ಮಹಿಳೆ ಕೊಲೆಯಾದ ಕಥೆ ಕಟ್ಟಿದ ಕೊಲೆಗಡುಕರು ಮೂರು ವರ್ಷಗಳ ಬಳಿಕ ಸೆರೆಯಾಗಿದ್ದಾರೆ. ವಿಠ್ಠಲ್ ಲಕ್ಷಣ ಬಂಗಿ, ಸಿದಗೊಂಡ ಕಂಬಳಿ, ಲಕ್ಕಪ್ಪ ಕಂಬಳಿ, ಬಸವರಾಜ್ ಕಬ್ಬೂರೆ, ಅಶೋಕ್ ಮೊಕಾಶಿ ಕೊಲೆ ಆರೋಪಿಗಳು.
ಬೆಳಗಾವಿ(ಅ.21): ಮಹಿಳೆಯನ್ನು ಮಾಡಿ ಕಾಣೆಯಾದ ಕಥೆ ಕಟ್ಟಿದ್ದ ಪ್ರಕರಣವನ್ನು ಬೇಧಿಸಿರುವ ಮೂಡಲಗಿ ಪೊಲೀಸರು ಪ್ರಕರಣ ಸಂಬಂಧಿಸಿದ ಐವರು ಆರೋಪಿಗಳನ್ನು ಬಂಧಿಸಿದ್ದಾರೆ. ಶಿವಲೀಲಾ ವಿಠ್ಠ ಲ ಬಂಗಿ (32) ಹತ್ಯೆಗೀಡಾಗಿದ್ದ ಮಹಿಳೆ.
ಮಹಿಳೆ ಕೊಲೆಯಾದ ಕಥೆ ಕಟ್ಟಿದ ಕೊಲೆಗಡುಕರು ಮೂರು ವರ್ಷಗಳ ಬಳಿಕ ಸೆರೆಯಾಗಿದ್ದಾರೆ. ವಿಠ್ಠಲ್ ಲಕ್ಷಣ ಬಂಗಿ, ಸಿದಗೊಂಡ ಕಂಬಳಿ, ಲಕ್ಕಪ್ಪ ಕಂಬಳಿ, ಬಸವರಾಜ್ ಕಬ್ಬೂರೆ, ಅಶೋಕ್ ಮೊಕಾಶಿ ಕೊಲೆ ಆರೋಪಿಗಳು.
ವಿಠ್ಠಲ ಬಂಗಿ ಕೊಲೆಯಾದ ಶಿವಲೀಲಾ ಪತಿ. ಲಕ್ಕಪ್ಪ ಕಂಬಳಿ, ಸಿದಗೊಂಡ ಕಂಬಳಿ ಕೊಲೆಯಾದ ಶಿವಲೀಲಾ ಸಹೋದರರು. ಶಿವಲೀಲಾ ನಡೆತೆ ಸರಿಯಿಲ್ಲ ಎಂಬ ಕಾರಣಕ್ಕೆ ಆಕೆಯ ಪತಿ ಮತ್ತು ಸಹೋದರರೇ 2020 ಜನವರಿಯಲ್ಲಿ ಕೊಲೆ ಮಾಡಿ ಸವದತ್ತಿ ತಾಲೂಕಿನ ಹಿರೇಬುದುನೂರು ಗ್ರಾಮದ ಅರಣ್ಯ ಪ್ರದೇಶದಲ್ಲಿ ಶವ ಬಿಸಾಕಿದ್ದರು. ಕೊಲೆ ಮಾಡಿ ಏನೂ ಅರಿಯದಂತೆ ಶೀವಲೀಲಾ ಸಹೋದರರು ಮತ್ತು ಪತಿ ಇದ್ದರು. ಮೂರು ವರ್ಷಗಳ ಬಳಿಕ ಶಿವಲೀಲಾ ತಲೆ ಬುರುಡೆ ಮಾತ್ರ ಪತ್ತೆಯಾಗಿದೆ.
ಬೆಳಗಾವಿ: ಹುಲಿ ಬೇಟೆಯಾಡಿ ವಿದೇಶಕ್ಕೆ ಮಾರಾಟ ಮಾಡ್ತಿದ್ದ ಆರೋಪಿ ಸೆರೆ
ಶಿವಲೀಲಾ ರಾಯಬಾಗದ ಖಾಸಗಿ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದಳು. ಆಕೆಯ ಕೊಲೆ ಮಾಡಿ ಕ್ರೂಸರ್ ವಾಹನದಲ್ಲಿ ಹೆಣ ಸಾಗಿಸಿದ್ದರು. ಮೂಡಲಗಿ ತಾಲೂಕಿನ ಜೊಕ್ಕಾನಟ್ಟಿ ಗ್ರಾಮ ಶಿವಲೀಲಾ ತವರೂರು. ಸಹೋದರ ಲಕ್ಕಪ್ಪ ಕಂಬಳಿ ತನ್ನ ಸಹೋದರಿ ಕಾಣೆಯಾಗಿದ್ದಾಳೆ ಎಂಬ ದೂರನ್ನು ಮೂಡಲಗಿ ಪೊಲೀಸ್ ಠಾಣೆಗೆ ನೀಡಿದ್ದ. ಸಂಶಯಗೊಂಡ ಪೊಲೀಸರು ಲಕ್ಕಪ್ಪನನ್ನು ವಿಚಾರಿಸಿದ ವೇಳೆ ಕೊಲೆ ಮಾಡಿರುವ ವಿಚಾರವನ್ನು ಬಾಯ್ಬಿಟ್ಟಿದ್ದಾನೆ. ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಈ ಕುರಿತು ಮೂಡಲಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.