ರಸ್ತೆ ಬದಿಯಲ್ಲಿ ಬಿಸಾಡಿ ಕ್ರೌರ್ಯ ಮೆರೆದಿದ್ದಾರೆ.
ಜು.23ರ ರಾತ್ರಿ 10 ಗಂಟೆಗೆ ಘಟನೆ ಬೆಳಕಿಗೆ ಬಂದಿದೆ. ಕೂಡಲೃ ಸ್ಥಳಕ್ಕೆ ಭೇಟಿ ನೀಡಿದ ಹುಲಸೂರ ಪೊಲೀಸ್ ಠಾಣೆಯ ಪೊಲೀಸರು, ಪರಿಶೀಲನೆ ನಡೆಸಿದ್ದಾರೆ. ಹುಲಸೂರಿಮ ಸಾರ್ವಜನಿಕ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆ ಮಾಡಲಾಗಿದೆ.
ಭ್ರೂಣ ಹತ್ಯೆಯಲ್ಲಿ ಮೃತಪಟ್ಟ ಮಗುವಿಗೆ ಕೇವಲ 4 ತಿಂಗಳು ಆಗಿರಬಹುದು. ಅಲ್ಲದೆ ಹೆಣ್ಣು ಮಗು ಎಂದು ಹೇಳಲಾಗುತ್ತಿದೆ. ಈ ಕುರಿತು ಹುಲಸೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಯ್ಯೋ ಪಾಪಿಗಳಾ! ಮದ್ಯ ಸೇವನೆಗೆ 6 ತಿಂಗಳ ಕಂದಮ್ಮನನ್ನೇ ಮಾರಿದ ತಂದೆ -
5000 ಸಾಲ ಕೊಡಿಸಿದವನ ಬರ್ಬರ ಕೊಲೆ
ಜೇವರ್ಗಿ: ರು.5000 ಸಾಲ ಕೊಡಿಸಿದ ವ್ಯಕ್ತಿಯೊಬ್ಬನನ್ನು ಮಾರಕಾಸ್ತ್ರಗಳಿಂದ ಹೊಡೆದು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಜೇವರ್ಗಿ ತಾಲೂಕಿನ ಮದರಿ ಗ್ರಾಮದಲ್ಲಿ ನಡೆದಿದೆ.
ಅಶೋಕ ಪ್ಯಾಟಿ ಕೊಲೆಯಾದ ವ್ಯಕ್ತಿಯಾಗಿದ್ದಾನೆ. ಅಶೋಕ ಪ್ಯಾಟಿ ಮಧ್ಯಸ್ಥಿಕೆ ವಹಿಸಿ ಜಾನಪ್ಪ ಹಾಲಗಡ್ಲ ಎಂಬಾತನಿಂದ ಮತ್ತೊಬ್ಬರಿಗೆ ರು.5000 ಸಾಲ ಕೊಡಿಸಿದ್ದ. ಸಾಲ ನೀಡಿದ ಹಣ ಮರಳಿ ಕೊಡಿಸುವಂತೆ ಜಾನಪ್ಪ ಹಾಲಗಡ್ಲ ಅಶೋಕಗೆ ಪೀಡಿಸಿದ್ದ. ಇದೇ ವಿಷಯಕ್ಕೆ ಜಗಳ ನಡೆದು ಅಶೋಕನನ್ನು ಬರ್ಬರವಾಗಿ ಕೊಲೆ ಮಾಡಲಾಗಿದೆ ಎಂದು ತಿಳಿದು ಬಂದಿದೆ. ಈ ಸಂಬಂಧ ಮೃತನ ಪತ್ನಿ ಶಾರದಾ ಪ್ಯಾಟಿ ಜಾನಪ್ಪ ಹಾಲಗಡ್ಲ ವಿರುದ್ಧ ಜೇವರ್ಗಿ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದಾರೆ.
Love Jihad: ಹಿಂದೂ ಮಹಿಳೆಯೊಂದಿಗೆ ಫೇಸ್‌ಬುಕ್ ಲವ್: ರೇಪ್ ಮಾಡಿ ಗರ್ಭಪಾತ
ಸುದ್ದಿ ತಿಳಿದು ಡಿವೈಎಸ್ಪಿ, ಸಿಪಿಐ ಪರಶುರಾಮ ವನಜರ್ಕ, ಪಿಎಸ್‌ಐ ಸಂಗಮೇಶ ಅಂಗಡಿ ಮತ್ತು ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಜೇವರ್ಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆದಿದೆ.